ಮನಸ್ಸಿಗೆ ನೋವಾದಾಗ ಕೆಲವರು ಸಹಿಸಿಕೊಳ್ಳಲ್ಲ: ಅಪ್ಪಚ್ವು ರಂಜನ್

Public TV
1 Min Read
Appachchu

ಮಡಿಕೇರಿ: ಕೆಲವರು ವೀಕ್‍ಮೈಂಡ್ ಇರುತ್ತಾರೆ. ಮನಸ್ಸಿಗೆ ನೋವಾಗುವಂತ ಘಟನೆಗಳು ನಡೆದಾಗ ಸಹಿಸಿಕೊಳ್ಳುವುದಿಲ್ಲ. ಅದು ಧರ್ಮೇಗೌಡರ ವಿಷಯದಲ್ಲೂ ನಡೆದಿದೆ ಎಂದು ಮಡಿಕೇರಿ ಶಾಸಕ ಅಪ್ಪಚ್ವು ರಂಜನ್ ಬೇಸರ ವ್ಯಕ್ತಪಡಿಸಿದ್ದಾರೆ.

ಮಡಿಕೇರಿಯಲ್ಲಿ ಮಾತಾನಾಡಿದ ಅವರು ಉಪಸಭಾಪತಿ ಎಸ್.ಎಲ್.ಧರ್ಮೇಗೌಡರ ಆತ್ಮಹತ್ಯೆ ವೈಯಕ್ತಿಕವಾಗಿ ನೋವುಂಟು ಮಾಡಿದೆ. ಭಗವಂತ ಅವರ ಕುಟುಂಬಕ್ಕೆ ದುಖಃ ಸಹಿಸಿಕೊಳ್ಳುವ ಶಕ್ತಿಯನ್ನು ಕೊಡಲಿ. ಸಭಾಪತಿ ಪೀಠಕ್ಕಾಗಿ ಸದನದಲ್ಲಿ ಇತ್ತೀಚಿಗೆ ನಡೆದಿದ್ದಂತ ಘಟನೆಯಿಂದ ನೋವಾಗಿತ್ತು.

ಇನ್ಮುಂದೆ ಇಂತಹ ಘಟನೆಗಳು ಮರುಕಳಿಸಬಾರದು. ಸಭಾಪತಿ ಸ್ಥಾನದ ಬಗ್ಗೆ ಒಮ್ಮೆ ಅವಿಶ್ವಾಸ ನಿರ್ಣಯವಾದ ಮೇಲೆ ಆ ಪೀಠದಲ್ಲಿ ಪ್ರತಾಪ್ ಚಂದ್ರ ಶೆಟ್ಟಿ ಅವರು ಮುಂದುವರೆಯಬಾರದಿತ್ತು. ಹಿಂದೊಮ್ಮೆ ನಮ್ಮ ಪಕ್ಷದ ಸಭಾಪತಿಗೆ ಸ್ಥಾನಕ್ಕೆ ಅವಿಶ್ವಾಸ ಗೊತ್ತುವಳಿ ನಿರ್ಣಯವಾದ ತಕ್ಷಣದಲ್ಲೇ ಶಂಕರಮೂರ್ತಿ ಅವರು ಸ್ಥಾನವನ್ನು ತ್ಯಾಗ ಮಾಡಿದರು ಎಂದು ಕಾಂಗ್ರೆಸ್‍ನ ಪರಿಷತ್ ಸದಸ್ಯರನ್ನು ಕುಟುಕಿದರು.

Share This Article
Leave a Comment

Leave a Reply

Your email address will not be published. Required fields are marked *