ಹಾವೇರಿ: ಕೆಪಿಎಸ್‍ಸಿಯ ಎಫ್‍ಡಿಎ ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿ ತಾಲೂಕಿನ ಅಗಡಿ ಗ್ರಾಮದ ಪೊಲೀಸ್ ಪೇದೆಯನ್ನು ಸಿಸಿಬಿ ಪೊಲೀಸ್‍ರು ಬಂಧಿಸಿ ವಿಚಾರಣೆಗೆ ಕರೆದುಕೊಂಡು ಹೋಗಿದ್ದಾರೆ.
ಅಗಡಿ ಗ್ರಾಮದ ನಿವಾಸಿ ಮುಸ್ತಾಕ್ ಅಹ್ಮದ್ ಕ್ವಾಟಿ ನಾಯಕ್ ಬಂಧಿತ ಪೊಲೀಸ್ ಪೇದೆ. ಇಂದು ಪೇದೆಯನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಸಿಟಿ ರಿಸರ್ವ್ ಪೊಲೀಸ್ ನಲ್ಲಿ ಕಾನ್‍ಸ್ಟೇಬಲ್ ಆಗಿ ಮುಸ್ತಾಕ್ ಅಹ್ಮದ್ ಕ್ವಾಟಿ ನಾಯಕ ಕೆಲಸ ಮಾಡುತ್ತಿದ್ದ, ಮಂಗಳವಾರ ತಡರಾತ್ರಿ ಅಗಡಿ ಗ್ರಾಮದ ಮನೆಯಿಂದ ವಶಕ್ಕೆ ಪಡೆದುಕೊಂಡು ಸಿಸಿಬಿ ಹೋಗಿದ್ದಾರೆ.
ಬಂಧಿತ ಮುಸ್ತಾಕ್ ಪ್ರಶ್ನೆ ಪತ್ರಿಕೆ ಹಂಚಿಕೆಯ ಡೀಲ್ ಒಪ್ಪಿಕೊಂಡಿದ್ದ ಆರೋಪಗಳು ಕೇಳಿ ಬಂದಿವೆ. ಈಗಾಗಲೇ ಬಂಧನದಲ್ಲಿರುವ ರಮೇಶ್ ಜೊತೆ ಮುಸ್ತಾಕ್ ನಿಕಟ ಸಂಪರ್ಕದಲ್ಲಿದ್ದ ಎಂಬುದರ ಬಗ್ಗೆ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಜನವರಿ 24ರಂದು ನಿಗದಿಯಾಗಿದ್ದ ಎಫ್‍ಡಿಎ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಜನವರಿ 23ರಂದು ಲೀಕ್ ಆಗಿತ್ತು.