ದೊಡ್ಮನೆಯಲ್ಲಿ ಗಳಗಳನೇ ಅತ್ತ ದಿವ್ಯಾ ಸುರೇಶ್

Public TV
3 Min Read
divya suresh

ದೊಡ್ಮನೆಯಲ್ಲಿ ಬುಧವಾರ ನಡೆದ ಮನುಷ್ಯರು ಮತ್ತು ವೈರಸ್ ಟಾಸ್ಕ್ ಬಗ್ಗೆ ಮನೆಯ ಸದಸ್ಯರು ಶ್ರದ್ಧೆ, ಗಮನ ವಹಿಸದೇ ನಿಯಮ ಉಲ್ಲಂಘಿಸಿದ್ದಾರೆ ಎಂದು ಬಿಗ್ ಟಾಸ್ಕ್ ನನ್ನು ರದ್ದು ಗೊಳಿಸಿದ್ದರು.

bigg boss 1 8

ಮೊದಲ ಭಾಗದಲ್ಲಿ ಹಲವು ಬಾರಿ ಗೆದ್ದ ವೈರಸ್ ತಂಡ, ಎರಡನೇ ಭಾಗದಲ್ಲಿ ಗೆಲ್ಲಲು ಪ್ರಯತ್ನವನ್ನು ಮಾಡದೇ ಪಂದ್ಯವನ್ನು ಸುಲಭವಾಗಿ ಕೈಚೆಲ್ಲಿ ಸೋಲನ್ನು ಅನುಭವಿಸಿತು. ಈ ವಿಚಾರವಾಗಿ ವೈರಸ್ ತಂಡ ಸೋಲಲು ಪ್ರಮುಖ ಕಾರಣ ದಿವ್ಯಾ ಸುರೇಶ್ ಹಾಗೂ ನಿಧಿ ಸುಬ್ಬಯ್ಯ ಎಂದು ಮನೆಯ ಎಲ್ಲ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

divya suresh 1

ಈ ನಡುವೆ ಲ್ಯಾಗ್ ಮಂಜು ಬೆಳಗ್ಗೆ ಆಟದ ಬಗ್ಗೆ ದಿವ್ಯಾ ಸುರೇಶ್ ಜೊತೆ ಚರ್ಚೆ ನಡೆಸಿದರು. ನೀನು ಪಂದ್ಯವನ್ನು ಕೈ ಚೆಲ್ಲಿದ್ದು ಏಕೆ? ಅಷ್ಟೇಲ್ಲಾ ಕಷ್ಟಪಟ್ಟು, ಅಷ್ಟು ಮಂದಿ ಹುಡುಗರ ಮದ್ಯೆ ಸಮವಾಗಿ ಆಟ ಆಡಿದ್ದೀಯಾ. ಏಕಾಂಗಿಯಾಗಿ ಆಟವಾಡಲು ಆರಂಭಿಸಿದಾಗ ನೀನು ನಿನ್ನ ಬಲವನ್ನು ತೋರಿಸಬೇಕಿತ್ತು. ಸೋತರೂ ಪರವಾಗಿಲ್ಲ ಕೇವಲ ಪಂದ್ಯದಲ್ಲಿ ಭಾಗವಹಿಸಬೇಕಾಗಿತ್ತು. ನೀನು ಒಬ್ಬಳು ಕ್ರೀಡಾಪಟುವಾಗಿ ನೀನು ನಿನ್ನ ಬಲವನ್ನು ಪ್ರದರ್ಶಿಸಬೇಕಿತ್ತು. ನೀನು ಮಾಡಿದ್ದು ತಪ್ಪಲ್ಲವೇ? ಈ ವಿಚಾರವಾಗಿ ನನಗೆ ನಿನ್ನ ಮೇಲೆ ಬಹಳ ಸಿಟ್ಟಿತ್ತು. ಹಾಗಾಗಿ ಆತ್ಮೀಯವಾಗಿದ್ದೇನೆ, ಏನಾದರೂ ತಪ್ಪಾಗಿ ಮಾತನಾಡಿಬಿಡುತ್ತೇನೆ ಎಂದು ನಾನು ನಿನ್ನೆ ನಿನ್ನೊಂದಿಗೆ ಮಾತನಾಡಿಲ್ಲ. ನಾವು ಇಲ್ಲಿಗೆ ಬರಲು ಬೇರೆಯವರ ಮಾತನ್ನು ಕೇಳಿಕೊಂಡು ಬಂದಿದ್ದೇವಾ? ಇಲ್ಲ ಅಲ್ಲವೇ? ಬೇರೆಯವರು ಹೀಗೋ ಆಟ ಆಡುತ್ತಾರೆ ಎಂದು ನಾವು ಅವರ ರೀತಿಯಲ್ಲಿಯೇ ಆಟವಾಡುವುದಕ್ಕೆ ಆಗುತ್ತಾ? ಬೇರೆ ಯಾರು ಹೇಗಾದರೂ ಆಡಿಕೊಳ್ಳಲಿ ಅದು ನಮಗೆ ಸಂಬಂಧವಿಲ್ಲದ ವಿಚಾರ. ನಾವು ಏಕಾಂಗಿಯಾಗಿ ನಿಂತ ಮೇಲೆ ನಾವು ಏಕಾಂಗಿಯಾಗಿ ಹೋರಾಟ ಮಾಡಬೇಕು. ನೀನು ಯಾವ ಕಾರಣಕ್ಕೆ ಇಲ್ಲಿಗೆ ಬಂದಿದ್ದೀಯಾ ಎಂಬುವುದರ ಬಗ್ಗೆ ಆಲೋಚಿಸು. ಒಟ್ಟಾರೆ ನೀನು ನಿನ್ನೆ ಮಾಡಿದ್ದು ನೂರಕ್ಕೆ ನೂರರಷ್ಟು ತಪ್ಪು ಎಂದು ತಿಳಿ ಹೇಳಿದರು.

