ಬೆಂಗಳೂರು: ಮಾಜಿ ಸಚಿವರೊಬ್ಬರ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದ ಯುವತಿಯ ಚಲನವಲನದ ವೀಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಫೆಬ್ರವರಿ 16ರಂದು ಆರ್.ಟಿ. ನಗರದ ಶುಚಿ ದರ್ಶಿನಿ ಹೆಸರಿನ ಹೋಟೆಲ್ ನಲ್ಲಿ ಯುವತಿ ವ್ಯಕ್ತಿಯೊಬ್ಬನ ಜೊತೆ ಚರ್ಚೆ ನಡೆಸಿರೋದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸಂಜೆ 7.12 ರಿಂದ 9.15ರವರೆಗೆ ಹೋಟೆಲ್‍ನಲ್ಲಿದ್ದ ಯುವತಿ ಓರ್ವನ ಜೊತೆ ಸುದೀರ್ಘವಾಗಿ ಚರ್ಚೆ ನಡೆಸಿದ್ದಾಳೆ. ಎರಡು ಬಾರಿ ತಿಂಡಿ ಆರ್ಡರ್ ಮಾಡಿದ ಯುವತಿ ಜೊತೆಯಲ್ಲಿದ್ದ ವ್ಯಕ್ತಿಗೆ ಮೊಬೈಲ್ ತೋರಿಸುತ್ತಾ ಮಾತನಾಡಿದ್ದಾಳೆ.
ಎರಡು ಗಂಟೆ ಹೋಟೆಲ್ ನಲ್ಲಿ ಯುವತಿ ಜೊತೆಯಲ್ಲಿದ್ದ ವ್ಯಕ್ತಿಯ ಮಾಹಿತಿ ಲಭ್ಯವಾಗಿಲ್ಲ. ಈ ಮೀಟಿಂಗ್‍ನಲ್ಲೇ ಬಿಗ್ ಡೀಲ್ ಬಗ್ಗೆ ಚರ್ಚೆ ನಡೆದಿತ್ತಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.