ಮುಂಬೈ: ಸತ್ಯ ಇನ್ ಲವ್ ಚಿತ್ರದ ನಾಯಕಿ, ಬಾಲಿವುಡ್ ನಟಿ ಜೆನಿಲಿಯಾ ಡಿಸೋಜಾ ತಮ್ಮ 9ನೇ ವಿವಾಹ ವಾರ್ಷಿಕೋತ್ಸವವನ್ನು ಬುಧವಾರ ಆಚರಿಸಿಕೊಂಡಿದ್ದಾರೆ. ಈ ಕುರಿತ ವಿಡಿಯೋವೊಂದನ್ನು ರಿತೇಶ್ ದೇಶ್ ಮುಖ್ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾಲ್ಲಿ ಫುಲ್ ವೈರಲ್ ಆಗುತ್ತಿದೆ.
ವೀಡಿಯೋ ಹಂಚಿಕೊಂಡಿರುವ ರಿತೇಶ್ ಮ್ಯಾರೇಜ್ ಅನಿವರ್ಸರಿ ಸೆಲೆಬ್ರೆಷನ್‍ನ ಎಲ್ಲಾ ರೀತಿಯ ವ್ಯವಸ್ಥೆಯನ್ನು ಸ್ವತಃ ಜೆನಿಲಿಯಾ ಖುದ್ದಾಗಿ ಮಾಡಿದ್ದಾರೆ. ನಮ್ಮ ಅನಿವರ್ಸರಿ ಸೆಲೆಬ್ರೆಷನ್‍ಗೆ ದೆಹಲಿಯಿಂದ ವಿಕ್ರಮ್‍ಜಿತ್ ರಾಯ್ ಬಾಣಸಿಗನಾಗಿ ಆಗಮಿಸಿದ್ದರು ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.
View this post on Instagram
ಇದೇ ರೀತಿ ಜೆನಿಲಿಯಾ ಕೂಡ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದು, ನನ್ನ ಜೀವನದ ಅದ್ಭುತ ಕ್ಷಣಗಳನ್ನು ರಿತೇಶ್ ಜೊತೆ ಆಚರಿಸುತ್ತಿದ್ದೇನೆ. ನಮ್ಮ ಈ ಸುಮಧುರವಾದ ದಿನದಂದು ದೆಹಲಿಯಿಂದ ಆಗಮಿಸಿ ನಾವು ಕೇಳಿದ ಎಲ್ಲಾ ವೆಜಿಟೇರಿಯನ್ ಮೆನು ಹಾಗೂ ಸ್ವೀಟ್‍ಗಳನ್ನು ಮಾಡಿಕೊಟ್ಟಿದಕ್ಕೆ ವಿಕ್ರಮ್‍ಜಿತ್ ರಾಯ್‍ರಿಗೆ ಧನ್ಯವಾದ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ.
View this post on Instagram
ರಿತೇಶ್ ಹಾಗೂ ಜೆನಿಲಿಯಾ 2003ರಲ್ಲಿ ತುಜೆ ಮೆರಿ ಕಸಮ್ ಸಿನಿಮಾದಲ್ಲಿ ಒಟ್ಟಾಗಿ ಅಭಿನಯಿಸಿದ್ದರು. 2012 ರಂದು ಇಬ್ಬರು ವಿವಾಹವಾದರು. ಇದೀಗ ಈ ಜೋಡಿಗೆ ರಿಯಾನ್ ಹಾಗೂ ರಹೈಲ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.