ಚಿಕ್ಕ ಗಿಣಿ ಮೂಗಿಗಾಗಿ ಕಾಲು ಕಳೆದುಕೊಂಡ 25ರ ಯುವತಿ

Public TV
2 Min Read
Nose

– ಶಸ್ತ್ರ ಚಿಕಿತ್ಸೆಯ ಬಳಿಕ ಕಪ್ಪು ಬಣ್ಣಕ್ಕೆ ತಿರುಗಿದ ಕಾಲುಗಳು
– 1 ಕೋಟಿ ಪರಿಹಾರ ಕೇಳಿದ ಯುವತಿ

ಇಸ್ತಾಂಬುಲ್: ತಾನು ಎಲ್ಲರಿಗೂ ಸೌಂದರ್ಯವಾಗಿ ಕಾಣಬೇಕು ಅನ್ನೋದು ಪ್ರತಿ ಮಹಿಳೆಯ ಬಯಕೆ. ಸೌಂದರ್ಯ ಹೆಚ್ಚಿಸಿಕೊಳ್ಳಲು ಮೂಗಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ 25 ವರ್ಷದ ಯುವತಿ ತನ್ನ ಎರಡೂ ಕಾಲುಗಳನ್ನ ಕಳೆದುಕೊಂಡಿದ್ದಾಳೆ.

Nose Woman

ಸೇವಿಂಕ್ ಸ್ಕೆಕ್ಲಿಕ್ ಕಾಲು ಕಳೆದುಕೊಂಡ ಯುವತಿ. ಸೇವಿಂಕ್ ತನ್ನ ಮೂಗನ್ನ ಚಿಕ್ಕದಾಗಿ ಮಾಡಿಕೊಳ್ಳಲು ನಿರ್ಧರಿಸಿ ಇಸ್ತಾಂಬುಲ್ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಳು. ಮೇ 2, 2014ರಂದು ವೈದ್ಯರು ಎರಡು ಗಂಟೆ ನೋಸ್ ಡಿಡ್ಕಷನ್ ಸರ್ಜರಿ ಮಾಡಿದ್ದರು. ಸೇವಿಂಕ್ ಆಸೆಯಂತೆ ಆಕೆಯ ಮೂಗು ಚಿಕ್ಕದಾಗಿತ್ತು. ಸರ್ಜರಿವಾದ ವಾರದ ಬಳಿಕ ಸೇವಿಂಗ್ ಡಿಸ್ಚಾರ್ಜ್ ಆಗಿ ಮನೆ ಸೇರಿದ್ದಳು.

Nose woman 1

ಮನೆ ಸೇರಿದ ಬಳಿಕ ಸೇವಿಂಗ್ ಆರೋಗ್ಯ ಸುಧಾರಣೆ ಆಗಲಿಲ್ಲ. ಕೆಲ ದಿನಗಳ ಬಳಿಕ ವೈದ್ಯರನ್ನ ಸಂಪರ್ಕಿಸಿದಾಗ ಸರ್ಜರಿ ನಂತರ ಈ ರೀತಿಯ ಸಣ್ಣ ತೊಂದರೆಗಳು ಕಾಣಿಸಿಕೊಳ್ಳುವುದು ಸಹಜ ಅಂತ ಹೇಳಿದ್ದರು. ಮತ್ತೆ ಆರೋಗ್ಯದಲ್ಲಿ ಸುಧಾರಣೆ ಕಾಣದಿದ್ದಾಗ ಸೇವಿಂಕ್ ಆಸ್ಪತ್ರೆಗೆ ಹೋದಾಗ ಅಲ್ಲಿಯ ಎಲ್ಲ ಸಿಬ್ಬಂದಿಯನ್ನ ತೆಗೆದುಹಾಕಿ ಹೊಸಬರನ್ನ ನೇಮಕ ಮಾಡಲಾಗಿತ್ತು. ಸೇವಿಂಕ್ ಗೆ ಚಿಕಿತ್ಸೆ ನೀಡಿದ್ದ ಸಿಬ್ಬಂದಿಯನ್ನ ವಜಾ ಮಾಡಲಾಗಿತ್ತು.

Surgery

ಕಪ್ಪು ಬಣ್ಣಕ್ಕೆ ತಿರುಗಿದ ಮೊಣಕಾಲು: ದಿನದಿಂದ ದಿನಕ್ಕೆ ಸೇವಿಂಕ್ ಆರೋಗ್ಯ ಕ್ಷೀಣಿಸುತ್ತಾ ಹೋಗುತ್ತಿದ್ದರೂ ವೈದ್ಯರು ಮಾತ್ರ ಸಾಮಾನ್ಯ ಜ್ವರ ಅಂತನೇ ಹೇಳುತ್ತಿದ್ದರು. ಮುಂದೆ ಸೇವಿಂಕ್ ಮೊಣಕಾಲುಗಳು ಕಪ್ಪು ಬಣ್ಣಕ್ಕೆ ಬದಲಾಗಿದ್ದರಿಂದ ಭಯಗೊಂಡ ಆಕೆಯ ಅಣ್ಣ ಮತ್ತೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಳೆ. ಬ್ಲಸ್ ಪಾಯಿಸಿನಿಂಗ್ ಸಮಸ್ಯೆಯಿಂದಾಗಿ ವೈದ್ಯರು ಸೇವಿಂಕ್ ಎರಡು ಕಾಲುಗಳನ್ನ ಕತ್ತರಿಸಿದ್ದಾರೆ. ಆಕೆಯನ್ನ ಉಳಿಸಿಕೊಳ್ಳಲು ಬೇರೆ ಯಾವ ಮಾರ್ಗವೂ ಇರಲಿಲ್ಲ. ಹಾಗಾಗಿ ಆಕೆಯ ಕಾಲು ಕತ್ತರಿಸಲು ಅನುಮತಿ ನೀಡಲಾಯ್ತು ಎಂದು ಸೇವಿಂಕ್ ಸೋದರ ಹೇಳಿದ್ದಾನೆ.

Knee Pain

ಇದೀಗ ಸೇವಿಂಕ್ ಮೂಗಿನ ಶಸ್ತ್ರಚಿಕಿತ್ಸೆ ಮಾಡಿದ ಆಸ್ಪತ್ರೆ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸಿ ಒಂದು ಕೋಟಿ ರೂಪಾಯಿ ಪರಿಹಾರ ಕೇಳಿದ್ದಾಳೆ. ಆದ್ರೆ ಆಸ್ಪತ್ರೆ ಸಿಬ್ಬಂದಿ ತಾವು ನಡೆಸಿದ ಶಸ್ತ್ರಚಿಕಿತ್ಸೆಗೂ ಮತ್ತು ಬ್ಲಡ್ ಪಾಯಿಸಿನಿಂಗ್ ಸಮಸ್ಯೆಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಸದ್ಯ ನ್ಯಾಯಾಲಯ ವೈದ್ಯಕೀಯ ತಜ್ಞರ ಅಭಿಪ್ರಾಯ ಕೇಳಿದೆ.

Share This Article
Leave a Comment

Leave a Reply

Your email address will not be published. Required fields are marked *