ಒಂದೇ ಬೈಕಿನಲ್ಲಿ ನಾಲ್ವರು- ಎದುರಿನಿಂದ ಬಂದು ಡಿಕ್ಕಿ ಹೊಡೆದ ಕಾರ್

Public TV
1 Min Read
27 jan 1611710944

– ಕಾರ್ ಚಾಲಕ ಸೇರಿದಂತೆ ಐವರು ಸಾವು, ಮೂವರು ಗಂಭೀರ
– ಡಿಕ್ಕಿ ಹೊಡೆದು ಪಲ್ಟಿಯಾಗಿ ಜಮೀನಿನಲ್ಲಿ ನಿಂತ ಕಾರ್

ಜೈಪುರ: ಮಂಗಳವಾರ ಸಂಜೆ ಬೈಕ್ ಮತ್ತು ಕಾರ್ ನಡುವೆ ಡಿಕ್ಕಿಯಾದ ಪರಿಣಾಮ ಐವರು ಮೃತಪಟ್ಟಿದ್ದಾರೆ. ಕಾರ್ ನಲ್ಲಿದ್ದ ಮೂವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಭರತ್‍ಪುರ ಜಿಲ್ಲೆಯ ಪಹಾಡಿ-ಗೋಪಾಲಗಢ ಮಾರ್ಗದಲ್ಲಿ ಅಪಘಾತ ಸಂಭವಿಸಿದೆ.

ಪಹಾಡಿಯ ಗಾಟ್ಮಿ ಗ್ರಾಮದ ಹಾಸಮ್ ಬೈಕಿನಲ್ಲಿ ಸೋದರಿ ಮತ್ತು ಆಕೆಯ ಇಬ್ಬರು ಮಕ್ಕಳೊಂದಿಗೆ ಸಿಹ್ವಾಲಿಗೆ ಹೊರಟಿದ್ದನು. ಬಾಕೋಡ್ ಬಳಿ ವೇಗವಾಗಿ ಬಂದ ಕಾರ್ ಬೈಕಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಪಕ್ಕದ ಜಮೀನಿನಲ್ಲಿ ನಿಂತಿದೆ. ಅಪಘಾತದಲ್ಲಿ ಹಾಸಮ್ ಮತ್ತು ಫೈಝಾನ್ (7), ಫಯಾನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

accident web1

ಗಂಭೀರವಾಗಿ ಗಾಯಗೊಂಡಿದ್ದ ಹಾಸಮ್ ಸೋದರಿ ವಸ್ಗರಿ ಮತ್ತು ಕಾರ್ ಚಾಲಕ ಜಾವೇದ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಬ್ಬರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಕಾರ್ ನಲ್ಲಿದ್ದ ಇನ್ನುಳಿದ ಮೂವರನ್ನ ಹೆಚ್ಚಿನ ಚಿಕಿತ್ಸೆಗಾಗಿ ಅಲ್ವಾರ್ ಗೆ ಶಿಫ್ಟ್ ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *