ಬಜೆಟ್ 2021: ವಿತ್ತ ಸಚಿವೆ ಸೀತಾರಾಮನ್ ಟೀಂ ಸದಸ್ಯರ ಪರಿಚಯ

Public TV
2 Min Read
Budget

ನವದೆಹಲಿ: ಫೆಬ್ರವರಿ 1ರಂದು ದೇಶದ ಬಜೆಟ್ ಮಂಡನೆಯಾಗಲಿದೆ. ಈ ವರ್ಷದ ಬಜೆಟ್ ಸಂಪೂರ್ಣ ಭಿನ್ನವಾಗಿರಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಇಡೀ ದೇಶದ ಕಣ್ಣು ಸೀತಾರಾಮನ್ ಹೊತ್ತು ತರುವ ಹೊತ್ತಿಗೆ ಮೇಲಿದೆ. ಬಜೆಟ್ ಸಿದ್ಧಪಡಿಸುವ ನಿರ್ಮಲಾ ಸೀತಾರಾಮನ್ ಟೀಂನಲ್ಲಿರುವ ಸದಸ್ಯರ ಪರಿಚಯ ಇಲ್ಲಿದೆ.

Ajau Bhooshan Pande

1. ಅಜಯ್ ಭೂಷಣ್ ಪಾಂಡೆ: ಹಣಕಾಸು ಸಚಿವಾಲಯದ ಕಾರ್ಯದರ್ಶಿ ಅಜಯ್ ಭೂಷಣ್, 1984ರ ಬ್ಯಾಚ್‍ನ ಐಎಎಸ್ ಅಧಿಕಾರಿ ಮತ್ತು ಯುಐಡಿಎಐ ಸಿಇಓ ಸಹ ಆಗಿದ್ದರು. ಕಾನ್ಪುರ ಐಐಟಿಯಲ್ಲಿ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ ಪಡೆದು, ಮಿನ್‍ಸೇನಾ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್ ನಲ್ಲಿ ಪಿಎಚ್‍ಡಿ ಸಹ ಪಡೆದಿದ್ದಾರೆ. ಫೆಬ್ರವರಿ ಅಂತ್ಯಕ್ಕೆ ಅಜಯ್ ಭೂಷಣ್ ನಿವೃತ್ತಿ ಹೊಂದಲಿದ್ದಾರೆ. ಆರೋಗ್ಯ ಮತ್ತು ರಕ್ಷಣೆಗೆ ನಿಧಿ ಹೆಚ್ಚಳ ಹಾಗೂ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಅನುದಾನ ಸಮತೋಲನೆ ಜವಾಬ್ದಾರಿ ಪಾಂಡೆ ಅವರ ಮೇಲಿದೆ.

Krishnamurthy

2. ಕೃಷ್ಣಮೂರ್ತಿ ಸುಬ್ರಮಣಿಯನ್: ಮುಖ್ಯ ಆರ್ಥಿಕ ಸಲಹಗಾರರಾಗಿರುವ ಕೃಷ್ಣಮೂರ್ತಿ ಅವರು ಫೈನಾನಿಶಿಯಲ್ ಇಕಾನಮಿಕ್ಸ್ ನಲ್ಲಿ ಪಿಹೆಚ್‍ಡಿ ಪಡೆದಿದ್ದಾರೆ. ಮುಖ್ಯ ಆರ್ಥಿಕ ಸಲಹೆಗಾರರುವ ಮುನ್ನ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ ಉಪನ್ಯಾಸಕರಾಗಿದ್ದರು. ಬ್ಯಾಂಕಿಂಗ್, ಕಾರ್ಪೋರೇಟ್ ನಿಯಮ, ಆರ್ಥಿಕ ಕಾನೂನುನಗಳ ಎಕ್ಸಪರ್ಟ್ ಆಗಿದ್ದಾರೆ. ಲಾಕ್‍ಡೌನ್ ವೇಳೆ ಸುಬ್ರಮಣಿಯನ್ ಭಾರತದ ಅರ್ಥವ್ಯವಸ್ಥೆ ವಿ ಶೇಪ್ ನಲ್ಲಿ ದಾಖಲಾಗಿದೆ ಎಂದು ಹೇಳಿದ್ದರು.

