ಅರವಿಂದ್ ಟಿ-ಶರ್ಟ್ ಬಿಚ್ಚಿ ದಿವ್ಯಾ ಉರುಡಗಗೆ ತೋರಿಸಿದ್ದೇನು?

Public TV
2 Min Read
FotoJet 21

ಬಿಗ್‍ಬಾಸ್ ಕಾರ್ಯಕ್ರಮ ಆರಂಭವಾದಗದಿಂದಲೂ ಏಕಾಂಗಿಯಾಗಿ ಅಥವಾ ಟಿಂ ಮೂಲಕ ಆಟವಾಡುತ್ತಿದ್ದ ಸ್ಪರ್ಧಿಗಳು, ಈ ವಾರ ಜೋಡಿಗಳಾಗಿ ಆಟವಾಡುತ್ತಿದ್ದಾರೆ. ಇದೀಗ ಮನೆಯ ಎಲ್ಲಾ ಜೋಡಿಗಳ ಪೈಕಿ ಸ್ಟ್ರಾಂಗೆಸ್ಟ್ ಜೋಡಿ ಎಂದರೆ ಅದು ದಿವ್ಯಾ ಉರುಡುಗ ಹಾಗೂ ಅರವಿಂದ್. ಈ ವಾರ ಜೋಡಿಯಾದ ಇವರಿಬ್ಬರ ನಡುವೆ ಇದೀಗ ಬಿಗ್‍ಬಾಸ್ ಮನೆಯಲ್ಲಿ ಸ್ವಲ್ಪ ಪಿಸು ಪಿಸು ಮಾತು ನಡೆಯುತ್ತಿದೆ.

divya aravind 2

ನಿನ್ನೆ ದೊಡ್ಮನೆ ಬೆಡ್ ರೂಮ್ ಏರಿಯಾದಲ್ಲಿ ಏಕಾಂಗಿಯಾಗಿ ಕುಳಿತಿದ್ದ ಈ ಜೋಡಿ ಒಬ್ಬರಿಗೊಬ್ಬರು ತಮ್ಮ ದೇಹದಲ್ಲಿರುವ ಮಚ್ಚೆಗಳ ಬಗ್ಗೆ ಚರ್ಚಿಸಿದ್ದಾರೆ. ನಿಮ್ಮ ಕೈನಲ್ಲಿ ಇದೊಂದೆ ಟ್ಯಾಟೂ ಇರುವುದಾ ಎಂದು ದಿವ್ಯಾ ಅರವಿಂದ್‍ಗೆ ಕೇಳುತ್ತಾರೆ. ಈ ವೇಳೆ ಅರಂವಿದ್ ಇಲ್ಲ ಭುಜದ ಮೇಲೆ ಸ್ಟಾರ್ ಟ್ಯಾಟುವೊಂದಿದೆ ಎಂದು ತೋರಿಸುತ್ತಾರೆ. ಅದಕ್ಕೆ ದಿವ್ಯಾ ನಾನು ಕೇವಲ ಒಂದು ಟ್ಯಾಟೂ ಮಾತ್ರ ಹಾಕಿಸಿಕೊಂಡಿದ್ದೇನೆ ಎನ್ನುತ್ತಾರೆ.

