– ಅಂಚೆ ಕಚೇರಿ ಸಿಬ್ಬಂದಿಯಿಂದ ಎಡವಟ್ಟು
ಲಕ್ನೋ: ಅಂಚೆ ಕಚೇರಿ ಬಿಡುಗಡೆಗೊಳಿಸಿದ ಅಂಚೆ ಇಲಾಖೆಯ ಚೀಟಿ(ಸ್ಟಾಂಪ್) ನಲ್ಲಿ ಭೂಗತ ಪಾತಕಿಗಳ ಚಿತ್ರ ಇರುವುದು ಉತ್ತರಪ್ರದೇಶದ ಕಾನ್ಪುರ ಮುಖ್ಯ ಅಂಚೆ ಕಚೇರಿಯಲ್ಲಿ ಕಂಡು ಬಂದಿದೆ.
ಕುಖ್ಯಾತ ಭೂಗತ ದೊರೆಗಳಾದ ಛೋಟಾ ರಾಜನ್ ಮತ್ತು ಮುನ್ನಾ ಭಜರಂಗಿ ಚಿತ್ರವಿರುವ 24 ಸ್ಟಾಂಪ್‍ಗಳನ್ನು ಬಿಡುಗಡೆ ಮಾಡಲಾಗಿದೆ.
ಮೈ ಸ್ಟಾಂಪ್ ಯೋಜನೆಯಡಿ ಇಂಡಿಯಾ ಪೋಸ್ಟ್‍ನ ಅಂಚೆ ಚೀಟಿಗಳ ವೈಯಕ್ತಿಕ ಹಾಳೆಗಳನ್ನು ಪಡೆಯಲು ಅವಕಾಶ ನೀಡುತ್ತದೆ. ಈ ಸ್ಟಾಂಪ್‍ಗಳನ್ನು ಬಿಡುಗಡೆ ಮಾಡುವಾಗ ಅಚಾತುರ್ಯವೊಂದು ನಡೆದಿರುವುದು ಇದೀಗ ಭಾರೀ ಸುದ್ದಿಯಲ್ಲಿದೆ.
ಅಂಚೆ ಚೀಟಿಗಳನ್ನು ಮಾಡುವಾಗ ಸಂಬಂಧಪಟ್ಟ ವ್ಯಕ್ತಿಗಳ ಗುರುತು ಪತ್ರವನ್ನು ಪಡೆದಿಲ್ಲ. ಅಲ್ಲದೇ ಅರ್ಜಿ ಸಲ್ಲಿಸಿದ ವ್ಯಕ್ತಿಗಳು ಯಾರು ಎಂದು ಗೊತ್ತಿಲ್ಲ. ಈ ಹಿನ್ನೆಲೆಯಲ್ಲಿ ಅಂಚೆ ಚೀಟಿ ಸಂಗ್ರಹಣ ವಿಭಾಗದ ಮುಖ್ಯಸ್ಥ ರಜನೀಶ್ ಕುಮಾರ್‍ನನ್ನು ಅಮಾನತುಗೊಳಿಸಲಾಗಿದೆ.
ಅಂಚೆ ಇಲಾಖೆ ಮೈ ಸ್ಟಾಂಪ್ ಯೋಜನೆಯಡಿ ವ್ಯಕ್ತಿಗಳು ತಮ್ಮ ಅಥವಾ ಕುಟುಂಬ ಸದಸ್ಯರು ಸ್ಟಾಂಪ್‍ಗಳನ್ನು ಹೊಂದಲು ಅವಕಾಶ ನೀಡಿದೆ.