ಇದೇ ನನ್ನ ಕೊನೆ ಪೋಸ್ಟ್ -ಸೋಶಿಯಲ್ ಮೀಡಿಯಾ ತೊರೆದ ಮಿ.ಪರ್ಫೆಕ್ಟ್

Public TV
1 Min Read
aamir khan

ಮುಂಬೈ: ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್ ಆಮಿರ್ ಖಾನ್ ಸೋಶಿಯಲ್ ಮೀಡಿಯಾ ತೊರೆಯುತ್ತಿರೋದಾಗಿ ಪೋಸ್ಟ್ ಮಾಡಿದ್ದಾರೆ. ಇನ್‍ಸ್ಟಾಗ್ರಾಂ, ಟ್ವಿಟ್ಟರ್ ಮತ್ತು ಫೇಸ್‍ಬುಕ್ ನಲ್ಲಿ ಇದೇ ನನ್ನ ಕೊನೆಯ ಪೋಸ್ಟ್ ಎಂದು ಬರೆದುಕೊಂಡಿದ್ದಾರೆ.

aamir khan

ಭಾನುವಾರ ಬರ್ತ್ ಡೇ ಆಚರಿಸಿಕೊಂಡಿದ್ದ ದಂಗಲ್ ಹೀರೋಗೆ ಶುಭಾಶಯದ ಮಹಾಪೂರವೇ ಹರಿದು ಬಂದಿತ್ತು. ಇಂದು ತಮಗೆ ಶುಭಕೋರಿದ ಎಲ್ಲ ಸಹದ್ಯೋಗಿ, ಆಪ್ತ ಮತ್ತು ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ. ನಿಮ್ಮ ಹಾರೈಕೆ ಮತ್ತು ಪ್ರೀತಿಯ ಸಂದೇಶಗಳಿಂದ ಹೃದಯ ತುಂಬಿ ಬಂತು. ಸೋಶಿಯಲ್ ಮೀಡಿಯಾದಲ್ಲಿ ಇದು ನನ್ನ ಕೊನೆಯ ಪೋಸ್ಟ್ ಆಗಿರಲಿದೆ. ನಾವು ಮೊದಲಿನಂತೆ ಭೇಟಿಯಾಗೋಣ. ಆಮಿರ್ ಖಾನ್ ಪ್ರೊಡಕ್ಷನ್ ಹೊಸ ಚಾನೆಲ್ ಆರಂಭಿಸಲಿದ್ದು, ಮುಂದಿನ ದಿನಗಳಲ್ಲಿ ಈ ವಾಹಿನಿ ಮೂಲಕ ನಿಮ್ಮೊಂದಿಗೆ ಸಂಪರ್ಕದಲ್ಲಿರುತ್ತೇನೆ ಎಂದು ಹೇಳಿದ್ದಾರೆ.

AAMIR 1

ಆಮಿರ್ ಖಾನ್ ಸಿನಿಮಾ ಹೊರತಾಗಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲ್ಲ. ಪ್ರಶಸ್ತಿ ಸಮಾರಂಭಗಳಿಂದಲೂ ಆಮಿರ್ ದೂರ ಇರಲು ಇಷ್ಟಪಡುತ್ತಾರೆ. ಫೇಸ್‍ಬುಕ್, ಟ್ವಿಟ್ಟರ್, ಇನ್‍ಸ್ಟಾ ಖಾತೆ ಹೊಂದಿದ್ದರೂ ಆಮಿರ್ ಸಕ್ರಿಯವಾಗಿರಲಿಲ್ಲ. ಅಪರೂಪಕ್ಕೆ ಎಂಬಂತೆ ತಮ್ಮ ಸಿನಿಮಾದ ಮಾಹಿತಿ, ವೈಯಕ್ತಿಕ ಬದುಕು, ತೆರೆ ಹಿಂದಿನ ಮಸ್ತಿ ವೀಡಿಯೋ ಮತ್ತು ಹಳೆಯ ನೆನಪುಗಳನ್ನ ಹಂಚಿಕೊಳ್ಳುತ್ತಿದ್ದರು. ಇದೀಗ ಸೋಶಿಯಲ್ ಮೀಡಿಯಾದಿಂದ ದೂರವಾಗಿರುವ ವಿಷಯ ತಿಳಿಸಿದ್ದು, ಅಭಿಮಾನಿಗಳು ನಿರಾಸೆಗೊಂಡಿದ್ದಾರೆ.

https://twitter.com/aamir_khan/status/1371417964939898882

Share This Article
Leave a Comment

Leave a Reply

Your email address will not be published. Required fields are marked *