ಬೆಂಗಳೂರು: ಇಂದು 430 ಹೊಸ ಕೊರೊನಾ ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿದ್ದು, 340 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಕೊರೊನಾಗೆ ಏಳು ಜನರು ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿ 5,958 ಸಕ್ರಿಯ ಪ್ರಕರಣಗಳಿದ್ದು, 137 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 9,44,057ಕ್ಕೆ ತಲುಪಿದ್ದು, ಇದುವರೆಗೂ ಕೋವಿಡ್ 12,251 ಜನರನ್ನ ಬಲಿ ಪಡೆದುಕೊಂಡಿದೆ.
ರಾಜ್ಯದಲ್ಲಿ ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.0.63 ಮತ್ತು ಮರಣ ಪ್ರಮಾಣ ಶೇ.1.62ರಷ್ಟಿದೆ. ಇವತ್ತು 68,194 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ರಾಜ್ಯದ 69,869 ಜನರು ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ.
ಯಾವ ಜಿಲ್ಲೆಯಲ್ಲಿ ಎಷ್ಟು ಜನಕ್ಕೆ ಲಸಿಕೆ?: ಬಾಗಲಕೋಟೆ 1,000, ಬಳ್ಳಾರಿ 3,356, ಬೆಳಗಾವಿ 4,773, ಬೆಂಗಳೂರು ಗ್ರಾಮಾಂತರ 679, ಬೆಂಗಳೂರು ನಗರ 7,818, ಬೀದರ್ 1,489, ಚಾಮರಾಜನಗರ 693, ಚಿಕ್ಕಬಳ್ಳಾಪುರ 2,060, ಚಿಕ್ಕಮಗಳೂರು 2,358, ಚಿತ್ರದುರ್ಗ 2,183, ದಕ್ಷಿಣ ಕನ್ನಡ 1,907, ದಾವಣಗೆರೆ 1,140 ಧಾರವಾಡ 2,056, ಗದಗ 2,778, ಹಾಸನ 2,297, ಹಾವೇರಿ 1,126, ಕಲಬುರಗಿ 2,120, ಕೊಡಗು 837, ಕೋಲಾರ 2,545, ಕೊಪ್ಪಳ 2,213, ಮಂಡ್ಯ 1,246, ಮೈಸೂರು 2,775, ರಾಯಚೂರು 2,210, ರಾಮನಗರ 1,025, ಶಿವಮೊಗ್ಗ 1,246, ತುಮಕೂರು 6,944, ಉಡುಪಿ 1,543, ಉತ್ತರ ಕನ್ನಡ 2,410, ವಿಜಯಪುರ 3,910 ಮತ್ತು ಯಾದಗಿರಿಯಲ್ಲಿ 1,123 ಜನರಿಗೆ ಕೊರೊನಾ ಲಸಿಕೆ ನೀಡಲಾಗಿದೆ.
ಕೊರೊನಾ ಪ್ರಕರಣಗಳ ಸಂಖ್ಯೆ: ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 0, ಬಳ್ಳಾರಿ 4, ಬೆಳಗಾವಿ 5, ಬೆಂಗಳೂರು ಗ್ರಾಮಾಂತರ 11, ಬೆಂಗಳೂರು ನಗರ 228, ಬೀದರ್ 0, ಚಾಮರಾಜನಗರ 1, ಚಿಕ್ಕಬಳ್ಳಾಪುರ 5, ಚಿಕ್ಕಮಗಳೂರು 1, ಚಿತ್ರದುರ್ಗ 13, ದಕ್ಷಿಣ ಕನ್ನಡ 28, ದಾವಣಗೆರೆ 5, ಧಾರವಾಡ 6, ಗದಗ 2, ಹಾಸನ 9, ಹಾವೇರಿ 0, ಕಲಬುರಗಿ 10, ಕೊಡಗು 6, ಕೋಲಾರ 5, ಕೊಪ್ಪಳ 1, ಮಂಡ್ಯ 6, ಮೈಸೂರು 25, ರಾಯಚೂರು 1, ರಾಮನಗರ 3, ಶಿವಮೊಗ್ಗ 6, ತುಮಕೂರು 18, ಉಡುಪಿ 14, ಉತ್ತರ ಕನ್ನಡ 7, ವಿಜಯಪುರ 5 ಮತ್ತು ಯಾದಗಿರಿಯಲ್ಲಿ 5 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.