ವಿಜಯಪುರ: ರೈತ ಮಹಿಳೆ ಕಡಲೆಯನ್ನು ಬೆಳೆದು ರಾಶಿ ಮಾಡಲು ಇಟ್ಟಿದ್ದರು. ಈ ಕಡಲೆ ರಾಶಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದಲ್ಲಿ ನಡೆದಿದೆ.
ದುಷ್ಕರ್ಮಿಗಳು ಬೆಂಕಿ ಹಚ್ಚಿದ ಪರಿಣಾಮ ಸುಮಾರು 30 ಕ್ವಿಂಟಾಲ್ ಕಡಲೆ ಸುಟ್ಟು ಭಸ್ಮವಾಗಿದೆ. ಈ ಮೂಲಕ ಸಾಯವ್ವ ಹುನ್ನೂರ ಅವರು ಬೆಳೆದಿರುವ ಕಡಲೆ ಸಂಪೂರ್ಣವಾಗಿ ದುಷ್ಕರ್ಮಿಗಳಿಟ್ಟಿರುವ ಬೆಂಕಿಗೆ ಆಹುತಿಯಾಗಿದೆ.
ರೈತ ಮಹಿಳೆ ಸಾಯವ್ವ ಅವರು 6 ಎಕರೆ ಜಮೀನಿನಲ್ಲಿ ಕಡಲೆ ಬೆಳೆದಿದ್ದರು. ಕಡಲೆ ಫಸಲನ್ನು ಕಟಾವು ಮಾಡಿ ಜಮೀನಿನಲ್ಲಿ ಇಟ್ಟಿದ್ದರು. ಆದರೆ ದುಷ್ಕರ್ಮಿಗಳು ಕಟಾವು ಮಾಡಿಟ್ಟಿದ್ದ ಕಡಲೆಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಒಟ್ಟು ಸುಮಾರು ರೂ. 1.50 ಲಕ್ಷ ಹಾನಿಯಾಗಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕೈಗೆ ಬಂದ ತುತ್ತು ಬಾಯಿಗೆ ಬರದಂತಾದ ಪರಿಸ್ಥಿತಿಯಿಂದ ರೈತ ಮಹಿಳೆ ಸಾಯವ್ವ ಕಂಗಾಲಾಗಿದ್ದಾರೆ. ಬಬಲೇಶ್ವರ ಪೆÇಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ : ಕಡಲೆ ರಾಶಿಗೆ ಬೆಂಕಿ ಹಚ್ಚಿ ದುಷ್ಕರ್ಮಿಗಳು ಪರಾರಿ – ಕಂಗಾಲದ ರೈತ