ರಾಂಚಿ: 17 ವರ್ಷದ ಗರ್ಭಿಣಿ ಹತ್ಯೆ ಮಾಡಿ ಸಮಾಧಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಮೃತ ಹುಡುಗಿ 18 ವರ್ಷದವನನ್ನು ಪ್ರೀತಿಸುತ್ತಿದ್ದಳು. ಆದರೆ ಗರ್ಭಿಣಿಯಾಗುತ್ತಿದ್ದಂತೆ ಪ್ರೇಮಿ ಮತ್ತು ಆತನ ಸ್ನೇಹಿತನನ್ನು ಹುಸೇನಾಬಾದ್ ಇಬ್ಬರು ಸೇರಿ ಹುಡುಗಿಯನ್ನು ಕೊಂದು ಸಮಾಧಿ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆ ಪ್ರದೇಶದ ಕೊರಿಯಾಡಿ ಗ್ರಾಮದಿಂದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.
ಗರ್ಭಿಣಿ ನನ್ನನ್ನು ಮದುವೆಯಾಗು ಎಂದು ತನ್ನ ಪ್ರೇಮಿಯನ್ನು ಒತ್ತಾಯಿಸಿದ್ದಾಳೆ. ಆದರೆ ಗರ್ಭಪಾತ ಮಾಡಿಸಲು ಪ್ರೇಮಿ, ನರ್ಸ್ ಒಬ್ಬಳನ್ನು ಸಂಪರ್ಕಿಸಿದ್ದಾನೆ. ಆದರೆ ಆಕೆ 10 ಸಾವಿರ ರೂಪಾಯಿ ಕೇಳಿದ್ದಾಳೆ. ಆ ಹಣವನ್ನು ಹೊಂದಿಸಲು ಸಾಧ್ಯವಾಗದೇ ಕೊಲೆ ಮಾಡಿದ್ದಾನೆ.



