ಬೆಂಗಳೂರು : ತಮಿಳು ಹಾಡುಗಳನ್ನು ಹಾಕಬೇಡಿ ಎಂದಿದ್ದಕ್ಕೆ ತಮಿಳರಿಗೆ ಹಾಗೂ ಕರವೇ ಕಾರ್ಯಕರ್ತರ ನಡುವೆ ಗಲಾಟೆಯಾಗಿರುವ ಘಟನೆ ಕೆಪಿ ಅಗ್ರಹಾರದಲ್ಲಿ ನಡೆದಿದೆ.
ಕೆಪಿ ಅಗ್ರಹಾರ ವ್ಯಾಪ್ತಿಯ ನಾಗ ಸುಬ್ರಹ್ಮಣ್ಯ ತಮಿಳು ದೇವಸ್ಥಾನದಲ್ಲಿ ಗಲಾಟೆ ನಡೆದಿದ್ದು, ಗಲಾಟೆಯಲ್ಲಿ ಕರವೇಯ ಕಾರ್ಯಕರ್ತನೊಬ್ಬನ ಹೊಟ್ಟೆಗೆ ಗಾಯವಾಗಿದೆ. ಕೆಪಿ ಅಗ್ರಹಾರದ ಸರ್ಕಾರಿ ಜಾಗವೊಂದರಲ್ಲಿ ತಮಿಳು ದೇವಸ್ಥಾನವಿದೆ. ಅಲ್ಲಿ ಜಾತ್ರಾ ಮಹೋತ್ಸವ ಇರುವ ಹಿನ್ನೆಲೆಯಲ್ಲಿ ಅಲ್ಲಿನ ಸ್ಥಳೀಯರು ತಮಿಳು ಹಾಡುಗಳನ್ನ ಹಾಕಿದ್ದರು. ಇದನ್ನು ಪ್ರಶ್ನಿಸಲು ಕರವೇ ಕಾರ್ಯಕರ್ತರು ದೇವಸ್ಥಾನದ ಬಳಿ ತೆರಳಿದಾಗ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ.
ಗಲಾಟೆಯಲ್ಲಿ ತಮಿಳಿನ ವಡಿವೇಲು, ವನ್ನಾರೆಡ್ಡಿಯಿಂದ ಹಲ್ಲೆ ನಡೆಸಿದ್ದಾರೆ ಎಂದು ಕರವೇ ಆರೋಪ ಮಾಡಿದ್ದು, ಹಲ್ಲೆಮಾಡಿದ ಹಲ್ಲೆಕೋರನ್ನು ಬಂಧಿಸುವಂತೆ ಕೆಪಿ ಅಗ್ರಹಾರ ಪೊಲೀಸ್ ಠಾಣೆಯ ಮುಂದೆ ಧಿಕ್ಕಾರಗಳನ್ನ ಕೂಗಿ ಪ್ರತಿಭಟನೆ ನಡೆಸಿದರು.