ಮರಳಿ ಬರುವುದಾಗಿ ಹೇಳಿ ಹೋದ ಪತಿ ಶವವಾಗಿ ಪತ್ತೆ

Public TV
1 Min Read
hydrabad

– ಹೈದರಾಬಾದ್ ವ್ಯಕ್ತಿ ಶವ ಬಿಜಾಪುರದಲ್ಲಿ ಪತ್ತೆ

ಹೈದರಾಬಾದ್: ಮರಳಿ ಬರುವುದಾಗಿ ಪತ್ನಿಯಲ್ಲಿ ಹೇಳಿ ಹೈದರಾಬಾದ್‍ನಿಂದ ಹೊರಟ ವ್ಯಕ್ತಿ, ವಿಜಯಪುರ ರೈಲ್ವೆ ಹಳಿಗಳಲ್ಲಿ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೃತ ವ್ಯಕ್ತಿಯನ್ನು ಡಕಾ ಸಾಯಿನಾಥ್ ರೆಡ್ಡಿ (30) ಎಂದು ಗುರುತಿಸಲಾಗಿದೆ. ಈತ ಹೈದರಾಬಾದ್ ಮೂಲದವನಾಗಿದ್ದಾನೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಅನುಮಾನಸ್ಪದ ರೀತಿಯಲ್ಲಿ ರೈಲ್ವೆ ಹಳಿ ಮೇಲೆ ಈತನ ಶವ ಪತ್ತೆಯಾಗಿದೆ.

pakistan train fire 2

ಪೊಲೀಸ್ ಸಿಬ್ಬಂದಿ ಶವವನ್ನು ಪರಿಶೀಲಿಸಿದಾಗ ಆತನ ಜೇಬಿನಲ್ಲಿ ಫೋನ್ ಇರುವುದು ಪತ್ತೆಯಾಗಿದೆ. ಹೀಗಾಗಿ ವ್ಯಕ್ತಿಯ ಮೂಲದ ಕುರಿತಾಗಿ ಗುರುತಿಸಲು ಸಹಾಯವಾಗಿದೆ. ಈತನ ಕುಟುಂಬಕ್ಕೆ ಈಗಾಗಲೇ ಮಾಹಿತಿ ನೀಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

TRAIN

ಮೃತ ವ್ಯಕ್ತಿ ಹೈದರಾಬಾದ್‍ನ ನೆಲ್ಲೂರು ಜಿಲ್ಲೆಯ ಸಂಗಮ್ ಮಂಡಲದ ದುವ್ವುರು ಮೂಲದವನಾಗಿದ್ದಾನೆ. ಈತ ಹೋಟೆಲ್ ನಿರ್ವಹಣೆಯಲ್ಲಿ ಪದವಿ ಪೂರ್ಣಗೊಳಿಸಿದ್ದಾನೆ. ಕೆಲವು ಕಂಪನಿಯನ್ನು ನಡೆಸುತ್ತಿದ್ದನು ಮತ್ತು ಷೇರುಗಳಲ್ಲಿ ಹಣ ಹೂಡಿಕೆ ಮಾಡಿ ವ್ಯವಹರಿಸುತ್ತಿದ್ದನು. ಕಳೆದ ವರ್ಷ ನವೆಂಬರ್ 25 ರಂದು ಅವರು ವಾರಂಗಲ್ ಮೂಲದ ಜ್ಯೋತ್ಸನ್ನಾಳನ್ನು ಮದುವೆಯಾಗಿ ಹೈದರಾಬಾದ್‍ನ ಚಂದನಗರದಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು.

train 3 1

ಒಂದು ದಿನ ಸಾಯಿನಾಥ್ ರೆಡ್ಡಿ ವಾಸವಿರುವ ಪ್ರದೇಶದಲ್ಲೇ ಇದ್ದ ಚಿಕ್ಕಮ್ಮಳ ಮನೆಗೆ ಪತ್ನಿಯನ್ನು ಉಳಿದುಕೊಳ್ಳುವಂತೆ ಬಿಟ್ಟುಹೋಗಿದ್ದಾನೆ. ಆಗ ತನ್ನಲ್ಲಿ ಕೆಲಸ ಮಾಡುತ್ತಿರುವವರಿಗೆ ಸಂಬಳ ಕೊಟ್ಟು ನಾನು ವಾಪಸ್ ಬರುವುದಾಗಿ ಪತ್ನಿಯಲ್ಲಿ ಹೇಳಿ ಹೋದವನು ನಾಪತ್ತೆಯಾಗಿದ್ದಾನೆ. ಆದರೆ ಕೆಲವು ದಿನಗಳ ನಂತರ ಈತನ ಶವ ಬಿಜಾಪುರದ ರೈಲ್ವೇ ಹಳಿಯ ಮೇಲೆ ಪತ್ತೆಯಾಗಿದೆ. ಮೊಬೈಲ್ ನಲ್ಲಿರುವ ಮಾಹಿತಿ ಆಧರಿಸಿ ಕುಟುಂಬವನ್ನು ಸಂಪರ್ಕಿಸಿ ಪೊಲೀಸರು ಮಾಹಿತಿ ನೀಡಿದ್ದಾರೆ.

TRAIN

ಇದು ಮೇಲ್ನೋಟಕ್ಕೆ ಕೊಲೆಯಂತೆ ಕಾಣುತ್ತಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಹೆಚ್ಚಿನ ವಿವರಗಳನ್ನು ಶವ ಪರೀಕ್ಷೆಯ ವರದಿಯ ನಂತರವೇ ತಿಳಿಯಲಾಗುವುದು. ಆತನ ಕಂಪನಿಗೆ ಸಂಬಂಧಿಸಿದ ಯಾವುದೇ ಹಣಕಾಸಿನ ವಹಿವಾಟು ಅಥವಾ ಅವನ ಮದುವೆಗೆ ಕಾರಣವೇ ಎಂಬ ವಿಚಾರವಾಗಿಯೂ ತನಿಖೆ ನಡೆಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *