ಚೆನ್ನೈ: ಕಾಲಿವುಡ್ ನಟ ಸೂರ್ಯರಿಗೆ ನಡೆಸಿದ ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿರುವುದಾಗಿ ಅವರ ಸಹೋದರ ನಟ ಕಾರ್ತಿಕ್ ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ವಿಚಾರವಾಗಿ ಕಾರ್ತಿಕ್, ಅಣ್ಣ ಮನೆಗೆ ಹಿಂದಿರುಗಿದ್ದಾರೆ ಮತ್ತು ಎಲ್ಲರೂ ಕ್ಷೇಮವಾಗಿದ್ದಾರೆ. ಕೆಲವು ದಿನಗಳ ಕಾಲ ಕ್ವಾರೆಂಟೈನ್‍ನಲ್ಲಿಯೇ ಇರಲಿದ್ದಾರೆ. ನಿಮ್ಮೆಲ್ಲರ ಪ್ರಾರ್ಥನೆ ಮತ್ತು ಹಾರೈಕೆಗಾಗಿ ಧನ್ಯವಾದ ಎಂದು ಟ್ವೀಟ್ ಮಾಡಿದ್ದಾರೆ.
Anna is back home and all safe! Will be in home quarantine for a few days. Can’t thank you all enough for the prayers and best wishes!
— Karthi (@Karthi_Offl) February 11, 2021
ಇನ್ನೂ ತಮಿಳಿನಲ್ಲಿ ಟ್ವೀಟ್ ಮಾಡಿರುವ ಸೂರ್ಯ, ಕೋವಿಡ್ ಪಾಸಿಟಿವ್ ವರದಿಯಿಂದ ಚಿಕಿತ್ಸೆಗೆ ಒಳಗಾಗಿದ್ದ ನಾನು ಇದೀಗ ಕ್ಷೇಮವಾಗಿದ್ದೇನೆ. ಕೊರೊನಾದಿಂದ ಜೀವನ ಇನ್ನೂ ಸಹಜ ಸ್ಥಿತಿಗೆ ಬಂದಿಲ್ಲ. ನಾವು ಭಯದಿಂದ ಇರಲು ಸಾಧ್ಯವಿಲ್ಲ. ಜೀವನದಲ್ಲಿ ಬರುವುದನ್ನು ಸ್ವೀಕರಿಸೋಣ, ನಾವು ಇನ್ನೂ ಜಾಗರೂಕರೂಕತೆಯಿಂದ ಮತ್ತು ಸುರಕ್ಷತೆಯಿಂದ ಇರಬೇಕು. ಈ ಸಮಯದಲ್ಲಿ ನನ್ನ ಜೊತೆಯಾಗಿ ನಿಂತ ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ಪ್ರೀತಿಗೆ ಕೃತಜ್ಞತೆಗಳು ಸಲ್ಲಿಸುತ್ತೇನೆ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ.
’கொரோனா’ பாதிப்பு ஏற்பட்டு, சிகிச்சை பெற்று நலமுடன் இருக்கிறேன். வாழ்க்கை இன்னும் இயல்பு நிலைக்கு திரும்பவில்லை என்பதை அனைவரும் உணர்வோம். அச்சத்துடன் முடங்கிவிட முடியாது. அதேநேரம் பாதுகாப்பும், கவனமும் அவசியம். அர்ப்பணிப்புடன் துணைநிற்கும் மருத்துவர்களுக்கு அன்பும், நன்றிகளும்.
— Suriya Sivakumar (@Suriya_offl) February 7, 2021
ಇತ್ತೀಚೆಗಷ್ಟೇ ನಟ ಸೂರ್ಯ ಅಭಿನಯದ ಸೂರರೈ ಪೊಟ್ರು ಸಿನಿಮಾ ಅಮೆಜಾನ್ ಪ್ರೈಮ್ ಸನಲ್ಲಿ ಬಿಡುಗಡೆಗೊಂಡು ಪ್ರೇಕ್ಷಕರ ಮನಗೆದ್ದಿತ್ತು.