ಪರಿಷತ್‍ನಲ್ಲಿ ಇನ್ನು ಮೊಬೈಲ್ ಬ್ಯಾನ್ – ಸಭಾಪತಿಯಿಂದ ಘೋಷಣೆ

Public TV
2 Min Read
congress mlc Prakash Rathod 1

ಬೆಂಗಳೂರು: ವಿಧಾನ ಪರಿಷತ್‍ನಲ್ಲಿ ಮೊಬೈಲ್ ಬಳಕೆಯನ್ನು ನಿಷೇಧ ಮಾಡಲಾಗಿದೆ. ಸಭಾಪತಿ ಪ್ರತಾಪ್‍ಚಂದ್ರ ಶೆಟ್ಟಿ ಅಧಿಕೃತ ಆದೇಶ ಹೊರಡಿಸಿ ಮೊಬೈಲ್ ಬಳಕೆಗೆ ನಿರ್ಬಂಧ ಹೇರಿದ್ದಾರೆ.

ಈ ಹಿಂದೆ 2011ರಲ್ಲೇ ಮೊಬೈಲ್ ನಿಷೇಧಿಸಿದರೂ ಸದನದಲ್ಲಿ ಮೊಬೈಲ್ ರಿಂಗಣಿಸುತ್ತಿದ್ದವು. ಅಲ್ಲದೆ ಇನ್ನೂ ಕೆಲವರು ಅಶ್ಲೀಲ ವಿಡಿಯೋ, ಚಿತ್ರಗಳನ್ನು ಸಹ ನೋಡುತ್ತಿದ್ದರು. ಇದಕ್ಕೆ ಉದಾಹರಣೆ ಎಂಬಂತೆ ಇತ್ತೀಚೆಗೆ ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ಅಶ್ಲೀಲ ವಿಡಿಯೋ ನೋಡಿದ ಆರೋಪ ಕೇಳಿ ಬಂದಿತ್ತು. ಹೀಗಾಗಿ ಇದೀಗ ಪರಿಷತ್‍ನಲ್ಲಿ ಕಟ್ಟುನಿಟ್ಟಾಗಿ ಮೊಬೈಲ್ ಬ್ಯಾನ್ ಮಾಡಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಘೋಷಿಸಿದ್ದಾರೆ.

congress mlc Prakash Rathod 1

ಸಭಾಪತಿಗಳ ಘೋಷಣೆ ಹಿನ್ನೆಲೆ ವಿಧಾನ ಪರಿಷತ್ ನಲ್ಲಿ ಇನ್ಮುಂದೆ ಮೊಬೈಲ್ ಬ್ಯಾನ್ ಆಗಿದೆ. ಒಂದು ವೇಳೆ ಮಾಹಿತಿಗಾಗಿ ಮೊಬೈಲ್ ನೋಡಬೇಕು ಎಂದರೆ ಸಭಾಪತಿಗಳ ಅನಮತಿ ಕಡ್ಡಾಯವಾಗಿದೆ. ಈ ಕುರಿತು ಸಭಾಪತಿಗಳಿಂದ ಅಧಿಕೃತ ಘೋಷಣೆಯಾಗಿದೆ. ಪ್ರಕಟಣೆ ಮೂಲಕ ಸಭಾಪತಿ ಪ್ರತಾಪ್‍ಚಂದ್ರ ಶೆಟ್ಟಿ ಅವರು ಸದನಕ್ಕೆ ಮಾಹಿತಿ ನೀಡಿದ್ದಾರೆ.

