ಸರ್ಕಾರ ಬಿದ್ದೋಗಬಹುದು ಎಂದು ಹೆಚ್ಚು ಅಭಿವೃದ್ಧಿ ಕೆಲಸ ಮಾಡಿಕೊಂಡೆ: ಪುಟ್ಟರಾಜು

Public TV
1 Min Read
Puttaraju 1

– ನಾರಾಯಣಗೌಡರನ್ನ ಹಾಡಿ ಹೊಗಳಿದ ಪುಟ್ಟರಾಜು

ಮಂಡ್ಯ: ಬಹುತೇಕ ನಮಗೆ ಗೊತ್ತಿತ್ತು. ಈ ಸರ್ಕಾರ ಎಷ್ಟು ದಿನ ಇರುತ್ತೋ? ಇರಲ್ವೋ? ಅಂತ. ಈ ಕಾರಣಕ್ಕಾಗಿ ನನ್ನ ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಂಡೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದ್ದಾರೆ.

ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ನಡೆದ ಮೇಲುಕೋಟೆ ಕ್ಷೇತ್ರದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಸಚಿವನಿದ್ದಾಗ ಎಲ್ಲಾ ಕೆಲಸವನ್ನು ಅವರ ಕ್ಷೇತ್ರಕ್ಕೆ ಮಾಡಿಕೊಂಡರು ಎಂದು ಎಲ್ಲರೂ ಗಲಾಟೆ ಮಾಡಿದ್ದರು. ನಾವು ಇದ್ದ ಸರ್ಕಾರ ಎಷ್ಟು ದಿನ ಇರುತ್ತದೋ, ಇರಲ್ವೋ ಅನ್ನೋದು ನಮಗೆ ಗೊತ್ತಿತ್ತು. ಇದೇ ಕಾರಣಕ್ಕೆ ನಾನು ಸ್ವಲ್ಪ ಸ್ವಾರ್ಥದ ಕೆಲಸಗಳನ್ನು ಹೆಚ್ಚಾಗಿ ಮಾಡಿದೆ. ಈ ಮೂಲಕ ನನ್ನ ಕೇತ್ರದಲ್ಲಿ ನೀರಾವರಿಯನ್ನು ಅಭಿವೃದ್ಧಿ ಮಾಡಿದ್ದೇನೆ ಎಂದರು.

Narayan Gowda puttaraju

ಇನ್ನೂ ವೇದಿಕೆಯಲ್ಲಿ ಕುಳಿತಿದ್ದ ಸಚಿವ ನಾರಾಯಣಗೌಡ ಕುರಿತು ಮಾತನಾಡಿದ ಪುಟ್ಟರಾಜು, ನಮ್ಮನ್ನು ನೀವು ಕಿತ್ತಾಕಿದ್ದೀರಾ ಅಂತಾ ನಮಗೆ ಕೋಪನೂ ಇಲ್ಲ, ಬೇಸರವೂ ಇಲ್ಲ ನಾರಾಯಣಗೌಡರೇ. ರಾಜಕೀಯ ಚದುರಂಗದಾಟದಲ್ಲಿ ಮೇಲೆ ಇದ್ದವರು ಕೆಳಗೆ ಬರಹುದು, ಕೆಳಗೆ ಇದ್ದವರು ಮೇಲೆ ಬರಬಹುದು. ಈಗ ನೀವು ಸಚಿವರಾಗಿದ್ದೀರಾ ನೀವು ಸಹ ಅಭಿವೃದ್ಧಿ ಕೆಲಸಗಳನ್ನು ಮಾಡಿ ಎಂದು ಹೇಳಿದರು.

Narayan Gowda

ಬಿಜೆಪಿ ಸರ್ಕಾರ ಬಂದ ಮೇಲೆ ಅಭಿವೃದ್ಧಿ ಕೆಲಸಗಳನ್ನು ತಡೆಹಿಡಿದರು ಅಂತಾ ಎಲ್ಲರೂ ಹೇಳುತ್ತಾರೆ. ಆದರೆ ನನ್ನ ಕ್ಷೇತ್ರದಲ್ಲಿ ಅವರು 1 ಕೋಟಿಯ ಕೆಲಸವನ್ನು ಸಹ ತಡೆಹಿಡಿದಿಲ್ಲ. ನನ್ನ ಕ್ಷೇತ್ರದಲ್ಲಿ ಇನ್ನೂ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಅವುಗಳ ಉದ್ಘಾಟನೆಗೆ ನಾರಾಯಣಗೌಡ ಹಾಗೂ ಯಡಿಯೂರಪ್ಪ ಅವರನ್ನು ಕರೆಯುತ್ತೇನೆ. ಆಗ ಅವರಿಗೆ ದೊಡ್ಡ ಮಟ್ಟದಲ್ಲಿ ಸನ್ಮಾನ ಮಾಡುತ್ತೇನೆ ಎಂದು ನಾರಾಯಣಗೌಡರನ್ನ ಕೊಂಡಾಡಿದರು.

Share This Article
Leave a Comment

Leave a Reply

Your email address will not be published. Required fields are marked *