ಬಿಗ್‍ಬಾಸ್ ಆರಂಭಗೊಂಡು ಎರಡು ವಾರ ಕಳೆದಿದೆ. ಮನೆಯಲ್ಲಿ ಒಬ್ಬೊಬ್ಬರದ್ದು ಒಂದೊಂದು ಆಟ. ಕೆಲವರು ಕ್ಯಾಮೆರಾ ಮುಂದೆ ಹೈಲೆಟ್ ಆಗೋಕೆ ಟ್ರೈ ಮಾಡ್ತಿರೋದು ವೀಕ್ಷಕರ ಗಮನಕ್ಕೂ ಬಂದಿದೆ. ನಿರ್ಮಲಾ ಚೆನ್ನಪ್ಪ ವಿಷಯದಲ್ಲಿ ಈ ಬಗ್ಗೆ ದೊಡ್ಮನೆ ಸದಸ್ಯರು ತಮ್ಮೊಳಗೆಯೇ ಮಾತಾಡಿಕೊಂಡಿದ್ರು. ಇದೀಗ ಸೀಸನ್ 8ರ ಹಿರಿಯ ಆಟಗಾರ ಶಂಕರ್ ಅಶ್ವಥ್ ಎರಡು ವಾರದ ಬಳಿಕ ಮನೆಯ ಸದಸ್ಯರ ಆಟದ ಅಸಲಿ ವಿಷಯವನ್ನ ಸುದೀಪ್ ಮುಂದೆ ಹೇಳಿದ್ದಾರೆ.
ಸೂಪರ್ ಸಂಡೇ ವಿಥ್ ಸುದೀಪ ಸಂಚಿಕೆಯ ಪ್ರೋಮೋ ಹೊರ ಬಂದಿದ್ದು, ನಟ ಶಂಕರ್ ಅಶ್ವಥ್ ಬಿಗ್ ಮನೆಯ ಮಂದಿಯೆಲ್ಲ ಫೇಕ್ ಅಂದಿದ್ದಾರೆ. ಹೌದು, ಮುಂದಿರುವ ಬೋರ್ಡ್ ನಲ್ಲಿ ಫೇಕ್ ಮತ್ತು ರಿಯಲ್ ಆಗಿರೋ ಒಬ್ಬ ಸದಸ್ಯರ ಫೋಟೋ ಹಚ್ಚುವಂತೆ ಮನೆ ಮಂದಿಗೆ ಸೂಚಿಸಿದ್ದರು. ಹಾಗೆ ಕೆಲವರು ಗೀತಾ ಭಾರತಿ ಈ ಮನೆಯಲ್ಲಿ ನನಗೆ ಫೇಕ್ ಅನ್ನಿಸ್ತಾರೆ. ಅದೇ ಪಾವಗಡದ ಮಂಜು ರಿಯಲ್ ಅಂತ ಹೇಳಿದ್ರು.
ಅಶ್ವಥ್ ಸರದಿ ಬಂದಾಗ, ನೀವು ನೇರವಾಗಿ ಮಾತನಾಡಿ ಅಭಿಪ್ರಾಯ ಹೇಳುವಂತೆ ಹೇಳಿದ್ದೀರಿ. ಆದ್ರೆ ಈ ಮನೆಯಲ್ಲಿರುವ ಎಲ್ಲರೂ ಫೇಕ್. ಯಾರ ಬಗ್ಗೆ ಹೇಳಿದ್ರೆ ಪಕ್ಕದಲ್ಲಿ ಇನ್ಯಾರು ಚುಚ್ತಾರೆ ಅನ್ನೋ ಭಯ ಮತ್ತು ಅಳಕಿದೆ ಅಂತ ನೇರವಾಗಿಯೇ ಹೇಳಿದ್ರು. ಆದರೂ ಶಂಕರ್ ಅಶ್ವಥ್ ತಮ್ಮ ಕೈಯಲ್ಲಿ ಇಬ್ಬರ ಫೋಟೋ ಹಿಡಿದಿರೋದನ್ನ ಕಾಣಬಹುದು. ಆದ್ರೆ ಆ ಇಬ್ಬರು ಯಾರು? ನಿಜವಾಗಲೂ ಎಲ್ಲರೂ ಕ್ಯಾಮೆರಾ ಮುಂದೆ ತೋರಿಕೆಯಾಟ ಆಡ್ತಿದ್ದಾರೆ ಅನ್ನೋ ಪ್ರಶ್ನೆಯನ್ನ ಅಶ್ವಥ್ ಮಾತುಗಳು ಹುಟ್ಟು ಹಾಕಿವೆ.