TV Somanathan

3. ಟಿ.ವಿ.ಸೋಮನಾಥನ್: ಇವರು ಖರ್ಚು ವಿಭಾಗದ ಮುಖ್ಯಸ್ಥರಾಗಿದ್ದು, ಅರ್ಥಶಾಸ್ತ್ರದಲ್ಲಿ ಪಿಎಚ್‍ಡಿ ಪಡೆದಿದ್ದಾರೆ. ಸೋಮನಾಥನ್ 1987ನೇ ಬ್ಯಾಚಿನ ಐಎಎಸ್ ಅಧಿಕಾರಿಯಾಗಿದ್ದು, ತಮಿಳುನಾಡಿನಲ್ಲಿ ಸೇವೆ ಸಲ್ಲಿಸಿದ್ದಾರೆ. ಇಷ್ಟು ಮಾತ್ರ ಅಲ್ಲದೇ ಸೋಮನಾಥನ್ ವಿಶ್ವ ಬ್ಯಾಂಕ್ ನಲ್ಲಿಯೂ ಕಾರ್ಯನಿರ್ವಹಿಸಿದ್ದಾರೆ. ಪ್ರಧಾನ ಮಂತ್ರಿ ಕಾರ್ಯಾಲಯದ ಜಂಟಿ ಕಾರ್ಯದರ್ಶಿ ಸಹ ಆಗಿದ್ದರು.

Tarun Bajaj

4. ತರೂಣ್ ಬಜಾಜ್: ಸದ್ಯ ವಿತ್ತ ಸಚಿವಾಲಯದ ಆರ್ಥಿಕ ವಿಭಾಗದಲ್ಲಿ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. 1988ರ ಹರಿಯಾಣ ಬ್ಯಾಚಿನ ಐಎಎಸ್ ಅಧಿಕಾರಿ. ವಿತ್ತ ಸಚಿವಾಲಯಕ್ಕೂ ಮುನ್ನ ತರೂಣ್ ಬಜಾಜ್ ಪ್ರಧಾನ ಮಂತ್ರಿಗಳ ಕಾರ್ಯಲಯದ ಸೇವೆಯಲ್ಲಿದ್ದರು. ಮೂರು ಆತ್ಮನಿರ್ಭರ ಭಾರತ ಪ್ಯಾಕೇಜ್ ಸಿದ್ಧಪಡಿಸಿದ ತಂಡದಲ್ಲಿ ತರೂಣ್ ಬಜಾಜ್ ಪ್ರಮುಖರು.

Debasheesha Pande

5. ದೇಬಶೀಷ್ ಪಾಂಡಾ: ವಿತ್ತ ಸಚಿವಾಲಯದ ಆರ್ಥಿಕ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರೋ ದೇಶಾಶೀಷ್ ಪಾಂಡೆ, 1987ರ ಉತ್ತರ ಪ್ರದೇಶದ ಬ್ಯಾಚ್ ಐಎಎಸ್ ಅಧಿಕಾರಿ. ರಿಸರ್ವ್ ಬ್ಯಾಂಕ್ ಜೊತೆಗೂಡಿ ಅರ್ಥ ವ್ಯವಸ್ಥೆಯ ಸ್ಥಿರತೆ ಮತ್ತು ಸಮತೋಲನ ಕಾಯ್ದುಕೊಳ್ಳುವ ಜವಾಬ್ದಾರಿ ಪಾಂಡಾ ರ ಮೇಲಿದೆ.

Tuhin Kant Pandey

6. ತುಹೀನ್ ಕಾಂತ್ ಪಾಂಡೆ: ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಓಡಿಶಾದ 1987ರ ಬ್ಯಾಚಿನ ಐಎಎಸ್ ಅಧಿಕಾರಿ. ಬಜೆಟ್ ಕಾರ್ಯಗಳ ನಿರ್ವಹಣೆಯ ಜವಾಬ್ದಾರಿ ಪಾಂಡೆ ಅವರ ಮೇಲಿದೆ.

Share This Article
Leave a Comment

Leave a Reply

Your email address will not be published. Required fields are marked *