FotoJet 15

ಈ ವೇಳೆ ಪಂದ್ಯ ಸೋಲುವುದಕ್ಕೆ ದಿವ್ಯಾ ಸುರೇಶ್ ಕಾರಣರೆಂದು ನೀವು ಹೇಳಿದ್ದೀರಿ ಎಂಬ ಮಾತನ್ನು ರಾಜೀವ್‍ರವರು ಹೇಳುತ್ತಿದ್ದರು ಎಂದು ದಿವ್ಯಾ ಸುರೇಶ್ ಲ್ಯಾಗ್ ಮಂಜುಗೆ ಪ್ರತಿಕ್ರಿಯಿಸಿದರು. ಇದಕ್ಕೆ ಪ್ರತಿಯಾಗಿ ಲ್ಯಾಗ್ ಮಂಜು ಬೇರೆಯವರು ಹೇಳುವ ಮಾತನ್ನು ನೀನು ನಂಬಿ ಬಿಡುತ್ತೀಯಾ? ನಿನ್ನ ಬುದ್ದಿಗೆ ಏನಾಗಿದೆ? ನಾವೇನು ಪಂದ್ಯದ ವೇಳೆ ಡಂಬಲ್ಸ್ ಹಾಕಲು ಬಂದಿದ್ದೇವಾ ಕೇವಲ ನೀರನ್ನಷ್ಟೇ ತಾನೇ ಹಾಕಲು ಮುಂದಾದೇವು ಎಂದು ಕಿಡಿಕಾರಿದರು.

FotoJet 2 6

ನಾನು ಕೊನೆಯವರೆಗೂ ಸರಿಯಾದ ರೀತಿಯಲ್ಲಿ ಆಟವಾಡಿದೆ. ಆದರೆ ಪ್ರಶಾಂತ್‍ರವರು ಕನ್ಫೆಷನ್ ರೂಮ್‍ಗೆ ಹೋಗಿ ಹಿಂದಿರುಗಿ ಬಂದ ನಂತರ ನನ್ನ ಮೇಲೆ ನಾನು ನಾನು ಮಾಡದೇ ಇರುವ ಆರೋಪಗಳನ್ನು ಹೊರಿಸಿದರು ಎಂದು ಲ್ಯಾಗ್ ಮಂಜುಗೆ ದಿವ್ಯಾ ಸುರೇಶ್ ಆರೋಪಿಸಿದರು. ಇನ್ನೊಮ್ಮೆ ಈ ರೀತಿ ಮಾಡುವುದಿಲ್ಲ ಎಂದು ಹೇಳಿದರು.

FotoJet 1 9

ಬಳಿಕ ಮನೆಯ ಸದಸ್ಯರಿಗೆ ದಿವ್ಯಾ ನಾನು ಮಾಡಿದ್ದು ತಪ್ಪು ಎಂದು ಕ್ಷಮೆ ಯಾಚಿಸಿದರು. ಈ ವೇಳೆ ಶುಭಾ ಪೂಂಜಾ ಬೇರೆಯವರ ಆಲೋಚನೆಗೆ ಪ್ರೇರಿತವಾಗಿ ಯಾವ ಕೆಲಸವನ್ನು ಮಾಡಬೇಡ. ನಾವು ಇಲ್ಲಿ ಆಟವಾಡಲು ಏಕಾಂಗಿಯಾಗಿ ಬಂದಿದ್ದೇವೆ. ನಮಗೆ ನಮ್ಮದೇಯಾದಂತಹ ವೈಯಕ್ತಿಕ ಅಭಿಪ್ರಾಯಗಳಿರುತ್ತದೆ. ಒಂದು ಟೀಂ ಎಂದು ಬಂದಾಗ ಟೀಂನಲ್ಲಿರುವವರೆಲ್ಲ ಸರಿ ಎಂದು ಹೇಳಲು ಸಾಧ್ಯವಾಗುವುದಿಲ್ಲ. ನಮಗೆ ಹಾನಿಯಾಗುತ್ತದೆ, ಬೇಸರವಾಗುತ್ತದೆ ಎಂದು ನಾವು ಪಂದ್ಯವನ್ನು ಅರ್ಧದಲ್ಲಿಯೇ ಕೈಚೆಲ್ಲಿ ಬಂದೆವಾ ಆಟ ಪೂರ್ಣಗೊಳಿಸಲಿಲ್ಲವೇ? ನಾವು ಆಟ ಆಡಿದಾಗ ನೀವು ಆಟದ ಬಗ್ಗೆ ಅಸಡ್ಡೆ ತೋರಿದ್ದೀರಾ ಎಂಬುವುದು ನಮಗಿಂತ ಜನರಿಗೆ ತಿಳಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

shubha pooja

ಈ ವೇಳೆದ ದಿವ್ಯಾ ಸುರೇಶ್ ರಾಜೀವ್ ಅವರ ಭುಜದ ಮೇಲೆ ಒರಗಿಕೊಂಡು ಗಳಗಳನೇ ಅಳಲು ಆರಂಭಿಸಿದರು. ನಂತರ ರಾಜೀವ್ ಹಾಗೂ ಸಮರ್ಥ್, ಮಂಜು ಸಮಾಧಾನ ಪಡಿಸುವ ಮೂಲಕ ದಿವ್ಯಾ ಸುರೇಶ್ ಮುಖದಲ್ಲಿ ನಗು ತರಿಸಿದರು.

Share This Article
Leave a Comment

Leave a Reply

Your email address will not be published. Required fields are marked *