divya aravind

ಬಳಿಕ ನನ್ನ ಎರಡು ಕಿವಿಗಳಲ್ಲಿ ಎರಡು ಹೋಲ್‍ಗಳಿವೆ ಎಂದು ದಿವ್ಯಾ ಹೇಳಿದಾಗ, ಅರವಿಂದ್ ನನ್ನ ಒಂದು ಕಿವಿಯಲ್ಲಿ ಒಂದು ಹೋಲ್ ಮತ್ತೊಂದರಲ್ಲಿ ಎರಡು ಹೋಲ್‍ಗಳಿಗೆ ಎನ್ನುತ್ತಾರೆ. ಮಚ್ಚೆ ಬಗ್ಗೆ ದಿವ್ಯಾ ಪ್ರಶ್ನಿಸಿದಾಗ, ಅರವಿಂದ್ ನನ್ನ ಬೆನ್ನ ಹಿಂದೆ ಒಂದು ಮಚ್ಚೆ ಇದೆ. ನನ್ನ ಮೊಣ ಕೈ ಮೇಲೆ ಹುಟ್ಟಿದ ಮಚ್ಚೆ ಇದೆ ಎಂದು ಹೆಳುತ್ತಾ, ಟಿ-ಶರ್ಟ್ ಬಿಚ್ಚಿ ಅರವಿಂದ್ ದಿವ್ಯಾ ಉರುಡಗೆ ಮಚ್ಚೆ ತೋರಿಸಿದರು. ದಿವ್ಯಾ ಹಾ ಹೌದು ನಿಮಗೆ ಮೇಲೊಂದು ಕೆಳಗೊಂದು ಎರಡು ಮಚ್ಚೆ ಬೆನ್ನ ಹಿಂದೆ ಇದೆ ಎಂದು ಹೇಳುತ್ತಾರೆ. ನಂತರ ದಿವ್ಯಾ ನನ್ನ ಮುಖದ ಮೇಲೊಂದು ಮಚ್ಚೆ, ಕೈಬೆರಳ ಮೇಲೊಂದು, ಭುಜದ ಮೇಲೊಂದು ಮಚ್ಚೆ ಎಂದು ಹೇಳುತ್ತಾರೆ.

divya aravind 1ನಂತರ ನಾನು ನಾಲ್ಕನೇ ತರಗತಿ ಇದ್ದಾಗ ಶಾಟ್‍ಪೂಟ್ ನನ್ನ ಕಾಲಿನ ಮೇಲೆ ಬಿದ್ದು ಕಾಲು ಬೆರಳಿಗೆ ಆಪರೇಷನ್ ಆಗಿದೆ ಎಂದು ದಿವ್ಯಾ ಹೇಳುತ್ತಾರೆ. ಆಗ ಅರವಿಂದ್ ನನ್ನ ದೇಹದಲ್ಲಿ 16 ಸ್ಕ್ರೂ, ಒಂದು ರಾಡ್ ಹಾಗೂ ಒಂದು ಪ್ಲೇಟ್ ಇದೆ ಎಂಬ ವಿಚಾರವನ್ನು ಬಹಿರಂಗ ಪಡಿಸುತ್ತಾರೆ. ಇದನ್ನು ಕೇಳಿ ದಿವ್ಯಾ ಅಚ್ಚರಿಯಿಂದ ನೀವು ಮನುಷ್ಯರ ಅಥವಾ ರೋಬೋಟ್ ಹಾ ಎಂದು ಹೇಳುತ್ತಾ ಹಾಸ್ಯ ಮಾಡಿ ಅದೇ ಒಂದು ಕೆಜಿ ಇದ್ಯಾ ಎಂದು ಪ್ರಶ್ನಿಸುತ್ತಾರೆ.

divya aravind 3

ಒಟ್ಟಾರೆ ಇಷ್ಟು ದಿನ ಮಂಜು ದಿವ್ಯಾ ಸುರೇಶ್ ಜೋಡಿ ಸುದ್ದಿಯಾಗಿದ್ದ ದೊಡ್ಮನೆಯಲ್ಲಿ ಇನ್ಮುಂದೆ ಅರವಿಂದ್ ದಿವ್ಯಾ ಸದ್ದು ಮಾಡುವ ಎಲ್ಲಾ ಲಕ್ಷಣಗಳು ಕಾಣಬರುತ್ತಿದೆ ಎಂದರೆ ತಪ್ಪಾಗಲಾರದು.

Share This Article
Leave a Comment

Leave a Reply

Your email address will not be published. Required fields are marked *