ಐರಾ ಫಿಲಂಸ್ ಸಂಸ್ಥೆಯಡಿ ‘ಕುಷ್ಕ’ ಸಿನಿಮಾ ರಾಜ್ಯಾದ್ಯಂತ ಫೆಬ್ರವರಿ 26ಕ್ಕೆ ಬಿಡುಗಡೆ

Public TV
1 Min Read
KUSHKA

ಟ್ರೇಲರ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡಿದ್ದ ‘ಕುಷ್ಕ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಫೆಬ್ರವರಿ 26ಕ್ಕೆ ‘ಕುಷ್ಕ’ ಸಿನಿಮಾ ಚಿತ್ರಮಂದಿರದ ಅಂಗಳಕ್ಕೆ ಬರೋದು ಕನ್ಪರ್ಮ್ ಆಗಿದ್ದು, ಐರಾ ಫಿಲಂಸ್ ಸಂಸ್ಥೆ ‘ಕುಷ್ಕ’ ಸಿನಿಮಾವನ್ನು ವಿತರಣೆ ಮಾಡುತ್ತಿದೆ. ಐಒನ್, ಒಂದು ಶಿಕಾರಿಯ ಕಥೆ ಸಿನಿಮಾ ವಿತರಣೆ ಮಾಡಿದ್ದ ಐರಾ ಫಿಲಂಸ್ ಸಂಸ್ಥೆ ಇದೀಗ ‘ಕುಷ್ಕ’ ಸಿನಿಮಾವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದೆ. ವಿತರಣೆ ಜೊತೆ ಸಹ ನಿರ್ಮಾಪಕನಾಗಿಯೂ ಈ ಚಿತ್ರಕ್ಕೆ ಬಂಡವಾಳ ಹೂಡಿದೆ ಐರಾ ಫಿಲಂಸ್.

KUSHKA 1

ಸಿನಿಮಾ ವಿತರಣೆ ಜೊತೆ ಸಿನಿಮಾ ನಿರ್ಮಾಣದಲ್ಲೂ ನಿರತವಾಗಿರುವ ಈ ಸಂಸ್ಥೆ ಕನ್ನಡ ಹಾಗೂ ತಮಿಳು ಸಿನಿಮಾಗಳ ನಿರ್ಮಾಣಕ್ಕೆ ಮುಂದಾಗಿದೆ. ‘ಕುಷ್ಕ’ ಚಿತ್ರಕ್ಕೆ ವಿಕ್ರಮ್ ಯೋಗಾನಂದ್ ಆಕ್ಷನ್ ಕಟ್ ಹೇಳಿದ್ದು, ನಿರ್ದೇಶನದ ಜೊತೆಗೆ ಸಂಕಲನ, ಛಾಯಾಗ್ರಹಣದ ಹೊಣೆಯನ್ನು ವಿಕ್ರಮ್ ಯೋಗಾನಂದ್ ಹೊತ್ತುಕೊಂಡಿದ್ದಾರೆ. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ವಜ್ರ ವಶಪಡಿಸಿಕೊಳ್ಳಲು ಹಿಂದೆ ಬೀಳುವ ಅಂತರಾಷ್ಟ್ರೀಯ ಸ್ಮಗ್ಲರ್‍ಗಳು, ಭೂಗತ ಪಾತಕಿಗಳ ಸುತ್ತ ‘ಕುಷ್ಕ’ ಸಿನಿಮಾ ಸುತ್ತಲಿದ್ದು, ಪ್ರೇಕ್ಷಕರಿಗೆ ಕುಷ್ಕ ಭರಪೂರ ಮನರಂಜನೆ ನೀಡಲಿದೆ ಎನ್ನೋದು ಚಿತ್ರತಂಡದ ಭರವಸೆಯ ಮಾತುಗಳು.

KUSHKA 2

ಮಠ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಚಿತ್ರದಲ್ಲಿ ಕಾಮಿಡಿ ವಿಲನ್ ಪಾತ್ರಕ್ಕೆ ಬಣ್ಣಹಚ್ಚಿದ್ದು, ಲಕ್ಷ್ಮಿ ಬಾರಮ್ಮ ಧಾರಾವಾಹಿ ಖ್ಯಾತಿಯ ನಟ ಚಂದುಗೌಡ ನಾಯಕನಾಗಿ, ಸಂಜನಾ ಆನಂದ್ ನಾಯಕಿಯಾಗಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಶೋಭರಾಜ್, ಕೈಲಾಶ್ ಪಾಲ್, ರಾಕ್‍ಲೈನ್ ಸುಧಾಕರ್, ಜೀವನ್, ಅರುಣ್, ಮಾಧುರಿ ಬ್ರಗಾಂಝ ಚಿತ್ರದ ತಾರಾಬಳಗದಲ್ಲಿ ಬಣ್ಣಹಚ್ಚಿದ್ದಾರೆ. ಕುಷ್ಕ ಚಿತ್ರಕ್ಕೆ ಪ್ರತಾಪ್ ರೆಡ್ಡಿ, ಮಧು ಗೌಡ ಬಂಡವಾಳ ಹೂಡಿದ್ದು, ಸ್ಮಾರ್ಟ್ ಸ್ಕ್ರೀನ್ ಪ್ರೊಡಕ್ಷನ್ಸ್ ಹಾಗೂ ಪಿಎಂ ಪ್ರೊಡಕ್ಷನ್ಸ್ ಬ್ಯಾನರ್?ನಡಿ ಸಿನಿಮಾ ನಿರ್ಮಾಣವಾಗಿದೆ. ಬಾಲರಾಜ್ ಚಿತ್ರಕಥೆ, ಅಭಿಲಾಶ್ ಗುಪ್ತ ಸಂಗೀತ ಸಂಯೋಜನೆ, ಅಲ್ಟಿಮೇಟ್ ಶಿವು ಸಾಹಸ ನಿರ್ದೇಶನ ಚಿತ್ರಕ್ಕಿದೆ. ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ‘ಕುಷ್ಕ’ ಸಿನಿಮಾ ಐರಾ ಫಿಲಂಸ್ ಸಂಸ್ಥೆಯಡಿ ಇದೇ ತಿಂಗಳ 26ಕ್ಕೆ ರಾಜ್ಯಾದ್ಯಂತ ಗ್ರ್ಯಾಂಡ್ ರಿಲೀಸ್ ಆಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *