ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುಹೂರ್ತ ನಿಗದಿಯಾಗಿದ್ದು, ಸಿಎಂ ಮಮತಾ ಬ್ಯಾನರ್ಜಿ ಇಂದು ಅಧಿಕೃತ 294 ಕ್ಷೇತ್ರಗಳ ಪೈಕಿ 291ರಲ್ಲಿ ತೃಣಮೂಲ ಕಾಂಗ್ರೆಸ್ ಸ್ಪರ್ಧಿಸಲಿದೆ. ಮೂರು ಕ್ಷೇತ್ರಗಳಲ್ಲಿ ಸಹಯೋಗಿ ಗೋರ್ಖಾ ಮುಕ್ತಿ ಮೋರ್ಚಾ ಪಕ್ಷದ ಅಭ್ಯರ್ಥಿಗಳು ಟಿಎಂಸಿ ಬೆಂಬಲದೊಂದಿಗೆ ಅಖಾಡಕ್ಕೆ ಇಳಿಯಲಿದ್ದಾರೆ. ಪಕ್ಷ ತೊರೆದು ಕಮಲ ಮುಡಿದ ಶಾಸಕರು ಸೇರಿದಂತೆ 27 ಜನಪ್ರತಿನಿಧಿಗಳಿಗೆ ಟಿಕೆಟ್ ನೀಡಿಲ್ಲ.
ಜಾತಿ ಸೇರಿದಂತೆ ಪಕ್ಕಾ ರಾಜಕೀಯ ಸಮೀಕರಣದಲ್ಲಿ ಮಮತಾ ಬ್ಯಾನರ್ಜಿ ಟಿಕೆಟ್ ಹಂಚಿಕೆ ಮಾಡಿರುವ ಬಗ್ಗೆ ವಿಶ್ಲೇಷಣೆ ಮಾಡಲಾಗುತ್ತಿದೆ. ಎಲ್ಲ ಸಮುದಾಯಗಳನ್ನ ಗಮನದಲ್ಲಿರಿಸಿಕೊಂಡು ಟಿಕೆಟ್ ಹಂಚಿಕೆ ಮಾಡಿದ್ದಾರೆ, 291ರ ಪೈಕಿ 50 ಕ್ಷೇತ್ರಗಳಲ್ಲಿ ಮಹಿಳಾ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ರೆ, 42 ಮುಸ್ಲಿಂ ನಾಯಕರು ಟಿಎಂಸಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಯಾವುದೇ ಪಕ್ಷಗಳ ಗೆಲುವಿನಲ್ಲಿ ಮುಸ್ಲಿಂ ಮತಗಳು ನಿರ್ಣಾಯಕ ಪಾತ್ರ ವಹಿಸಲಿವೆ. ಪಶ್ಚಿಮ ಬಂಗಾಳದ ಒಟ್ಟು ಮತಗಳ ಪೈಕಿ ಶೇ.30ರಷ್ಟು ಮುಸ್ಲಿಮರಿದ್ದಾರೆ. ಸರಿ ಸುಮಾರು 100 ಕ್ಷೇತ್ರಗಳಲ್ಲಿ ಮುಸ್ಲಿಂ ಮತಗಳು ಅಭ್ಯರ್ಥಿಗಳ ಗೆಲುವನ್ನ ನಿರ್ಣಯಿಸಲಿವೆ.
79 ದಲಿತರಿಗೆ ಮತ್ತು 17 ಪರಿಶಿಷ್ಠ ಪಂಗಡದ ನಾಯಕರಿಗೂ ಮಮತಾ ಬ್ಯಾನರ್ಜಿ ಟಿಕೆಟ್ ನೀಡಿದ್ದಾರೆ. ಸಮುದಾಯಗಳ ಪ್ರಾಬಲ್ಯದ ಮೇಲೆ ಆ ಕ್ಷೇತ್ರಗಳಲ್ಲಿ ಕ್ರಮಬದ್ಧವಾಗಿ ಟಿಎಂಸಿ ಟಿಕೆಟ್ ಹಂಚಿಕೆ ಮಾಡಿದೆ. ಈ ಎರಡೂ ಸಮುದಾಯಗಳ ಮತಗಳು ಶೇ.30ರಷ್ಟಿವೆ. ಬಿಜೆಪಿ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಸಮುದಾಯದ ಅಭ್ಯರ್ಥಿಗಳನ್ನ ಟಿಎಂಸಿ ಕಣಕ್ಕಿಳಿಸಿದೆ.
ಬಂಗಾಳದಲ್ಲಿ ಗಮನಸೆಳೆದ ‘ಮಾ’ ಕ್ಯಾಂಟೀನ್ https://t.co/O0eVRDxhsH #WestBengal #MaaCanteen #MamataBanerjee #KannadaNews
— PublicTV (@publictvnews) March 5, 2021
ಈ ಬಾರಿ ಮಮತಾ ಬ್ಯಾನರ್ಜಿ ಭವಾನಿಪುರ ಕ್ಷೇತ್ರದಿಂದ ಹಿಂದೆ ಸರಿದಿದ್ದು, ನಂದಿಗ್ರಾಮದಿಂದ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇತ್ತೀಚೆಗೆ ಬಿಜೆಪಿ ಸೇರಿರುವ ಸುವೇಂದು ಚಟರ್ಜಿ ನಂದಿಗ್ರಾಮದಿಂದ ಸ್ಪರ್ಧೆ ಮಾಡಲಿದ್ದಾರೆ. ಈ ಹಿಂದೆ ಹಾಕಿದ ಸವಾಲಿನಂತೆ ದೀದಿ ನಂದಿಗ್ರಾಮದಲ್ಲಿ ಒಂದು ಕಾಲದ ಆಪ್ತನಿಗೆ ಸೋಲಿನ ರುಚಿ ತೋರಿಸಲು ಮುಂದಾಗಿದ್ದಾರೆ. ತಮ್ಮ ತವರು ಕ್ಷೇತ್ರ ಭವಾನಿಪುರವನ್ನ ಸೋವನದೇವ್ ಚಟರ್ಜಿ ಅವರಿಗೆ ಬಿಟ್ಟುಕೊಟ್ಟಿದ್ದಾರೆ. 80 ವರ್ಷ ಮೇಲ್ಪಟ್ಟ ಯಾವ ನಾಯಕರಿಗೂ ಟಿಎಂಸಿ ಈ ಬಾರಿ ಟಿಕೆಟ್ ನೀಡಿಲ್ಲ. ಬಿಜೆಪಿ ಸೇರಿದ ಶಾಸಕರ ಕ್ಷೇತ್ರಗಳಿಗೆ ಹೊಸಬರಿಗೆ ಟಿಎಂಸಿ ಮಣೆ ಹಾಕಿದೆ.