ಕೊರೊನಾ ವ್ಯಾಕ್ಸಿನ್ ತಾಲೀಮಿಗೆ ಬೆಂಗಳೂರು ರೆಡಿ – ಡ್ರೈ ರನ್ ಹೇಗೆ ನಡೆಯುತ್ತದೆ?

Public TV
2 Min Read
corona vaccin

ಬೆಂಗಳೂರು: ನಾಳೆ ದೇಶಾದ್ಯಂತ ಕೊರೊನಾ ಲಸಿಕೆಯ ವಿತರಣೆಯ ತಾಲೀಮು ನಡೆಯಲಿದ್ದು ಅದರಂತೆ ಸಿಲಿಕಾನ್ ಕಾಮಾಕ್ಷಿಪಾಳ್ಯ, ಯಲಹಂಕ ಹೊರವಲಯ ಹಾಗೂ ವಿದ್ಯಾ ಪೀಠ ಸರ್ಕಲ್‍ನಲ್ಲಿ ಕೊರೋನಾ ಡ್ರೈ ರನ್ ನಡೆಯಲಿದೆ.

ಈ ಡ್ರೈ ರನ್‍ನಲ್ಲಿ ರಿಜಿಸ್ಟ್ರೇಶನ್, ವೈಟಿಂಗ್ ರೂಮ್, ವ್ಯಾಕ್ಸಿನ್ ರೂಮ್, ಅಬ್ಸರ್ವೇಶನ್ ರೂಮ್ ಎಂಬ 4 ವಿಭಾಗಗಳು ಇದ್ದು, ವ್ಯಾಕ್ಸಿನ್ ಬಂದ ನಂತರ ಜನರು ಕೆಲವೊಂದು ನಿಯಮವನ್ನು ಅನುಸರಿಸ ಬೇಕಾಗಿದೆ.

corona vaccin dry run 5 e1609499752735

1. ರಿಜಿಸ್ಟ್ರೇಶನ್ ವಿಭಾಗ : ಮೊದಲನೇಯದಾಗಿ ರಿಜಿಸ್ಟ್ರೇಶನ್ ವಿಭಾಗ, ಇದರಲ್ಲಿ ವ್ಯಾಕ್ಸಿನ್ ಪಡೆಯಲು ಬಂದ ವ್ಯಕ್ತಿಗಳು ಕಡ್ಡಾಯವಾಗಿ ರಿಜಿಸ್ಟ್ರೇಶನ್ ಮಾಡಿಸಿಕೊಳ್ಳಬೇಕು. ರಿಜಿಸ್ಟ್ರೇಶನ್‍ನ ಅಂದ್ರೆ ಅಡ್ರಸ್ ಪ್ರೂಫ್. ಇದಕ್ಕಾಗಿ ಪಾನ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಸರ್ಕಾರಿ ಅಧಿಕಾರಿಯಾಗಿದ್ದಲ್ಲಿ ಅದರ ಐಡಿ ಕಾರ್ಡ್, ಸರ್ಕಾರದಿಂದ ಮಾನ್ಯತೆ ಪಡೆದ ಉದ್ಯೋಗಿ ಆಗಿದ್ದಲ್ಲಿ ಅದರ ಐಡಿ ಕಾರ್ಡ್‍ಗಳನ್ನು ನೀಡಬೇಕು.

2. ವೈಟಿಂಗ್ ರೂಮ್ : ಇದರಲ್ಲಿ ರಿಜಿಸ್ಟ್ರೇಶನ್ ಆದ ನಂತರ ವ್ಯಕ್ತಿಗೆ ಸಂಖ್ಯೆವೊಂದನ್ನು ನೀಡಲಾಗುತ್ತದೆ. ಆ ಕ್ರಮ ಸಂಖ್ಯೆಯ ಪ್ರಕಾರ ವೈಟಿಂಗ್‍ರೂಮ್‍ನಲ್ಲಿ ವ್ಯಕ್ತಿ ಕುಳಿತುಕೊಳ್ಳಬೇಕು. ವೈಟಿಂಗ್ ರೂಮ್‍ನಲ್ಲಿ ಕುಳಿತುಕೊಂಡ ನಂತರ ವ್ಯಕ್ತಿಯ ಹೆಸರನ್ನು ಕೂಗಿದಾಗ ವ್ಯಾಕ್ಸಿನ್ ರೂಮ್‍ಗೆ ಹೋಗಬೇಕು.

