ಹಾವೇರಿ: ಮಚ್ಚಿನಿಂದ ಪತ್ನಿ ಮೇಲೆ ಹಲ್ಲೆ ಮಾಡಿ ನಂತರ ತಾನೂ ಕತ್ತು ಕೊಯ್ದುಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಮೈಲಪ್ಪ ತಂಬೂರಿ (50) ಸಾವನ್ನಪ್ಪಿದ್ದಾನೆ.
ಜಿಲ್ಲೆಯ ರಾಣೆಬೆನ್ನೂರು ನಗರದ ಗಣೇಶ ನಗರದಲ್ಲಿ ಘಟನೆ ನಡೆದಿತ್ತು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಪತ್ನಿ ಮಾದೇವಕ್ಕ(45) ಮೇಲೆ ಪತಿ ಮೈಲಪ್ಪ ಮಚ್ಚಿನಿಂದ ಹಲ್ಲೆ ಮಾಡಿ, ತಾನೂ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ರಕ್ತದ ಮಡುವಿನಲ್ಲಿ ಬಿದ್ದು ನರಳಾಡುತ್ತಿದ್ದ ದಂಪತಿಯನ್ನು ಪೊಲೀಸರು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೆ ಮೈಲಪ್ಪ ಮೃತಪಟ್ಟಿದ್ದಾನೆ.
ಪತ್ನಿ ಮಾದೇವಕ್ಕಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ರಾಣೆಬೆನ್ನೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಒಂದು ತಿಂಗಳಿನಿಂದ ದಂಪತಿ ನಿರಂತರವಾಗಿ ಜಗಳ ಮಾಡುತ್ತಿದ್ದರು. ಜಗಳದಿಂದ ಬೇಸತ್ತು ಪತ್ನಿ ಮಹಾದೇವಕ್ಕ ತವರು ಮನೆಗೆ ಹೋಗಿದ್ದಳು. ಬುಡಪನಹಳ್ಳಿ ಗ್ರಾಮದಿಂದ ಪ್ರತಿನಿತ್ಯ ರಾಣೇಬೆನ್ನೂರು ನಗರಕ್ಕೆ ಕೆಲಸಕ್ಕೆ ಬರುತ್ತಿದ್ದಳು. ಇಂದು ಆಕೆಯ ಪತಿ ಮೈಲಪ್ಪ ಮಚ್ಚಿನಿಂದ ಹೊಡೆದು ಹಲ್ಲೆ ಮಾಡಿದ್ದ. ಬಳಿಕ ತಾನೂ ಚಾಕು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಪೆÇಲೀಸರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಆಸ್ಪತ್ರೆಗೆ ಸೇರಿಸಿದ್ದರು. ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇದೀಗ ಮೈಲಪ್ಪ ಸಾವನ್ನಪ್ಪಿದ್ದಾನೆ.