ಮುಂದಿನ ನಾಲ್ಕು ದಿನ ಬೆಂಗಳೂರಿನಲ್ಲಿ ಚಳಿಗೆ ಇರಲಿದೆ. ಪೂರ್ವದಿಂದ ಪಶ್ಚಿಮದ ಮಾರ್ಗವಾಗಿ ಮೋಡಗಳ ಚಲನವಾಗಿದೆ. ಉತ್ತರ ಕಡೆ ಚಲಿಸಿದಾಗ ಮಳೆ ತರಿಸಲಿದೆ. ಮಳೆ ಆಗುವ ಸಾಧ್ಯತೆ ಕಡಿಮೆ ಇದೆ. ಜ.5 ಮತ್ತು 6 ರಂದು ಕೆಲವು ಕಡೆ ಮಾತ್ರ ಸ್ವಲ್ಪ ಮಳೆ ಆಗಲಿದೆ. ಜನವರಿ 7, 8 ರಂದು ಹೆಚ್ಚು ಮಳೆ ಆಗಲಿದೆ.
ಬೆಂಗಳೂರಿನಲ್ಲಿ ಚಳಿ ಅನುಭವ ಜಾಸ್ತಿ ಆಗಲಿದೆ. ಇಡೀ ವಾರ ಚಳಿ ಪ್ರಮಾಣ ಹೆಚ್ಚಾಗಲಿದೆ. ರಾತ್ರಿ ಚಳಿ ಇರಲ್ಲ, ಬೆಳಿಗ್ಗೆ ಚಳಿ ಜಾಸ್ತಿ ಇರಲಿದೆ. ಪೂರ್ವದ ಅಲೆಗಳಲ್ಲಿ ಹೆಚ್ಚಿನ ಆಕಾಂಶದಲ್ಲಿ ಚಲಿಸಿದಾಗ ಕರ್ನಾಟಕದಲ್ಲಿ ಚಳಿ, ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ನಿರ್ದೇಶಕರು ಸಿ ಎಸ್ ಪಾಟೀಲ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 26ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಕಾರವಾರದಲ್ಲಿ ಗರಿಷ್ಠ ಉಷ್ಣಾಂಶ 32ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 26ಡಿಗ್ರಿ ಸೆಲ್ಸಿಯಸ್ ಇರಲಿದೆ. ಉಡುಪಿಯಲ್ಲಿ ಗರಿಷ್ಠ ಉಷ್ಣಾಂಶ 32ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ನಗರಗಳ ಗರಿಷ್ಠ, ಕನಿಷ್ಠ ಉಷ್ಣಾಂಶ ಮಾಹಿತಿ:
ಬೆಂಗಳೂರು: 26-19
ಮಂಗಳೂರು: 32-24
ಶಿವಮೊಗ್ಗ: 32-24
ಬೆಳಗಾವಿ: 28-19
ಮೈಸೂರು: 29-20
ಮಂಡ್ಯ: 29-21
ರಾಮನಗರ: 28-21
ಮಡಿಕೇರಿ: 26-17
ಹಾಸನ: 28-19
ಚಾಮರಾಜನಗರ: 29-21
ಚಿಕ್ಕಬಳ್ಳಾಪುರ: 25-18
ಕೋಲಾರ: 25-19
ತುಮಕೂರು: 28-20
ಉಡುಪಿ: 32-25
ಕಾರವಾರ: 32-26
ಚಿಕ್ಕಮಗಳೂರು: 28-18
ದಾವಣಗೆರೆ: 32-21
ಚಿತ್ರದುರ್ಗ: 30-20
ಹಾವೇರಿ: 31-21
ಬಳ್ಳಾರಿ: 31-22
ಧಾರವಾಡ: 29-20
ಗದಗ: 29-21
ಕೊಪ್ಪಳ: 31-21
ರಾಯಚೂರು: 31-21
ಯಾದಗಿರಿ: 30-20
ವಿಜಯಪುರ: 29-19
ಬೀದರ್: 29-18
ಕಲಬುರಗಿ: 31-19
ಬಾಗಲಕೋಟೆ: 31-21