ನವದೆಹಲಿ: ವ್ಯಕ್ತಿಯೊಬ್ಬ ವೃದ್ಧ ಟೈಲರ್ ನನ್ನು ಕತ್ತು ಹಿಸುಕಿ ಕೊಲೆಗೈದ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಅಬ್ದುಲ್ ಮಜೀದ್ ಖಾನ್(65) ಹಾಗೂ ಆರೋಪಿಯನ್ನು ಸಲೀಂ ಎಂದು ಗುರುತಿಸಲಾಗಿದೆ. ಹೊಲಿದುಕೊಟ್ಟ ಶರ್ಟ್ ಸರಿಯಾಗಿಲ್ಲ ಎಂದು ಸಿಟ್ಟಿಗೆದ್ದ ಸಲೀಂ ವೃದ್ಧನನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಖಾನ್ ಪುತ್ರ ಆರೋಪಿಸಿದ್ದಾನೆ.
ಅಬ್ದುಲ್ ಮಜೀದ್ ಖಾನ್ ಹೊಲಿದ ಶರ್ಟ್ ಸರಿಯಾಗಿಲ್ಲವೆಂದು ಸಲೀಂ ಕೋಪಿಸಿಕೊಂಡಿದ್ದ. ಅಲ್ಲದೆ ಈ ಸಂಬಂಧ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಪರಿಣಾಮ ಇಬ್ಬರ ನಡುವಿನ ವಾಗ್ವಾದ ತಾರಕಕ್ಕೇರಿ ಸಲೀಂ, ಖಾನ್ ನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಅಬ್ದುಲ್ ಮಜೀದ್ ಖಾನ್ ಅವರ ಮರಣೋತ್ತರ ಪರೀಕ್ಷೆಯಲ್ಲಿ ಸಾವಿಗೆ ನಿಖರವಾದ ಕಾರಣವನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಅಲ್ಲಿನ ಎಸ್ಪಿ ಶ್ಲೋಕ್ ಕುಮಾರ್ ಹೇಳಿದ್ದಾರೆ.