ಮುಖ್ಯಮಂತ್ರಿಗಳು ಥಟ್ ಅಂತ ಮೀಸಲಾತಿ ಘೋಷಣೆ ಮಾಡಲು ಆಗಲ್ಲ: ಈಶ್ವರಪ್ಪ

Public TV
1 Min Read
nlm eshwarappa

– ಕುರುಬರಿಗೆ ಎಸ್‍ಟಿ ಮೀಸಲಾತಿ ಸಿಕ್ಕ ನಂತರವೇ ಹೋರಾಟ ಅಂತ್ಯ

ನೆಲಮಂಗಲ: ಕರ್ನಾಟಕದಲ್ಲಿ ಮುಖ್ಯಮಂತ್ರಿಗಳು ಥಟ್ ಅಂತ ಎಸ್‍ಟಿ ಘೋಷಣೆ ಮಾಡಲು ಬರುವುದಿಲ್ಲ ಎಂದು ಹೇಳುವ ಮೂಲಕ ಸದನದಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಹೇಳಿಕೆಯನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ಸಮರ್ಥಿಸಿಕೊಂಡಿದ್ದಾರೆ.

yatnlal cm bsy

ಫೆಬ್ರವರಿ 7 ರಂದು ಕುರುಬರ ಸಮಾವೇಶ ಹಿನ್ನಲೆ ಸಿದ್ಧತೆ ಬಗ್ಗೆ ಸಚಿವ ಈಶ್ವರಪ್ಪ ಸಮಾವೇಶದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಮುಖ್ಯಮಂತ್ರಿಗಳು ಥಟ್ ಅಂತ ಎಸ್‍ಟಿ ಘೋಷಣೆ ಮಾಡಲು ಬರುವುದಿಲ್ಲ. ಎಸ್‍ಟಿ, ಎಸ್‍ಸಿ ಮಾಡುವೆ ಎಂದು ಯಾವ ಮುಖ್ಯಮಂತ್ರಿಯೂ, ಯಾವ ಸಮಾಜಕ್ಕೂ ಹೇಳಲು ಬರುವುದಿಲ್ಲ. ಕುಲಶಾಸ್ತ್ರ ಹಾಗೂ ಜನಜಾಗೃತಿಯ ಜೊತೆ ದಾಖಲೆಗಳು ನೀಡುವ ಮೂಲಕ ಎಸ್‍ಟಿ ಅವಕಾಶ ಸಾಧ್ಯ ಎಂದರು.

bsy

ಹಿಂದೂ ಸಮಾಜದಲ್ಲಿ ಕುರುಬರಿಗೆ ಎಸ್‍ಟಿ ಸಿಕ್ಕರೆ ನ್ಯಾಯ ಸಿಕ್ಕಹಾಗೆ. ಈ ಹೋರಾಟ ಸ್ವಾಮೀಜಿಗಳಿಂದ ಆರಂಭವಾಗಿದೆ, ಎಸ್‍ಟಿ ಸಿಕ್ಕ ನಂತರವೇ ಅಂತ್ಯವಾಗಲಿದೆ. ಈ ಹೋರಾಟದಲ್ಲಿ 60 ಲಕ್ಷ ಕುರುಬರು ಒಟ್ಟಾಗಿ ಇರಲಿದ್ದೇವೆ. ವ್ಯವಸ್ಥಿತವಾಗಿ ಸಂವಿಧಾನ ಬದ್ಧವಾಗಿ ಎಸ್‍ಟಿ ಪಡೆಯುವ ವಿಶ್ವಾಸವಿದೆ. ಕುರುಬರ ಶಕ್ತಿ ಪ್ರದರ್ಶನ ಅಥವಾ ಒಗ್ಗಟ್ಟು ಎಂದುಕೊಳ್ಳಬಹುದು. ಒಟ್ಟಾಗಿ ಸೇರಿಸುವ ಪ್ರಯತ್ನ ಯಾರೂ ಮಾಡಿರಲಿಲ್ಲ. ಈಗ ಸ್ವಾಮೀಜಿ ನೇತೃತ್ವದಲ್ಲಿ ನಡೆದಿದೆ. ಮುಂದಿನ ದಿನಗಳಲ್ಲಿ ಇದಕ್ಕಿಂತ ಮೂರು ಪಟ್ಟು ಶಕ್ತಿ ಪ್ರದರ್ಶನವಾಗಲಿದೆ ಎಂದರು.

vlcsnap 2021 02 05 22h29m11s167

ಫೆಬ್ರವರಿ 7 ರಂದು ಕುರುಬರ ಸಮಾವೇಶ ಹಿನ್ನಲೆ, ಸಿದ್ದತೆ ಬಗ್ಗೆ ಸಚಿವ ಈಶ್ವರಪ್ಪ ಸಮಾವೇಶದ ಸ್ಥಳಕ್ಕೆ ಭೇಟಿ ಮಾಡಿ ಪರಿಶೀಲಿಸಿದರು. ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಮಾದವಾರದ ಬಿಐಇಸಿ ಮೈದಾನದಲ್ಲಿ ಸಿದ್ಧತೆ ಬಗ್ಗೆ ವೀಕ್ಷಣೆ ನಡೆಸಿದರು. ಸುಮಾರು ಲಕ್ಷಕ್ಕೂ ಮಂದಿ ಸಮುದಾಯದ ಜನರು ಸೇರುವ ಹಿನ್ನಲೆಯಲ್ಲಿ, ಇಂದೇ ತಯಾರಿಯ ಸಿದ್ಧತೆ ವೀಕ್ಷಣೆ ಮಾಡಿದರು.

vlcsnap 2021 02 05 22h29m23s490

ಸಮಾವೇಶಕ್ಕೆ 1.50 ಲಕ್ಷ ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ನಾಲ್ಕು ಲಕ್ಷ ಜನರಿಗೆ ಊಟದ ವ್ಯವಸ್ಥೆ ಜೊತೆಗೆ, ರಾಜ್ಯ ಹಾಗೂ ಹೊರ ರಾಜ್ಯದ ಮುಖಂಡರು ಸಮುದಾಯದ ಜನರು ಭಾಗಿ ಯಾಗಲಿದ್ದಾರೆ. ಬರುವ ಜನರಿಗೆ ಬಿಐಇಸಿ ಮುಂಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *