ಹೈದರಾಬಾದ್: ಮುಸ್ಲಿಂ ಮಹಿಳೆಯೊಬ್ಬರು ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ. ತಾಹೇರಾ ಟ್ರಸ್ಟ್‍ನ ಸಂಘಟಕರಾಗಿರುವ ಜಹರಾ ಬೇಗಂ, ರಾಮ ಮಂದಿರ ನಿರ್ಮಾಣಕ್ಕೆ ಮುಸ್ಲಿಂ ಸಮುದಾಯದ ಇತರರಿಗೂ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಧನ ಸಹಾಯ ಮಾಡಬೇಕಾಗಿ ಮನವಿ ಮಾಡಿದ್ದಾರೆ.
ಮುಸ್ಲಿಮರು ಸೇರಿದಂತೆ ಇತರ ಎಲ್ಲಾ ಧರ್ಮದವರು, ವಿನಾಯಕ ಚತುರ್ಥಿ, ದಸರಾ, ರಾಮ ನವಮಿ ಹಬ್ಬದ ಪೂಜೆಗಳಿಗೆ ಹೇಗೆ ಹಿಂದೂ ಸಹೋದರ-ಸಹೋದರಿಯರಿಗೆ ಧನ ಸಹಾಯ ಮಾಡುತ್ತಿವೋ ಅದೇ ಮಾದರಿ ಶ್ರೀ ರಾಮ ದೇವಾಲಯ ನಿರ್ಮಾಣಕ್ಕೆ ಕೂಡ ದೇಣಿಗೆ ನೀಡೋಣ ಎಂದು ಕರೆ ನೀಡಿದ್ದಾರೆ. ಇದು ಭಾರತದ ಸಂಸ್ಕøತಿ, ಸಂಪ್ರದಾಯ ಮತ್ತು ಭಾರತವು ವೈವಿಧ್ಯತೆಯಲ್ಲಿ ಏಕತೆಯನ್ನು ತೋರಿಸುತ್ತಿದೆ.
ನಿಧಿ ಸಂಗ್ರಹಣಾ ಕಾರ್ಯಕ್ರಮದ ಸಂದರ್ಭದಲ್ಲಿ ಜಹರಾ ಬೇಗಂ, ನಿಧಿ ಸಂಗ್ರಹದ ಮೂಲಕ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಸಹಾಯ ಮಾಡಬೇಕೆಂದು ಮುಸ್ಲಿಂ ಸಮುದಾಯದವರಿಗೆ ಮನವಿ ಮಾಡಿದರು. ಅಲ್ಲದೆ ತಮ್ಮ ಕೈಲಾದಷ್ಟು ಧನ ಸಹಾಯ ಮಾಡಬಹುದು. ಅದು ಹತ್ತು ರೂಪಾಯಿಯಂತಹ ಸಣ್ಣ ಮೊತ್ತ ಆಗಿದ್ದರೂ ಸಹ ನೀಡಬಹುದು ಎಂದು ತಿಳಿಸಿದರು.
ಕಳೆದ ಹತ್ತು ವರ್ಷಗಳಿಂದ ಹಳ್ಳಿಗಳಲ್ಲಿ ಕೆಲಸ ಮಾಡುವ ವೇಳೆ ಹಲವಾರು ಹಿಂದೂಗಳು ಮಸೀದಿ ನಿರ್ಮಾಣಕ್ಕೆ, ಈದ್ಗಾ ಮತ್ತು ಮುಸ್ಲಿಂ ಸಮುದಾಯದ ಸ್ಮಶಾನ ನಿರ್ಮಾಕ್ಕಾಗಿ ತಮ್ಮ ಭೂಮಿಗಳನ್ನು ದಾನ ಮಾಡಿರುವುದನ್ನು ನೋಡಿದ್ದೇನೆ. ಮುಸ್ಲಿಮೇತರರು ಕೂಡ ತಮ್ಮ ಇಚ್ಛೆ ಪ್ರಕಾರ ಹೆಚ್ಚಿನ ಪ್ರಮಾಣದ ಕೃಷಿ ಭೂಮಿಯನ್ನು ಮುಸ್ಲಿಮರಿಗೆ ದಾನ ಮಾಡಿದ್ದಾರೆ. ಜೊತೆಗೆ ಮಸೀದಿ, ಈದ್ಗಾ, ಸ್ಮಶಾನ ನಿರ್ಮಾಣಕ್ಕೆ ಧನ ಸಹಾಯವನ್ನು ಕೂಡ ಮಾಡಿದ್ದಾರೆ ಎಂದು ಹೇಳಿದರು.