ಬೆಂಗಳೂರು: ಬಿಗ್ ಮನೆಯಲ್ಲಿ ವೈರಸ್ ವರ್ಸಸ್ ಮನುಷ್ಯರ ನಡುವಿನ ಟಾಸ್ಕ್ ಬಹಳ ರೋಚಕತೆಯನ್ನು ಪಡೆದುಕೊಳ್ಳುತ್ತಿದ್ದಂತೆ, ಸ್ಪರ್ಧಿಗಳ ನಡುವೆ ಕಿರಿಕ್ ಹೆಚ್ಚಾಗತೊಡಗಿದೆ. ಎರಡು ತಂಡಗಳ ಸದಸ್ಯರ ನಡುವೆ ನಡೆಯುತ್ತಿರುವ ಕಿರಿಕ್ ಬಿಗ್ ಮನೆಯ ಕೂತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ.
ವೈರಸ್ ವರ್ಸಸ್ ಮನುಷ್ಯರ ನಡುವಿನ ಟಾಸ್ಕ್‍ನಲ್ಲಿ ವೈರಸ್ ತಂಡದ ಸಂಬರ್ಗಿ ಮತ್ತು ಮನುಷ್ಯ ತಂಡದ ಲ್ಯಾಗ್ ಮಂಜು ನಡುವೆ ಮಾತಿನ ಚಕಮಕಿ ಜೋರಾಗಿ, ಆಣೆ ಪ್ರಮಾಣ ಮಾಡುವ ಹಂತದ ವರೆಗೆ ಇಬ್ಬರು ಮಾತುಕತೆ ಮುಂದುವರಿಸಿದ್ದಾರೆ. ಮಂಜು ಟಾಸ್ಕ್ ಪ್ರಕಾರ ನಾವು ಮಾಡಿರುವುದು ಸರಿಯಾಗಿದೆ ಎಂದರೆ, ಸಂಬರ್ಗಿ ಇಲ್ಲ ನಾನು ಮಾಡಿರುವುದೇ ಸರಿಯಾಗಿದೆ ಎಂದು ಭೂಮಿ ತಾಯಿ ಮತ್ತು ನಾನು ಮಾಡುವ ವ್ಯಾಪಾರದ ಮೇಲೆ ಆಣೆ ಮಾಡುತ್ತೇನೆಂದು ಮಂಜು ವಿರುದ್ಧ ತೊಡೆ ತಟ್ಟಿದ್ದಾರೆ.

ಮಂಜು ಅವರ ಮಾತನ್ನು ಕೇಳುತ್ತಿದ್ದಂತೆ ಸಂಬರ್ಗಿ ಆಣೆ ಪ್ರಮಾಣಕ್ಕೆ ಮುಂದಾಗಿದ್ದಾರೆ, ಮಂಜು ಸಂಬರ್ಗಿ ಮೇಲೆ ಆಣೆ ಹಾಕುದಾಗಿ ಹೇಳಿದ್ದಾರೆ ಈ ನಡುವೆ ಎರಡು ತಂಡದ ಸದಸ್ಯರು ಮಧ್ಯಪ್ರವೇಶಿಸುವ ಮೂಲಕ ಮಾತಿನ ಜಗಳಕ್ಕೆ ಬ್ರೇಕ್ ಬಿದ್ದಿದೆ.