corona vaccin dry run 3 e1609499790133

3 ವ್ಯಾಕ್ಸಿನ್ ರೂಮ್: ವ್ಯಾಕ್ಸಿನ್ ರೂಮ್‍ಗೆ ಬಂದ ನಂತರ ಮೊದಲನೇಯದಾಗಿ ವ್ಯಕ್ತಿಯನ್ನು ಕೂರಿಸುತ್ತಾರೆ. ನಂತರ ವೈದ್ಯರು ಬಂದು ರೋಗಿಯನ್ನು ವಿಚಾರಿಸಿ, ವ್ಯಾಕ್ಸಿನ್ ಇಂಜೆಕ್ಷನ್ ನೀಡುತ್ತಾರೆ. ವ್ಯಾಕ್ಸಿನ್ ಇಂಜೆಕ್ಷನ್ ಕೊಟ್ಟ ನಂತರ ಅಬ್ಸರ್ವೇಶನ್ ರೂಮ್‍ಗೆ ಹೋಗಬೇಕು

4. ಅಬ್ಸರ್ವೇಶನ್ ರೂಮ್ : ವ್ಯಾಕ್ಸಿನ್ ಪಡೆದ ನಂತರ ವ್ಯಕ್ತಿಯನ್ನು ಅಬ್ಸರ್ವೇಶನ್ ರೂಮ್‍ಗೆ ಸ್ಥಳಾಂತರಿಸಲಾಗುತ್ತದೆ. ಬಳಿಕ 30 ನಿಮಿಷಗಳ ಕಾಲ ವೈದ್ಯರ ನಿಗಾದಲ್ಲಿಯೇ ರೋಗಿ ಇರಬೇಕು. 30 ನಿಮಿಷದಲ್ಲಿ ವ್ಯಕ್ತಿಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದರೆ ಪ್ರಾಥಮಿಕ ಚಿಕಿತ್ಸೆ ಅಲ್ಲಿಯೇ ನೀಡಲಾಗುತ್ತದೆ. ನಂತರ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುವುದು. ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬರದೇ ಇದ್ದಲ್ಲಿ ಆತನು ಮನೆಗೆ ಹಿಂತಿರುಗಬಹುದು.

vlcsnap 2021 01 01 16h47m55s243 e1609499900104

ವ್ಯಾಕ್ಸಿನ್ ವಿಚಾರವಾಗಿ ಮಾತನಾಡಿದ ಮುಖ್ಯ ಆರೋಗ್ಯಾಧಿಕಾರಿ ವಿಜಯೇಂದ್ರ, ಈಗಾಗಲೇ ವ್ಯಾಕ್ಸಿನ್ ನೀಡಲು 25 ಜನರ ಪಟ್ಟಿ ಸಿದ್ಧವಾಗಿದ್ದು, ಲೋಪದೋಷ ಕುರಿತು ಮಾಹಿತಿ ಕಲೆ ಹಾಕುವ ಪ್ರಯತ್ನ ನಡೆಸಲಾಗುತ್ತಿದೆ. ಜೊತೆಗೆ ಇಂದು ಕೊರೋನಾ ವ್ಯಾಕ್ಸಿನ್ ಪ್ರಕ್ರಿಯೆ ಕುರಿತು ಪಾಲಿಕೆಯ ವಾರ್ ರೂಂನಲ್ಲಿ ವಿಡಿಯೋ ಕನ್ಫರೆನ್ಸ್ ಸಹ ನಡೆಸಲಾಗಿತ್ತು. ಡ್ರೈ ರನ್ ಪ್ರಕ್ರಿಯೆ 2 ಗಂಟೆಗಳ ಕಾಲ ನಡೆಯಲಿದೆ ಎಂದು ತಿಳಿಸಿದರು.

corona vaccin dry run 2 e1609499941991

ಬಿಬಿಎಂಪಿ ಆಡಳಿತಗಾರ ಗೌರವ್ ಗುಪ್ತಾ ಪ್ರತಿಕ್ರಿಯಿಸಿ ಕೊರೊನಾ ವ್ಯಾಕ್ಸಿನ್ ಜನವರಿಯ ಕೊನೆಯ ವಾರ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಬರುವ ನಿರೀಕ್ಷೆ ಎಂದು ಹೇಳಿದ್ದಾರೆ. ಹೀಗಾಗಿ ಇದೀಗ ಎಲ್ಲರ ಚಿತ್ತ ಈಗ ಕೊರೋನಾ ವ್ಯಾಕ್ಸಿನ್ ಡ್ರೈ ರನ್‍ನತ್ತ ಇದೆ. ಇಲ್ಲಿ ವ್ಯಾಕ್ಸಿನ್ ಒಂದು ಇರಲ್ಲ. ಬದಲಾಗಿ ಎಲ್ಲ ಪ್ರಕ್ರಿಯೆ ಫಾಲೋ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *