ಲ್ಯಾಗ್ ಮಂಜುಗೆ ಸಾಂಗ್ ಡೆಡಿಕೇಟ್ ಮಾಡಿ ನಿಧಿ ಕಕ್ಕಾಬಿಕ್ಕಿ!

Public TV
2 Min Read
FotoJet 18

ಬಿಗ್‍ಬಾಸ್ ಕಾರ್ಯಕ್ರಮ ಪ್ರಾರಂಭವಾದಾಗಿನಿಂದಲೂ ದೊಡ್ಮನೆಯಲ್ಲಿ ಲ್ಯಾಂಗ್ ಮಂಜುದೇ ಭಾರೀ ಸದ್ದು. ಬಿಗ್‍ಬಾಸ್ ಮನೆ ಮಂದಿಗೆಲ್ಲಾ ಮೋಡಿ ಮಾಡಿರುವ ಮಂಜುಗೆ ನಿನ್ನೆ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ನಿಧಿ ಸುಬ್ಬಯ್ಯ ಹಾಡೊಂದನ್ನು ಡೆಡಿಕೇಟ್ ಮಾಡಿದ್ದಾರೆ.

biggboss 8

ಹೌದು. ನಿನ್ನೆ ಕಿಚ್ಚ ಸುದೀಪ್, ನಿಧಿ ಸುಬ್ಬಯ್ಯರವರಿಗೆ ಯಾವುದಾದರೂ ಒಂದು ಕನ್ನಡದ ಹಾಡನ್ನು ಹೇಳಲು ಸೂಚಿಸುತ್ತಾರೆ. ಈ ವೇಳೆ ರವಿಚಂದ್ರನ್ ಅಭಿನಯದ ರಾಮಾಚಾರಿ ಸಿನಿಮಾದ ‘ಆಕಾಶದಾಗೆ ಯಾರೋ ಮಾಯಾಗಾರನು..’ ಎಂಬ ಹಾಡನ್ನು ಹಾಡುತ್ತಾರೆ. ಇದನ್ನು ಮನೆಯ ಯರಾದರೂ ಒಬ್ಬ ಸದಸ್ಯರಿಗೆ ಡೆಡೆಕೇಟ್ ಮಾಡಿ ಎಂದರೆ ಯಾರಿಗೆ ಮಾಡುತ್ತೀರಾ ಎಂದು ಪ್ರಶ್ನಿಸಿದಾಗ ನಿಧಿ ಲ್ಯಾಂಗ್ ಮಂಜು ಹೆಸರನ್ನು ತೆಗೆದುಕೊಳ್ಳುತ್ತಾರೆ.

sudeep 3

ಆಗ ಸುದೀಪ್ ಯಾಕೆ ಎಲ್ಲರೂ ಮಂಜು ಹೆಸರನ್ನೆ ಸೂಚಿಸುತ್ತೀರಾ? ನನಗೆಲ್ಲೋ ಮಂಜುಗೆ ಮದುವೆಯಾಗಿದೆ. ಹಾಗಾಗಿ ಅವರ ಹೆಸರನ್ನು ಸೂಚಿಸಿದರೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸೂಚಿಸುತ್ತೀರಾ ಎಂದು ಕೇಳುತ್ತಾರೆ. ಆಗ ನಿಧಿ ಮಂಜುಗೆ ಮದುವೆಯಾಗಿದ್ದೀಯಾ ಎಂದು ಗೊಂದಲಕ್ಕೊಳಗಾಗುತ್ತಾರೆ. ಈ ವೇಳೆ ಕಿಚ್ಚ ಹಾ.. ಅವರಿಗೆ ಮದುವೆಯಾಗಿರುವುದು ನಿಮಗೆ ಗೊತ್ತಿಲ್ಲವಾ.. ಎಂದು ಪ್ರಶ್ನಿಸುತ್ತಾರೆ. ಬಳಿಕ ಮನೆಯ ಸದಸ್ಯರೆಲ್ಲರೂ ಮಂಜು ಹಾಗೂ ದಿವ್ಯಾ ಸುರೇಶ್‍ರ ಮುಖವನ್ನು ನೋಡಿ ನಗುತ್ತಾರೆ. ಏಕೆಂದರೆ ಈ ಹಿಂದೆ ಮಂಜು ಮತ್ತು ದಿವ್ಯಾ ಕತ್ತಿಗೆ ಹಾಕಿಕೊಂಡಿದ್ದ ಮೈಕ್‍ನನ್ನು ಬದಲಾಯಿಸಿಕೊಂಡಿದ್ದರು. ಆಗ ಮಂಜು ನಮ್ಮಿಬ್ಬರಿಗೂ ಮದುವೆಯಾಯಿತು ಎಂದು ಹೇಳಿದ್ದರು.

