ಮಾಂಸದಂಗಡಿಯಲ್ಲಿ 40 ರೂ. ಕೊಟ್ಟು ಆಡಿನ ರಕ್ತ ಖರೀದಿಸಿ ಸಾವಿನ ನಾಟಕವಾಡಿದ!

Public TV
2 Min Read
BOTTLE

– ಪತ್ನಿ ಕಿರುಕುಳದಿಂದ ಬೇಸತ್ತು ಸಾವಿನ ಡ್ರಾಮಾ ಮಾಡಿದ ಪತಿ

ಪಾಟ್ನಾ: ಪತ್ನಿಯ ಕಿರುಕುಳದಿಂದ ತಪ್ಪಿಸಿಕೊಳ್ಳಲು ನಿರುದ್ಯೋಗಿ ಪತಿ ಮಹಾಶಯನೊಬ್ಬ ಆಕೆಯನ್ನು ಹೆದರಿಸಲು ಸಾವಿನ ನಾಟಕ ಮಾಡಿರುವ ಘಟನೆ ಬಿಹಾರದ ಕೈಮೂರ್ ಜಿಲ್ಲೆಯಲ್ಲಿ ನಡೆದಿದೆ.

ಪ್ರ್ರದೀಪ್ ಕುಮಾರ್ ರಾಮ್(37) ಸಾವಿನ ನಾಟಕ ಮಾಡಿದ ವ್ಯಕ್ತಿಯಾಗಿದ್ದು, ಈತ ಉತ್ತರ ಪ್ರದೇಶದ ಘಾಸಿಪುರ್ ಜಿಲ್ಲೆಯ ಜಾಮಾನಿಯಾ ನಿವಾಸಿ. ಮಾಂಸದ ಅಂಗಡಿಗೆ ಹೋಗಿ 40 ರೂ. ಕೊಟ್ಟು ಆಡಿನ ರಕ್ತವನ್ನು ಖರೀದಿಸಿದ್ದಾನೆ. ಬಳಿಕ ಮನೆಗೆ ಬಂದು ರೂಮ್‍ನಲಿದ್ದ ಮಂಚದ ಮೇಲಿನ ಹಾಸಿಗೆ ಮೇಲೆ ರಕ್ತವನ್ನು ಹರಡಿ ಕೊಲೆ ನಡೆದಿರುವಂತೆ ಸಂಚು ರೂಪಿಸಿದ್ದಾನೆ. ಅದನ್ನು ನೋಡಿದವರು ಆತನ ದೇಹವನ್ನು ಎಲ್ಲಿಯೋ ಎಸೆದಿದ್ದಾರೆ ಎಂದುಕೊಳ್ಳಬೇಕು ಹಾಗೆ ಕಥೆ ನಿರ್ಮಿಸಿದ್ದಾನೆ. ತದನಂತರ ಅಲ್ಲಿಂದ ಪರಾರಿಯಾಗಿದ್ದಾನೆ.

Bedroom 1

ಪ್ರದೀಪ್ ಪತ್ನಿ ಪ್ರತಿಭಾ ಸರ್ಕಾರಿ ಶಾಲೆಯೊಂದರ ಶಿಕ್ಷಕಿಯಾಗಿದ್ದು, ಡಿಸೆಂಬರ್ 30ರಂದು ಬೆಳಗ್ಗೆ ಮನೆಗೆ ಬಂದ ಆಕೆ ಹಾಸಿಗೆಯಲ್ಲಿದ್ದ ರಕ್ತದ ಕಲೆಯನ್ನು ನೋಡಿ ಗಾಬರಿಗೊಂಡು ತನ್ನ ಪತಿಯನ್ನು ಯಾರೋ ಕೊಲೆ ಮಾಡಿ ಶವವನ್ನು ಎಸೆದಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಪ್ರಕರಣ ಕುರಿತಂತೆ ಪ್ರದೀಪ್‍ನನ್ನು ಪತ್ತೆ ಮಾಡಲು ಶುರು ಮಾಡಿದ ಪೊಲೀಸರಿಗೆ ಆತನ ಮನೆಯಿಂದ ಅರ್ಧಕಿಲೋ ಮೀಟರ್ ದೂರದಲ್ಲಿ ಒಂದು ವಾಟರ್ ಬಾಟಲ್ ರಕ್ತದ ಕಲೆಯಿಂದ ಕೂಡಿರುವುದು ಪತ್ತೆಯಾಗಿದೆ. ಈ ವಿಚಾರವಾಗಿ ಹೆಚ್ಚಿನ ತನಿಖೆ ನಡೆಯುತ್ತಿರುವ ಹೊತ್ತಿನಲ್ಲಿಯೇ ಕುಮಾರ್ ಜಮಾನಿಯದಲ್ಲಿ ಇರುವುದಾಗಿ ವ್ಯಕ್ತಿಯೊಬ್ಬ ಬುಧವಾರ ತಿಳಿಸಿದ್ದಾನೆ. ಕುಮಾರ್ ಇದ್ದ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ತಂಡ ಆತನನ್ನು ವಶಕ್ಕೆ ಪಡೆದರು.

