ಸಾಲು ಸಾಲು ಜಾತ್ರೆಗಳ ಹೊತ್ತಲ್ಲಿ ಗುಡ್‍ನ್ಯೂಸ್ – ದೇವರ ಜಾತ್ರಾ, ರಥೋತ್ಸವಗಳಿಗೆ ಸಿಕ್ತು ಪರ್ಮಿಷನ್

Public TV
1 Min Read
JATHRE 4

– ಪ್ರಸಾದ, ಅನ್ನದಾಸೋಹಗಳಿಗೂ ಗ್ರೀನ್‍ಸಿಗ್ನಲ್

ಬೆಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆ ರಾಜ್ಯದ ವಿವಿಧ ದೇವಾಲಯಗಳು ಹಾಗೂ ಜಾತ್ರಾ ಮಹೋತ್ಸವಗಳಿಗೆ ವಿಧಿಸಿದ ಷರತ್ತು ಹಾಗೂ ನಿಯಮಗಳನ್ನು ತೆರವುಗೂಳಿಸಿ ರಾಜ್ಯ ಧಾರ್ಮಿಕ ದತ್ತಿ ಇಲಾಖೆ ಅಯುಕ್ತ ಅದೇಶ ಹೊರಡಿಸಿದೆ.

JATHRE

ಫೆಬ್ರವರಿ ತಿಂಗಳಲ್ಲಿ ರಾಜ್ಯದಲ್ಲೆಡೆ ಧಾರ್ಮಿಕ ಜಾತ್ರಾ ಮಹೋತ್ಸವಗಳು ನಡೆಯಲಿವೆ. ಸಾವಿರಾರು ಭಕ್ತಸಮೂಹ ಮತ್ತು ದೇವಾಲಯದ ಸಮಿತಿಗಳು ಮನವಿ ಸಲ್ಲಿಸಿದ್ದವು. ಈ ಎಲ್ಲಾ ಮನವಿಗಳನ್ನು ಪರಿಗಣಿಸಿ ಧಾರ್ಮಿಕ ಭಾವನೆಗಳಿಗೆ ಗೌರವಿಸುವ ಮೂಲಕ ಈ ತಿಂಗಳ ನಡೆಯುವ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗಿದೆ.

JATHRE 3

ಈ ಹಿಂದೆ ಕೋವಿಡ್ ಕಾರಣದಿಂದ ಜಾತ್ರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮ, ಉತ್ಸವ, ಪ್ರಸಾದ ವಿತರಣೆ, ದಾಸೋಹ, ತಿರ್ಥ ವಿತರಣೆ ಮತ್ತು ದೇವರ ದರ್ಶನ, ಹಾಗೂ ಬ್ರಹ್ಮರಥೋತ್ಸವ ಸೇರಿದಂತೆ ಇತರ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿತ್ತು. ಆದರೆ ಭಕ್ತರಿಂದ ದೇವಾಲಯಗಳಿಂದ ಮನವಿ ಬಂದ ಹಿನ್ನೆಲೆ ಸೆಪ್ಟೆಂಬರ್ 1ರಂದು ಕೆಲವು ನಿಯಮಗಳಲ್ಲಿ ಸಡಿಲಗೂಳಿಸಲಾಗಿತ್ತು.

JATHRE 1

ಫೆಬ್ರವರಿ ತಿಂಗಳು ಅನೇಕ ಜಾತ್ರೆ, ಮಹೋತ್ಸವ, ಉತ್ಸವ ನಡೆಯಲಿದ್ದು, ಭಕ್ತರ ಭಾವನೆಗಳಿಗೆ ಮನ್ನಣೆ ನಿಡುವ ದೃಷ್ಟಿಯಿಂದ ಈ ಹಿಂದೆ ನಿಷೇಧ ಹೇರಿದ್ದ ಎಲ್ಲಾ ನಿಯಮಗಳನ್ನು ತೆರವು ಮಾಡಿ ಅದೇಶ ಹೊರಡಿಸಲಾಗಿದೆ.

JATHRE 2

Share This Article
Leave a Comment

Leave a Reply

Your email address will not be published. Required fields are marked *