ಕಲಬುರಗಿ: ರಾಜಕೀಯ ವಿಷಯದಲ್ಲಿ ನಡೆದ ಚರ್ಚೆಯ ವೇಳೆ ವ್ಯಕ್ತಿಯೋರ್ವನಿಗೆ ಚಾಕು ಇರಿದ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕೋಡ್ಲಾ ಗ್ರಾಮದಲ್ಲಿ ನಡೆದಿದೆ.
ಗುರುಲಿಂಗಪ್ಪ ಚಾಕು ಇರಿತಕ್ಕೊಳಗಾದ ವ್ಯಕ್ತಿಯಾಗಿದ್ದು, ಕೊಡ್ಲಾ ಗ್ರಾಮದ ನಿವಾಸಿ. ಗ್ರಾಮದ ಅಂಗಡಿಯೊಂದರ ಬಳಿ ಟೀ ಸೇವಿಸುತ್ತಾ ರಾಜಕೀಯ ವಿಷಯದಲ್ಲಿ ಚರ್ಚೆ ನಡೆಸಿದ್ದಾರೆ. ಈ ವೇಳೆ ಅದೇ ಗ್ರಾಮದ ವೆಂಕಟರೆಡ್ಡಿ ಎಂಬಾತ ಗುರುಲಿಂಗಪ್ಪ ಅವರ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ.

ಚಾಕು ಇರಿತದಿಂದ ಗಂಭೀರ ಗಾಯಗೊಂಡ ಗುರುಲಿಂಗಪ್ಪ ಅವರನ್ನು ಕೂಡಲೇ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆ ಸಂಬಂಧ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