FotoJet 1 12

ಈ ವೇಳೆ ಒಂದು ಸೆಕೆಂಡ್ ಮಂಜು ಕೂಡ ಮೊದಲಿಗೆ ಕಕ್ಕಾಬಿಕ್ಕಿಯಾಗಿದ್ದರು. ಬಳಿಕ ನೆನಪಿಸಿಕೊಂಡು ಮಂಜು ಅರ್ಥವಾಯಿತು ಒಕೆ ಒಕೆ ಎಂದು ಹೇಳುತ್ತಾರೆ. ನಂತರ ಕಿಚ್ಚ ನಾನು ಹೇಳಿದ್ದು ಕೇಳಿ ನಿಮ್ಮ ಫ್ಯೂಚರ್‍ರೆ ಹಾಳಾಗುತ್ತಿದೆ ಎಂದು ಅನಿಸಿರಬಹುದಲ್ಲವಾ? ಮಾಡ್ಲಾ ಎಂದು ಪ್ರಶ್ನಿಸುತ್ತಾರೆ ಆಗ ಮಂಜು ಬೇಡ ಸರ್ ನಾನೇ ಮಾಡಿಕೊಳ್ಳುತ್ತೇನೆ ಎಂದು ಹಾಸ್ಯಮಯವಾಗಿ ನುಡಿದರು.

nidhi subbaiah

ನಂತರ ಕಿಚ್ಚ ನಿಮ್ಮ ಮದುವೆಯಾಗದೇ ಇರಬಹುದು ಆದರೆ ಒಂದೆರಡು ಒಳ್ಳೆಯ ವಿಚಾರ ನನಗೆ ತಿಳಿದಿದೆ. ಬಹಿರಂಗವಾಗಿ ಹೇಳಲೇ ಎಂದಾಗ ಮಂಜು ಬೇಡ ಸರ್.. ನಾನು ಮಾಡಿದ್ದು ಕೇವಲ ತಮಾಷೆಗಾಗಿ ಅಷ್ಟೇ ಬೇರೆ ಏನೂ ಇಲ್ಲ ಎಂದು ಹೇಳಿತ್ತಾರೆ. ಮಂಜು ಮುಖಭಾವದಲ್ಲಿ ಆದ ಬದಲಾವಣೆ ನೋಡಿ ಕಿಚ್ಚ ಹೊಟ್ಟೆ ಹುಣ್ಣಾಗುವಂತೆ ನಗುತ್ತಾರೆ.

FotoJet 2 8

ನೀವು ಮಾಡಿದ ತಮಾಷೆಗಳಲ್ಲಿ ಒಂದೆರಡು ಬಿಗ್‍ಬಾಸ್ ಮನೆಯತ್ತ ಹುಡುಕಿಕೊಂಡು ಓಡಾಡುತ್ತಿದ್ದಾರೆ. ಒಳಗೆ ಕಳುಹಿಸುವುದೇ ಎನ್ನುತ್ತಾರೆ. ಬೇಡ ಸರ್ ನಾನು ಇಲ್ಲಿ ಇರುತ್ತೇನೆ ಅವರು ಅಲ್ಲೇ ಇರಲಿ. ನಾನು ಖುಷಿಯಾಗಿ ಇಲ್ಲೆ ಚೆನ್ನಾಗಿ ಇದ್ದೇನೆ ಎಂದು ಹೇಳುವ ಮೂಲಕ ನಗೆ ಚಟಾಕಿ ಹರಿಸಿದರು.

ಒಟ್ಟಾರೆ ಮಂಜು ಹಾಗೂ ಕಿಚ್ಚನ ನಡುವಿನ ಸಂಭಾಷಣೆ ಮನೆಮಂದಿಯನೆಲ್ಲಾ ನಗೆಯ ಅಲೆಯಲ್ಲಿ ತೇಲಿಸಿತು.

Share This Article
Leave a Comment

Leave a Reply

Your email address will not be published. Required fields are marked *