ನವದೆಹಲಿ: ವಿಶ್ವ ಪ್ರಸಿದ್ಧ ತಾಜ್ ಮಹಲ್ ವೀಕ್ಷಿಸಲು ಬರುವ ದೇಶೀಯ ಹಾಗೂ ವಿದೇಶಿ ಪ್ರವಾಸಿಗಳಿಗೆ ಪ್ರವೇಶ ದರವನ್ನು ಹೆಚ್ಚಿಸಲು ಆಗ್ರಾ ಆಡಳಿತ ನಿರ್ಧರಿಸಿದೆ.
ತಾಜ್ ಮಹಲ್ ವೀಕ್ಷಿಸಲು ಬರುತ್ತಿದ್ದ ದೇಶೀಯ ಪ್ರವಾಸಿಗಳಿಗೆ 50ರೂ. ಇದ್ದ ಟಿಕೆಟ್ ದರವನ್ನು ಇದೀಗ 80 ರೂ. ಹಾಗೂ ವಿದೇಶಿ ಪ್ರವಾಸಿಗಳಿಗೆ 1,100 ರೂ. ಇದ್ದ ಟಿಕೆಟ್ ದರವನ್ನು 1,200ಕ್ಕೆ ಏರಿಸಲಾಗುತ್ತದೆ. ಇದನ್ನು ಹೊರತು ಪಡಿಸಿ ಎಡಿಎ ಕೂಡ ಗುಮ್ಮಟ ಪ್ರವೇಶಿಸಲು ಪ್ರವಾಸಿಗರಿಗೆ 200 ರೂ. ಹೆಚ್ಚುವರಿಯಾಗಿ ವಿಧಿಸಲಾಗುತ್ತಿದೆ ಎಂದು ಆಗ್ರಾದ ವಿಭಾಗೀಯ ಆಯುಕ್ತ ಅಮಿತ್ ಗುಪ್ತಾ ತಿಳಿಸಿದ್ದಾರೆ.
ಮುಖ್ಯ ಗುಮ್ಮಟ ಪ್ರವೇಶಿಸಲು ಬಯಸುವ ದೇಶೀಯ ಪ್ರವಾಸಿಗರು 480 ರೂ.ವನ್ನು ಮತ್ತು ವಿದೇಶಿ ಪ್ರವಾಸಿಗರು 1,600ರೂ. ವನ್ನು ಪಾವತಿಸಬೇಕಾಗುತ್ತದೆ.