ಕರ್ನಾಟಕ ಸರ್ಕಾರದಲ್ಲಿ ಕೆಲಸ ಮಾಡಲು ಖಾಸಗಿ ವಲಯದ ವ್ಯಕ್ತಿಗಳಿಗೆ ಫೆಲೋಶಿಪ್‌

Public TV
2 Min Read
the nudge IAS Karnataka e1615524888539

ಬೆಂಗಳೂರು: ಖಾಸಗಿ ವಲಯದ ಹಿರಿಯ ಕಾರ್ಪೊರೇಟ್ ಅಧಿಕಾರಿಗಳಿಗೆ ಗುಡ್‌ನ್ಯೂಸ್‌. ನೀವು ಮನಸ್ಸು ಮಾಡಿದರೆ ಕರ್ನಾಟಕ ಸರ್ಕಾರದಲ್ಲಿ ಕೆಲಸ ಮಾಡಬಹುದು. ನಿಮ್ಮ ಜ್ಞಾನ, ಕೌಶಲವನ್ನು ತನ್ನ ಸೇವೆಯಲ್ಲಿ ಬಳಸಿಕೊಳ್ಳಲು ಸರ್ಕಾರ ಮುಂದಾಗಿದೆ.

ದ/ನಡ್ಜ್ ಫೌಂಡೇಶನ್‌ ಸಹಭಾಗಿತ್ವದಲ್ಲಿ ಖಾಸಗಿ ವಲಯದ ಹಿರಿಯ ಅಧಿಕಾರಿಗಳು, ಡೊಮೇನ್ ತಜ್ಞರನ್ನು ವಿಶೇಷವಾಗಿ ನಾಗರಿಕ ವ್ಯವಹಾರ, ಸಾಮಾಜಿಕ ವಲಯದಲ್ಲಿ ಕರ್ತವ್ಯ ನಿರ್ವಹಿಸಲು ಪ್ರೋತ್ಸಾಹ ನೀಡಲು ಸರ್ಕಾರ ಮುಂದಾಗಿದ್ದು ಅರ್ಜಿಯನ್ನು ಆಹ್ವಾನಿಸಿದೆ.

the nudge

ಅರ್ಜಿಗಳ ಪರಿಶೀಲನೆಯ ನಂತರ ಮೊದಲ ವರ್ಷದಲ್ಲಿ 10 -12 ಮಂದಿಯನ್ನು ನಡ್ಜ್‌ ಫೌಂಡೇಶನ್ ಆಯ್ಕೆ ಮಾಡಲಿದೆ. ಆಯ್ಕೆಯಾದವರಿಗೆ ವರ್ಷಕ್ಕೆ 20 ಲಕ್ಷ ರೂ. ಫೆಲೋಶಿಪ್‌ ನೀಡಲಾಗುತ್ತದೆ. ಆಯ್ಕೆಯಾದವರು ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯಲ್ಲಿ ಪ್ರವೇಶವನ್ನು ಪಡೆದು ತರಬೇತಿ ಪಡೆಯಲಿದ್ದಾರೆ.

ಇಂಡಿಯನ್ ಅಡ್ಮಿನಿಸ್ಟ್ರೇಟಿವ್ ಫೆಲೋಶಿಪ್ ಅಡಿಯಲ್ಲಿ ಆಯ್ಕೆಯಾದ ಫೆಲೋಗಳು ನಾಗರಿಕ ವ್ಯವಹಾರಗಳಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ತೊಡಗಿಕೊಳ್ಳಬೇಕು ಮತ್ತು ಇವರು ಹಿರಿಯ ಐಎಎಸ್‌ ಅಧಿಕಾರಿಗಳ(ಕಾರ್ಯದರ್ಶಿ ಮತ್ತು ಮೇಲ್ಪಟ್ಟ ಶ್ರೇಣಿ) ಅಡಿಯಲ್ಲಿ 18 ತಿಂಗಳು ಕೆಲಸ ಮಾಡಬೇಕಾಗುತ್ತದೆ.

the nudge 2

ಯಾವೆಲ್ಲ ಕ್ಷೇತ್ರದಲ್ಲಿ ಕೆಲಸ?
ಮುಖ್ಯ ಕಾರ್ಯದರ್ಶಿ ಕಚೇರಿ, ಆಡಳಿತ ಸುಧಾರಣೆಗಳು, ಯೋಜನೆ, ಕಾರ್ಯಕ್ರಮ ನಿರ್ವಹಣೆ ಮತ್ತು ಅಂಕಿಅಂಶಗಳು, ಕೃಷಿ, ಶಿಕ್ಷಣ, ಇ-ಆಡಳಿತ, ತೋಟಗಾರಿಕೆ, ಪಂಚಾಯತ್‌ ರಾಜ್, ಗ್ರಾಮೀಣಾಭಿವೃದ್ಧಿಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ, ಮಹಿಳೆಯರು ಮತ್ತು ಮಕ್ಕಳ ಕಲ್ಯಾಣ, ರಾಜ್ಯ ಯೋಜನಾ ಆಯೋಗ.

