ವೀಡಿಯೋ ಪ್ರಕರಣ- ಕನಕಪುರ, ಬೆಳಗಾವಿ ಕಡೆಯವರೇ ಇದಕ್ಕೆ ಕಾರಣ ಎಂದ ಯೋಗೇಶ್ವರ್

Public TV
1 Min Read
yogeshwar 1

ಬೆಂಗಳೂರು: ಮೈತ್ರಿ ಸರ್ಕಾರ ಕೆಡವಿದ ಹಿನ್ನೆಲೆ ಈ ರೀತಿ ಮಾಡುತ್ತಿದ್ದಾರೆ. ಕನಕಪುರ, ಬೆಳಗಾವಿಯವರೇ ಇದಕ್ಕೆ ಕಾರಣ ಎಂದು ಸಚಿವ ಸಿ.ಪಿ.ಯೋಗೇಶ್ವರ್ ಹೊಸ ಬಾಂಬ್ ಸಿಡಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಊಹಾಪೋಹಗಳ ಬಗ್ಗೆ ನನಗೆ ಗೊತ್ತಿಲ್ಲ. ಅನಾವಶ್ಯಕವಾಗಿ ಸಂಬಂಧವಿಲ್ಲದ ಪ್ರಶ್ನೆ ಕೇಳಿ ಮುಜುಗರಕ್ಕೀಡು ಮಾಡಬೇಡಿ. ಸರ್ಕಾರ ರಚನೆ ಮಾಡಲು 20 ಜನ ಸಹಕಾರ ಕೊಟ್ಟಿದ್ದಾರೆ. ಇದು ಸಾಮೂಹಿಕ ವಿಚಾರವಲ್ಲ, ವೈಯಕ್ತಿಕ ವಿಚಾರ. ಅವರನ್ನೇ ಕೇಳಬೇಕು. ಅಲ್ಲದೆ ಮಾಜಿ ಸಚಿವರ ವೀಡಿಯೋ ಪ್ರಕರಣದ ಹಿಂದೆ ಕನಕಪುರ, ಬೆಳಗಾವಿಯವರು ಇದ್ದಾರೆ, ಇದಕ್ಕೆ ಅವರೇ ಕಾರಣ ಎಂದು ಹೊಸ ಬಾಂಬ್ ಸಿಡಿಸುವ ಮೂಲಕ ರಾಜ್ಯ ರಾಜಕೀಯ ವಲಯದಲ್ಲಿ ಚರ್ಚೆಯಾಗುವಂತೆ ಮಾಡಿದ್ದಾರೆ.

ಮೈತ್ರಿ ಸರ್ಕಾರ ಕೆಡವಲು ಕಾರಣವಾದ ಹಿನ್ನೆಲೆಯಲ್ಲಿ ಈ ರೀತಿಯ ಷಡ್ಯಂತ್ರ ಮಾಡುತ್ತಿದ್ದಾರೆ ಎಂಬ ಸಚಿವರೊಬ್ಬರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಇರಬಹುದು, ಕನಕಪುರದವರು ಹಾಗೂ ಬೆಳಗಾವಿಯವರು ಇದಕ್ಕೆ ಕಾರಣ. ಇದು ರಾಜಕೀಯ ಷಡ್ಯಂತ್ರವಾಗಿದೆ. ಇದನ್ನು ಮಾಡಿದವರು ಯಾರೆಂದು ಮುಂದೆ ಹೇಳುತ್ತೇನೆ. ಮುಂದಿನ ದಿನಗಳಲ್ಲಿ ಅವರು ಅನುಭವಿಸ್ತಾರೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *