ಬೆಂಗಳೂರು: ಪತ್ನಿಯ ಕಾಟ ತಾಳಲಾರದೆ ಪತಿರಾಯನೊಬ್ಬ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಬೆಂಗಳೂರಿನ ಬಾಣಸವಾಡಿಯಲ್ಲಿ ನಡೆದಿದೆ.
ಪತಿಯನ್ನು ಅಮಿತ್ ಬಹೇತಿ ಎಂದು ಗುರುತಿಸಲಾಗಿದೆ. ಈತ 2018 ರಲ್ಲಿ ಇಶಾಳನ್ನ ವಿವಾಹವಾಗಿದ್ದ. ಮದ್ವೆಯಾದ ಕೆಲ ತಿಂಗಳಲ್ಲಿ ಇಶಾ ತನ್ನ ಪತಿ ಬಳಿ ಸಾಕಷ್ಟು ಡಿಮ್ಯಾಂಡ್ ಇಟ್ಟಿದ್ದಳು. ಚಿನ್ನಾಭರಣ ಕೊಡಿಸುವಂತೆ ಆದೇಶಿಸಿದ್ದಳು. ಇದಕ್ಕೊಪ್ಪದೆ ಇದ್ದಾಗ ಅಮಿತ್ ಮೇಲೆ ಹಲ್ಲೆ ನಡೆಸುತ್ತಿದ್ದಳಂತೆ. ಇದರಿಂದ ಬೇಸತ್ತ ಅಮಿತ್, ಪತ್ನಿ ಹೇಳಿದ ಹಾಗೆ ಕೇಳುತ್ತಿದ್ದ.
ಇತ್ತೀಚೆಗೆ ಅಮಿತ್ ಬಳಿ ಒಂದು ಕೋಟಿ ಹಣವನ್ನ ನೀಡುವಂತೆ ಇಶಾ ಒತ್ತಾಯಿಸುತ್ತಿದ್ದಳು. ಅಮಿತ್ ಇದಕ್ಕೊಪ್ಪದೆ ಇದ್ದಾಗ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಳು. ಪತ್ನಿಯ ನಡತೆಯಿಂದ ನೊಂದ ಪತಿ ಅಮಿತ್, ಇಶಾ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾನೆ. ಅಲ್ಲದೆ ಈ ಹಿಂದೆಯೇ ಇಶಾ ಮೂರು ಮದ್ವೆಯಾಗಿ ವಂಚಿಸಿದ್ದಾಳೆಂದು ಅಮಿತ್ ಆರೋಪ ಕೂಡ ಮಾಡಿದ್ದಾನೆ.