Pratap Chandra Shetty

ಈ ಹಿಂದೆ ಜೂನ್ 3, 2011 ರಲ್ಲಿಯೇ ಸದನದಲ್ಲಿ ಮೊಬೈಲ್ ಬಳಕೆ ಮಾಡಬಾರದು ಎಂದು ಆದೇಶವಾಗಿತ್ತು. ಆದರೂ ಸದನದೊಳಗೆ ಮೊಬೈಲ್‍ಗಳು ರಿಂಗಣಿಸುತ್ತಿದ್ದವು. ಇದೀಗ ಸಭಾಪತಿಗಳು ಖಡಕ್ ಎಚ್ಚರಿಕೆ ನೀಡಿದ್ದು, ಇದು ಕಡೇಯ ವಾರ್ನಿಂಗ್. ಇನ್ಮುಂದೆ ಸದನದೊಳಗೆ ಮೊಬೈಲ್ ತರುವಂತಿಲ್ಲ. ಒಂದು ವೇಳೆ ತಂದರೆ ಸೂಕ್ತ ಕ್ರಮ ಜರುಗಿಸಲಾಗುವುದು. ಮೊಬೈಲ್ ತಂದರೂ ಸ್ವಿಚ್ ಆಫ್ ಮಾಡಬೇಕು. ಮಾಹಿತಿಗಾಗಿ ಮೊಬೈಲ್ ತರುವುದಾದರೆ, ಸಭಾಪತಿಗಳ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಪ್ರತಾಪ್‍ಚಂದ್ರ ಶೆಟ್ಟಿ ಪ್ರಕಟಿಸಿದ್ದಾರೆ.

congress mlc Prakash Rathod e1612188294182

ಜನವರಿ 29ರಂದು ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ಮೇಲೆ ಸದನದಲ್ಲಿ ಅಶ್ಲೀಲ ವಿಡಿಯೋ ವೀಕ್ಷಣೆ ಮಾಡಿದ ಗಂಭೀರ ಆರೋಪ ಕೇಳಿ ಬಂದಿತ್ತು. ಪ್ರಶ್ನೋತ್ತರ ಅವಧಿ ವೇಳೆ ಪ್ರಕಾಶ್ ರಾಥೋಡ್ ಮೊಬೈಲ್ ವೀಕ್ಷಣೆ ಮಾಡುತ್ತಿದ್ದರು. ಈ ವೇಳೆ ಮೊಬೈಲಿನಲ್ಲಿ ಅಶ್ಲೀಲ ವಿಡಿಯೋಗಳು ಇರುವುದು ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಈ ವಿಚಾರದ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದ ಪ್ರಕಾಶ್ ರಾಥೋಡ್, ನಾನು ಉದ್ದೇಶ ಪೂರ್ವಕವಾಗಿ ಏನನ್ನೂ ನೋಡಿಲ್ಲ. ನನ್ನ ಮೊಬೈಲ್ ನಲ್ಲಿ ಅಂತಹ ಯಾವುದೇ ವಿಡಿಯೋ ಫೋಟೋ ಇರಲಿಲ್ಲ. ಗ್ರೂಪ್ ನಲ್ಲಿ ಯಾರಾದರು, ಏನಾದರು ಕಳುಹಿಸಿರಬಹುದು. ನಾನು ಡೌನ್‍ಲೋಡ್ ಮಾಡಿಲ್ಲ ಮೆಮೊರಿ ಫುಲ್ ಆಗಿದ್ದನ್ನು ಡಿಲೀಟ್ ಮಾಡುತ್ತಿದ್ದೆ ಎಂದು ಹೇಳಿದ್ದರು.

congress mlc Prakash Rathod 1

ಇಂದು ಸದನದಲ್ಲಿ ನನ್ನ ಪ್ರಶ್ನೆ ಇತ್ತು. ಅದರ ಬಗ್ಗೆ ಮಾಹಿತಿ ಹುಡುಕುತ್ತಿದ್ದೆ. ಅದನ್ನು ಬಿಟ್ಟು ನಾನು ಬೇರೆ ಯಾವುದೇ ಚಿತ್ರ ಅಥವಾ ವಿಡಿಯೋ ವೀಕ್ಷಿಸಿಲ್ಲ. ನನಗೆ ಗೊತ್ತಿಲ್ಲದೆ ಅಂದಹದ್ದು ಏನಾದರೂ ಕಂಡಿದ್ದರೆ ಅದಕ್ಕೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ರಾಥೋಡ್ ಹೇಳಿದ್ದರು. ರಾಥೋಡ್ ಅವರು ಮೊಬೈಲಿನ ಗ್ಯಾಲರಿಗೆ ಹೋಗಿದ್ದರು. ಈ ವೇಳೆ ಸ್ಕ್ರಾಲ್ ಮಾಡುವಾಗ ಅಶ್ಲೀಲ ವಿಡಿಯೋಗಳು ಕಾಣಿಸಿದ್ದವು. ವಿಡಿಯೋಗಳು ಎಲ್ಲವೂ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು.

Share This Article
Leave a Comment

Leave a Reply

Your email address will not be published. Required fields are marked *