ತಳಭಾಗದ ಫೈಬರ್ ಒಡೆದು ಬೋಟ್ ಮುಳುಗಡೆ – 8 ಮಂದಿಯ ರಕ್ಷಣೆ

Public TV
1 Min Read
KWR

ಕಾರವಾರ: ಮೀನುಗಾರಿಕೆಗೆ ತೆರಳಿದ್ದ ಬೋಟ್ ನ ತಳಭಾಗದಲ್ಲಿ ಫೈಬರ್ ಒಡೆದು ಸಮುದ್ರದಲ್ಲಿ ಮುಳುಗುತ್ತಿರುವ 8 ಮಂದಿ ಮೀನುಗಾರರನ್ನು ಇಂದು ರಾತ್ರಿ ಕರಾವಳಿ ಕಾವಲುಪಡೆ ಪೊಲೀಸರು ಹಾಗೂ ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಿಸಿದ್ದಾರೆ.

8d119b5b 399e 49b4 9eb9 0fca41dfc9aa

ಉಡುಪಿಯ ಮಲ್ಪೆ ಮೂಲದ ಶ್ರೀ ಸೌಪರ್ಣಿಕ ಎಂಬ ಹೆಸರಿನ ಬೋಟ್ ಇದಾಗಿದ್ದು ಭಾನುವಾರ ಮೀನುಗಾರಿಕೆಗೆ ಕಾರವಾರ ಭಾಗದ ಅರಬ್ಬಿ ಸಮುದ್ರಕ್ಕೆ ತೆರಳಿತ್ತು. ಈ ವೇಳೆ ತಳಭಾಗದಲ್ಲಿ ಫೈಬರ್ ಒಡೆದು ಹೋಗಿದ್ದು ಬೋಟ್ ಮುಳುಗುವ ಹಂತ ತಲುಪಿತ್ತು. ಇದೇ ಸಂದರ್ಭದಲ್ಲಿ ಬೋಟ್ ನಲ್ಲಿದ್ದ ಮೀನುಗಾರರು ರಕ್ಷಣೆಗಾಗಿ ಕರಾವಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

40db2fb2 63aa 4ae4 afae 53f060b02e90

ತಕ್ಷಣ ಸ್ಥಳಕ್ಕೆ ಆಗಮಿಸಿದ ಕರಾವಳಿ ಕಾವಲು ಪಡೆಯ ನಿಶ್ಚಲ್ ಕುಮಾರ್ ಹಾಗೂ ಇಂಡಿಯನ್ ಕೋಸ್ಟ್ ಗಾರ್ಡ್ ನ ಅಸಿಸ್ಟೆಂಟ್ ಕಮಾಂಡೆಂಟ್ ಶಶಾಂಕ್ ಕುಮಾರ್ ರವರ ತಂಡ ಬೋಟ್ ಹಾಗೂ ಅದರಲ್ಲಿದ್ದ 8 ಮಂದಿ ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *