ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಪ್ರಹಸನಕ್ಕೆ ತೆರೆ ಬೀಳುವ ಹಂತ ತಲುಪಿದ್ದು, ಕಡೇ ಆಟ ಭಾರೀ ಕುತೂಹಲ ಮೂಡಿಸಿದೆ. ಇದರ ನಡುವೆಯೇ ಇದೀಗ 3:5 ಅನುಪಾತದಲ್ಲಿ ಸಂಪುಟ ಸೇರುವ ಸಚಿವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಇದರಲ್ಲಿ ಇನ್ನಿಬ್ಬರ ನಡುವೆ ಪೈಪೋಟಿ ಏರ್ಪಟ್ಟಿದೆ.
ಕ್ಯಾಬಿನೆಟ್ ಕ್ಲೈಮ್ಯಾಕ್ಸ್ ನಲ್ಲಿ ಹೊಸ ಎಂಟ್ರಿ ಎಂಬಂತೆ ಹಾಲಾಪ್ಪ ಆಚಾರ್ ಹೆಸರು ಕೇಳಿ ಬಂದಿದ್ದು, ಕಡೇ ಒಂದು ಸ್ಥಾನಕ್ಕೆ ಅರವಿಂದ ಲಿಂಬಾವಳಿ ವರ್ಸಸ್ ಹಾಲಾಪ್ಪ ಆಚಾರ್ ಎನ್ನುವಂತಾಗಿದೆ. ಹೀಗಾಗಿ ಕ್ಯಾಬಿನೆಟ್ ಕಡೇ ಆಟ ಕುತೂಹಲ ಮೂಡಿಸಿದೆ.
ವಲಸಿಗರ ಕೋಟಾದಲ್ಲಿ ಮೂವರಿಗೆ ಹಾಗೂ ಬಿಜೆಪಿ ಕೋಟಾದಲ್ಲಿ ಐವರಿಗೆ ಅಂದರೆ 3:5 ಯಂತೆ ಸ್ಥಾನ ನೀಡುವ ಪ್ಲಾನ್ ಮಾಡಿಕೊಳ್ಳಲಾಗಿದೆ. ವಲಸಿಗರ ಕೋಟಾದಲ್ಲಿ ಎಂಟಿಬಿ ನಾಗರಾಜ್, ಆರ್.ಶಂಕರ್, ಮುನಿರತ್ನ ಹಾಗೂ ಬಿಜೆಪಿ ಕೋಟಾದಲ್ಲಿ ಉಮೇಶ್ ಕತ್ತಿ, ಎಸ್.ಅಂಗಾರ, ಮುರುಗೇಶ್ ನಿರಾಣಿ, ಸಿ.ಪಿ.ಯೋಗೇಶ್ವರ್ ಹೆಸರು ಅಂತಿಮವಾಗಿದೆ. ಉಳಿದಂತೆ ಇನ್ನೊಬ್ಬರಿಗೆ ಸ್ಥಾನ ಸಿಗಲಿದ್ದು, ಹಾಲಪ್ಪ ಆಚಾರ್ ಅಥವಾ ಅರವಿಂದ ಲಿಂಬಾವಳಿ ಅವಕಾಶ ಸಿಗಲಿದೆ ಎನ್ನಲಾಗಿದೆ.