Hostel Bed room

ನಂತರ ತನಿಖೆ ನಡೆಸಿದ ಪೊಲೀಸರಿಗೆ ಪ್ರದೀಪ್ ತನ್ನ ಹೆಂಡತಿ ನನಗೆ ಪ್ರತಿದಿನ ಹಣ ನೀಡುವುದಾಗಿ ಮತ್ತಿತರ ವಿಚಾರವಾಗಿ ಪೀಡಿಸುತ್ತಿದ್ದಳು ಹಾಗಾಗಿ ನಾನು ಸಾವಿನ ನಾಟಕವಾಡಿದೆ ಎಂದು ತಿಳಿಸಿದ್ದಾನೆ. ಆದರೆ ಪ್ರತಿಭಾಳನ್ನು ವಿಚಾರಣೆ ನಡೆಸಿದಾಗ ಆಕೆ ತನ್ನ ಪತಿಗೆ ಯಾವುದೇ ಕಿರುಕುಳ ನೀಡಿಲ್ಲ ಎಂದು ಹೇಳಿದ್ದಾಳೆ. ಇನ್ನೂ ದಂಪತಿಗೆ ಎರಡು ಮನೆಗಳಿದ್ದು, ಕುಲಾರಿ ಎಂಬಲ್ಲಿ ಇವರ ಇನ್ನೊಂದು ಮನೆ ನಿರ್ಮಾಣದ ಹಂತದಲ್ಲಿದೆ. ಈ ಸ್ಥಳಕ್ಕೆ ಮಂಗಳವಾರ ರಾತ್ರಿ ಪ್ರದೀಪ್ ಹೋಗಿ ಮಲಗಿರುವುದಾಗಿ ತಿಳಿಸಿದ್ದಾನೆ.

ಸದ್ಯ ಶುಕ್ರವಾರ ಬೆಳಗ್ಗೆ ಪ್ರದೀಪ್ ಸತ್ಯವನ್ನು ಬಹಿರಂಗ ಪಡಿಸಿದ್ದು, ಮತ್ತೆ ಈ ರೀತಿಯ ಘಟನೆ ಮರುಕಳಿಸದಂತೆ ಆತನಿಂದ ಬಾಂಡ್ ಪೇಪರ್ ಮೇಲೆ ಪೊಲೀಸರು ಸಹಿ ಮಾಡಿಸಿಕೊಂಡಿದ್ದು, ನಕಲಿ ಕೊಲೆ ಸಂಚು ರೂಪಿಸಿರುವ ಆರೋಪದಡಿ ಪ್ರದೀಪ್ ವಿರುದ್ದ ಎಫ್‍ಐಆರ್ ದಾಖಲಿಸಲಾಗಿದೆ ಎಂದು ದುರ್ಗವತಿ ಪೊಲೀಸ್ ಠಾಣೆ(ಎಸ್‍ಹೆಚ್‍ಒ) ವೀರೇಂದ್ರ ಕುಮಾರ್ ತಿಳಿಸಿದ್ದಾರೆ.

Police Jeep 1 2 medium

Share This Article
Leave a Comment

Leave a Reply

Your email address will not be published. Required fields are marked *