– ಸಂಜೆ 4 ಗಂಟೆಗೆ ಪದಗ್ರಹಣ
ಡೆಹರಾಡೂನ್: ತೀರ್ಥ್ ಸಿಂಗ್ ರಾವತ್ ಉತ್ತಾರಖಂಡ ರಾಜ್ಯದ ಹೊಸ ಮುಖ್ಯಮಂತ್ರಿಗಳಾಗಿ ಆಯ್ಕೆಯಾಗಿದ್ದು, ಇಂದು ಸಂಜೆ 4 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಸಂಸದರಾಗಿರುವ 56 ವರ್ಷದ ತೀರ್ಥ್ ಸಿಂಗ್ ರಾವತ್ 2013-15ರವರೆಗೆ ಉತ್ತಾರಖಂಡ ಬಿಜೆಪಿ ಅಧ್ಯಕ್ಷರಾಗಿದ್ದಾರೆ. ಈ ಹಿಂದೆ ಶಾಸಕರಾಗಿಯೂ ತೀರ್ಥ್ ಸಿಂಗ್ ರಾವತ್ ಆಯ್ಕೆಯಾಗಿದ್ದರು.
ತ್ರಿವೇಂದ್ರ ಸಿಂಗ್ ರಾವತ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಕೇಂದ್ರ ಸಚಿವ ರಮೇಶ್ ಪೊಖ್ರಿಯಾಲ ನಿಶಾಂಕ್ ಮತ್ತು ಉತ್ತಾರಖಂಡ ಸಚಿವರಾದ ಧನ್ ಸಿಂಗ್ ರಾವತ್ ಹೆಸರುಗಳು ಸಿಎಂ ರೇಸ್ ನಲ್ಲಿ ಕೇಳಿ ಬಂದಿದ್ದವು. ಅಂತಿಮವಾಗಿ ರಾಜ್ಯ ಬಿಜೆಪಿ ನಾಯಕರ ಜತೆ ಚರ್ಚಿಸಿದ ಹೈಕಮಾಂಡ್ ತೀರ್ಥ್ ಸಿಂಗ್ ಅವರ ಹೆಸರನ್ನ ಅಂತಿಮಗೊಳಿಸಿದೆ.
ರಾಜೀನಾಮೆ ಯಾಕೆ?
ಬಿಜೆಪಿ ಶಾಸಕರು ರಾವತ್ ಅವರ ಆಡಳಿತ ಶೈಲಿಯ ಬಗ್ಗೆ ಹೈಕಮಾಂಡ್ ಗೆ ದೂರು ನೀಡಿದ್ದರು. ಇವರೇ ಮುಂದುವರಿದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಕಷ್ಟ ಎಂದು ತಿಳಿಸಿದ್ದರು ಎನ್ನಲಾಗುತ್ತಿದೆ.ಕೋರ್ ಕಮಿಟಿ ಸಭೆ ನಡೆದ ಬೆನ್ನಲ್ಲೇ ಮಾ.08 ರಂದು ದೆಹಲಿಗೆ ಭೇಟಿ ನೀಡಿದ್ದ ರಾವತ್ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದರು.
ಉತ್ತರಾಖಂಡ್ ಬಿಜೆಪಿ ನಾಯಕತ್ವದಲ್ಲಿ ದಿಢೀರ್ ಬದಲಾವಣೆ – ಸಿಎಂ ರಾಜೀನಾಮೆ https://t.co/73Vx34ounl#Uttarakhand #TrivendraSinghRawat #BJP #Elections
— PublicTV (@publictvnews) March 9, 2021
ಒಟ್ಟು 69 ವಿಧಾನಸಭಾ ಕ್ಷೇತ್ರಗಳಿದ್ದು 2017ರ ವಿಧಾನಸಭೆಯಲ್ಲಿ ಬಿಜೆಪಿ 59 ಸ್ಥಾನವನ್ನು ಗೆಲ್ಲುವ ಮೂಲಕ ಅಧಿಕಾರಕ್ಕೆ ಏರಿತ್ತು. ಕಾಂಗ್ರೆಸ್ 11 ಸ್ಥಾನಗಳನ್ನು ಮಾತ್ರ ಗೆದ್ದುಕೊಂಡಿತ್ತು.