ಬೆಂಗಳೂರು: ಇಂದು ಮಾಜಿ ವಿದೇಶಾಂಗ ಸಚಿವ,ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರು ರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಮರ್ಪಣೆ ಮಾಡಿದ್ದಾರೆ.
ಶ್ರೀ ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನ ಸಮಿತಿಯ ರಾಜ್ಯ ಕಾರ್ಯದರ್ಶಿಗಳಾದ ನಾ.ತಿಪ್ಪೇಸ್ವಾಮಿ ಅವರು ಇಂದು ಕೃಷ್ಣ ಅವರ ಮನೆಗೆ ಭೇಟಿ ನೀಡಿದರು. ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಶುಭ ಹಾರೈಕೆಯೊಂದಿಗೆ ಎಸ್.ಎಂ.ಕೃಷ್ಣ ರವರು ತಮ್ಮ ಪಾಲಿನ ನಿಧಿ ಸಮರ್ಪಣೆ ಕೂಡ ಮಾಡಿದರು.
ಈ ಸಂದರ್ಭದಲ್ಲಿ ತಾವು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ನಡೆದ ‘ಶ್ರೀರಾಮ ಶಿಲಾ ಪೂಜನ’ ಕಾರ್ಯಕ್ರಮಗಳಿಗೆ ಹೇಗೆ ತಮ್ಮ ಸರ್ಕಾರ ಕೂಡ ಸಹಕಾರ ನೀಡಿತ್ತು ಎಂಬುದನ್ನು ಸ್ಮರಿಸಿದರು. ಅವರ ಮನೆಗೆ ಭೇಟಿ ನೀಡಿದಾಗ ಡಾ.ಕರುಣಾಕರ ರೈ, ಡಾ.ಜಯಕರ ಶೆಟ್ಟಿ , ಉಮೇಶ್ ಕೂಡ ಉಪಸ್ಥಿತರಿದ್ದರು.