ಯಾರೆಲ್ಲ ಅರ್ಜಿ ಸಲ್ಲಿಸಿದ್ದಾರೆ?
ಬಹುರಾಷ್ಟ್ರೀಯ ಸಂಸ್ಥೆಗಳು ಮತ್ತು ಪ್ರಮುಖ ಬ್ಯಾಂಕುಗಳಲ್ಲಿನ ನಿರ್ದೇಶಕರು, ಉಪಾಧ್ಯಕ್ಷರು ಮತ್ತು ಸಾಮಾನ್ಯ ವ್ಯವಸ್ಥಾಪಕರು ಸೇರಿದಂತೆ ವಿವಿಧ ಕ್ಷೇತ್ರಗಳಿಂದ 200ಕ್ಕೂ ಹೆಚ್ಚು ಮಂದಿ ಈಗಾಗಲೇ ಅರ್ಜಿಯನ್ನು ಸಲ್ಲಿಸಿದ್ದಾರೆ.

ಫೆಲೋಶಿಪ್ ಮಾಹಿತಿಯನ್ನು ಮತ್ತು ಅರ್ಜಿಯನ್ನು www.thenudge.org ನಲ್ಲಿ ಸಲ್ಲಿಸಬಹುದು. ಯಾವುದೇ ಪ್ರಶ್ನೆ ಮತ್ತು ಸಹಾಯಕ್ಕಾಗಿ, iaf@thenudge.org ಅಥವಾ chayakd@gmail.com ನಲ್ಲಿ ಸಂಪರ್ಕಿಸಬಹುದು.

the nudge 3

ದಿ ನಡ್ಜ್‌ ಫೌಂಡೇಶನ್‌:
ದೇಶದ ಕಠಿಣ ಅಭಿವೃದ್ಧಿ ಸವಾಲುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ದ/ನಡ್ಜ್ ಸೆಂಟರ್ ಫಾರ್ ಸೋಶಿಯಲ್ ಇನೊವೇಶನ್ ಸ್ಥಾಪನೆಗೊಂಡಿದೆ. ದ/ನಡ್ಜ್ ಫೌಂಡೇಶನ್ ಲಾಭರಹಿತ ಸಂಸ್ಥೆಯಾಗಿದ್ದು, ನಂದನ್ ನಿಲೇಕಣಿ, ಟಾಟಾ ಟ್ರಸ್ಟ್‌, ಸ್ಕೋಲ್, ರಾಕ್ಫೆಲ್ಲರ್, ಓಮಿಡ್ಯಾರ್, ಫೇಸ್ಬುಕ್, ಸಿಂಧೂ ಟವರ್ಸ್, ಸಿಸ್ಕೊ, ಎಚ್‌ಡಿಎಫ್‌ಸಿ ಬ್ಯಾಂಕ್, ಎಚ್ಎಸ್‌ಬಿಸಿ, ಕೆಪಿಎಂಜಿ, ಎಂಫಾಸಿಸ್, ಎಚ್‌ಸಿಎಲ್‌ ಫೌಂಡೇಶನ್ ಮತ್ತು 50 ಕ್ಕಿಂತ ಹೆಚ್ಚು ಕಾರ್ಪೊರೇಟ್ ಮತ್ತು ಫೌಂಡೇಶನ್‌ಗಳು ಬೆಂಬಲ ನೀಡುತ್ತಿದೆ.

ಬೆಂಗಳೂರಿನಲ್ಲಿ ಸತತ ಐದು ವರ್ಷಗಳಿಂದ ನಡ್ಜ್ ಫೌಂಡೇಶನ್‌ ಸೆಂಟರ್ ಫಾರ್ ಸ್ಕಿಲ್ ಡೆವಲಪ್ಮೆಂಟ್ ಸಂಸ್ಥೆ ಯುವಕ-ಯುವತಿಯರಿಗೆ ಗುರುಕುಲ ಎಂಬ ಜಾಬ್ ಸ್ಕಿಲ್ ಕೋರ್ಸ್ ಮೂಲಕ 6 ಸಾವಿರ ವಿದ್ಯಾರ್ಥಿಗಳಿಗೆ ವಿವಿಧ ಸಂಸ್ಥೆಗಳಲ್ಲಿ ಉದ್ಯೋಗ ನೀಡಿದೆ.

ಕೋವಿಡ್‌ 19 ಲಾಕ್‌ಡೌನ್‌ ಸಮಯದಲ್ಲಿ ಫ್ಯೂಚರ್ ಪರ್ಫೆಕ್ಟ್ ಎಂಬ ಯೋಜನೆಯೊಂದಿಗೆ ಮನೆಯಲ್ಲೇ ಕೂತು 4 ತಿಂಗಳ ಅವಧಿಯಲ್ಲಿ ಎರಡು ಗಂಟೆಗಳ ಸ್ಪೋಕನ್ ಇಂಗ್ಲಿಷ್ ಜೊತೆಗೆ ಉದ್ಯೋಗ ಕೌಶಲ್ಯದ ಬಗ್ಗೆ ತರಬೇತಿ ನೀಡಿದೆ. ತರಬೇತಿ ಪಡೆದ 5 ಸಾವಿರ ಮಂದಿಗೆ ಬಾಷ್‌, ವೆರ್ಟೆಕ್ಸ್‌, ಎಚ್‌ಡಿಬಿ ಫೈನಾನ್ಸ್‌ ಸೇರಿದಂತೆ ಬೇರೆ ಬೇರೆ ಕಂಪನಿಗಳಲ್ಲಿ ಉದ್ಯೋಗ ಸಿಕ್ಕಿದೆ.

Share This Article
Leave a Comment

Leave a Reply

Your email address will not be published. Required fields are marked *