ಬಳೆಪೇಟೆ ಟೀಸರ್ ಸೌಂಡ್ ಬಲು ಜೋರು

Public TV
1 Min Read
Balepet 3

‘ಬಳೆಪೇಟೆ’ ಚಿತ್ರದ ಟೀಸರ್ ಬಿಡುಗಡೆಯಾಗಿ ಸ್ಯಾಂಡಲ್​ವುಡ್​​ ಅಂಗಳದಲ್ಲಿ ಸಖತ್ ಟಾಕ್ ಕ್ರಿಯೇಟ್ ಮಾಡಿದೆ. ಟೀಸರ್ ತುಣುಕು ಇಂಟ್ರಸ್ಟಿಂಗ್ ಆಗಿ ಮೂಡಿ ಬಂದಿದ್ದು ಚಿತ್ರತಂಡದ ಕುಸುರಿ ಕೆಲಸ ಸಿನಿ ಪ್ರಿಯರ ಮನಸೆಳೆದಿದೆ.

ಕನ್ನಡದ ಹೊಸ ಮುಖಗಳು, ಕ್ರಿಯಾಶೀಲ ಪ್ರತಿಭೆಗಳು ಸೇರಿ ತುಂಬಾ ಕಾಳಜಿ, ಪ್ರೀತಿಯಿಂದ ತೆಗೆದಿರುವ ಸಿನಿಮಾ ‘ಬಳೆಪೇಟೆ’. ‘ಬಳೆಪೇಟೆ’ ಬೆಂಗಳೂರಿನಲ್ಲಿ ಕೇಳಿ ಬರುವ ಏರಿಯಾವೊಂದರ ಹೆಸರು. ಇದೀಗ ಈ ಹೆಸರು ಸಿನಿಮಾ ಟೈಟಲ್​ ಆಗಿ ಬಿಡುಗಡೆಗೂ ಸಜ್ಜಾಗಿದೆ.

Balepet 2

ಟೀಸರ್ ಝಲಕ್ ಮೂಲಕ ಎಲ್ಲರ ಗಮನ ತಮ್ಮ ಸಿನಿಮಾದತ್ತ ಸೆಳೆದಿರುವ ಈ ಚಿತ್ರದ ಸೂತ್ರದಾರ ರಿಷಿಕೇಶ್. ಇದು ರಿಷಿಕೇಶ್ ಚೊಚ್ಚಲ ಚಿತ್ರ ಎನ್ನುವ ಮಾತೇ ಬಾರದಂತೆ ಟೀಸರ್ ತುಣುಕು ಮೂಡಿಬಂದಿದೆ. ಚಿತ್ರಕ್ಕೆ ಕಥೆ, ಚಿತ್ರಕಥೆ, ನಿರ್ದೇಶನ ಮಾತ್ರವಲ್ಲದೆ ಕ್ಯಾಮೆರಾ ನಿರ್ದೇಶಕನಾಗಿ, ಎಡಿಟರ್, ಕಲರಿಸ್ಟ್ ಆಗಿಯೂ ರಿಷಿಕೇಶ್ ಬಹುಮುಖ ಪ್ರತಿಭೆಯನ್ನ ಇಲ್ಲಿ ಪ್ರದರ್ಶಿಸಿದ್ದಾರೆ.

ಚಿತ್ರತಂಡ ಮೊದಲೇ ಹೇಳಿದಂತೆ ಇದೊಂದು ಸಿನಿಮಾವಲ್ಲ ಅದಕ್ಕಿಂತ ಹೆಚ್ಚು ಎನ್ನುವ ಮಾತಿನಂತೆ ಟೀಸರ್ ಮೂಡಿಬಂದಿದ್ದು ಟೀಸರ್ ನೋಡಿದವರು ವಾವ್ ಎನ್ನುತ್ತಿದ್ದಾರೆ. ಕರೊನಾ ಲಾಕ್​ಡೌನ್ ಸಮಯದಲ್ಲೂ ಜಗ್ಗದೇ ಬಳೆಪೇಟೆಯಲ್ಲಿ ಯಶಸ್ವಿಯಾಗಿ ಚಿತ್ರೀಕರಣ ಮಾಡಿ ಸೈ ಎನಿಸಿಕೊಂಡು ಸಿನಿಮಾ ಪ್ರೀತಿ ಮೆರೆದಿದೆ ಚಿತ್ರತಂಡ.

Balepet

ಸೈಕೋ ಸಿನಿಮಾ ಖ್ಯಾತಿಯ ಗ್ಲಾಮರ್ ಗೊಂಬೆ ಅನಿತಾ ಭಟ್, ಯುವ ನಟ ಪ್ರಮೋದ್ ಬೋಪಣ್ಣ ಬಳೆಪೇಟೆ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಮಯೂರ್ ಪಟೇಲ್, ಉಮೇಶ್ ಬಣಕಾರ್, ಅಭಿಷೇಕ್ ಮಠದ್, ಚೇತನ್, ಲೋಕೇಶ್ ರೇವಣ್ಣ, ಅಪೂರ್ವ, ಉಗ್ರಂ ರವಿ ಸೇರಿದಂತೆ ಹಲವು ನುರಿತ ಕಲಾವಿದರ ಬಳಗ ‘ಬಳೆಪೇಟೆ’ ಅಂಗಳದಲ್ಲಿ ಬಣ್ಣಹಚ್ಚಿದ್ದಾರೆ.

ಆರ್ ವಿ ಎಸ್ ಪ್ರೊಡಕ್ಷನ್ಸ್ ಬ್ಯಾನರ್ ಮುಖಾಂತರ ಬನಾನ ಶಿವರಾಂ ಬಳೆಪೇಟೆ ಚಿತ್ರ ನಿರ್ಮಾಣ ಮಾಡಿದ್ದಾರೆ. ಉತ್ತಮ್, ಲೋಹಿತ್ ಸಂಗೀತ ನಿರ್ದೇಶನ ಬಳೆಪೇಟೆ ಚಿತ್ರಕ್ಕಿದೆ.

 

Share This Article
Leave a Comment

Leave a Reply

Your email address will not be published. Required fields are marked *