45 ವರ್ಷ ಕನ್ನಡಿಗರನ್ನು ರಂಜಿಸಿದ ತಪ್ಪಿಗೆ ಈ ಶಿಕ್ಷೆನಾ?- ಜಗ್ಗೇಶ್

Public TV
2 Min Read
jaggesh

ಬೆಂಗಳೂರು: ಪ್ರತಿಯೊಂದು ವಿಷಯಗಳಿಗೂ ತನ್ನದೇ ಆಗಿರುವ ವಿಭಿನ್ನ ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸುವ ಜಗ್ಗೇಶ್, ವಿಷ್ಣುವರ್ಧನ್ ಪ್ರತಿಮೆ ಧ್ವಂಸ ಮಾಡಿರುವ ಕುರಿತಾಗಿ ಕಿಡಿಗೇಡಿಗಳ ಮನಸ್ಥಿತಿ ಕುರಿತಾಗಿ ಸಾಲು ಸಾಲು ಟ್ವೀಟ್ ಮಾಡುವ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ

ಕನ್ನಡದ ಮೆಚ್ಚುಗೆಯ ಮಗನನ್ನು ನೀವು ಅಪಮಾನಿಸಿದ್ದೀರಾ. ಎಂದು ಟ್ವಿಟ್ಟರ್ ಮೂಲಕವಾಗಿ ವಿಷ್ಣುವರ್ಧನ್ ಪತ್ರಿಮೆಯನ್ನು ಧ್ವಂಸಗೊಳಿಸಿದ ಕೀಡಿಗೇಡೆಗಳ ವಿರುದ್ಧ ನವರಸ ನಾಕ ಜಗ್ಗೇಶ್ ಟ್ವೀಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Vishnu 2

ಇಷ್ಟೇನಾ ಕನ್ನಡಕ್ಕೆ ದುಡಿದು ಕಣ್ಮರೆಯಾದ ಕಲಾವಿದರ ಹಣೆಬರಹ ತುಂಬ ದುಃಖವಾಯಿತು. ಎಲ್ಲಿ ಹೋಯಿತು ಚಪ್ಪಾಳೆ ಸದ್ದು? ಎಲ್ಲಿ ಹೋಯಿತು ಬದುಕಿದ್ದಾಗ ನೋಡಲು ನಿಂತ ಅಭಿಮಾನ? ಎಲ್ಲಿ ಹೋಯಿತು ಇವನಮ್ಮವ ಇವನಮ್ಮವ ಎಂದ ಮನಗಳು ಇದು ಕನ್ನಡಕ್ಕೆ ಮಾಡಿದ ಅವಮಾನ, ಒಳ್ಳೆಯ ಲಕ್ಷಣ ಅಲ್ಲ, ಬದಲಾಗಿ ಎಂದು ದುಃಖದಿಂದ ಜಗ್ಗೇಶ್ ಹೇಳಿದ್ದಾರೆ.

Vishnu 1

ಕನ್ನಡಿಗರನ್ನು 45 ವರ್ಷ ರಂಜಿಸಿದ ತಪ್ಪಿಗೆ ಈ ಶಿಕ್ಷೆನಾ? ಆತನ ಆತ್ಮ ಈ ರಾಕ್ಷಸಿ ಕೃತ್ಯ ಗಮನಿಸದೆ ಇರಬಹುದು, ಆದರೆ ನೆನಪಿಡಿ ರಕ್ಕಸರೇ ನೀವು ಅಪಮಾನಿಸಿದ್ದು, ನಿಮ್ಮ ರಂಜಿಸಿ ನಿರ್ಗಮಿಸಿದ ನಟನಲ್ಲ, ಬದಲಾಗಿ ನಿಮ್ಮ ಕನ್ನಡ ನೆಲದ ಮೆಚ್ಚಿನ ಮಗನನ್ನು. ನಿಮ್ಮ ತಂದೆ-ತಾಯಿವಂಶ ಮೆಚ್ಚಿದ ಆತ್ಮ ಅದು. ನಿಮ್ಮ ಕೃತ್ಯ ಯಾವ ದೇವರು ಕ್ಷಮಿಸನು ನತದೃಷ್ಟರೆ.! ಎಂದು ಟ್ವೀಟ್ ಮೂಲಕವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Vishhnuvardhan

ಯಾವುದೋ ಭಾಷೆ ನಟನ ವೈಭವಿಕರಿಸಿ ವಿಶಾಲಹೃದಯ ಎನ್ನುವವರೆ. ನಿಮ್ಮ ರಂಜಿಸಿ ಖುಷಿಪಡಿಸಿ ಸಂತನಂತೆ ಬಾಳಿ ನಿರ್ಗಮಿಸಿದ ಕಲಾಬಂಧು ಸತ್ತಮೇಲು ಕೊಂದು ಅಪಮಾನಿಸಿದ ಪಾಪಿಗಳಿಗೆ ತಕ್ಕ ಪಾಠಕಲಿಸಿ, ಕಲಾ ಬಂಧು ಶಿಲೆಯನ್ನ ಮರುಸ್ಥಾಪಿಸಿ ಗೌರವಿಸಿ ಕನ್ನಡತನದ ವಿಶಾಲಹೃದಯ ಪ್ರದರ್ಶಿಸಿ. ರಂಜಿಸಿ ಕಣ್ಮರೆಯಾದ ಕಲಾವಿದರಿಗೆ ಹೃದಯದಲ್ಲಿ ಜಾಗನೀಡಿ, ಅದು ಕನ್ನಡದ ಧರ್ಮ ಎಂದು ಜಗ್ಗೇಶ್ ವಿಷ್ಣುವರ್ಧನ್ ಸ್ಮಾರಕ ಧ್ವಂಸ ಕುರಿತಾಗಿ ಬೇಸರ ವ್ಯಕ್ತಪಡಿಸಿದ್ದಾರೆ.

Vishnuvardhan 1024x1024 15291

ನಟ ವಿಷ್ಣುವರ್ಧನ್ ಅವರ ಬೆಂಗಳೂರಿನ ಮಾಗಡಿ ರಸ್ತೆ ಬಳಿ ಇರುವ ಪ್ರತಿಮೆಯನ್ನು ಡಿ.25ರಂದು ಕಿಡಿಗೇಡಿಗಳು ಒಡೆದುಹಾಕಿದ್ದಾರೆ. ನಟ ದರ್ಶನ್, ಕಿಚ್ಚ ಸುದೀಪ್, ಅನಿರುದ್ಧ ಸೇರಿದಂತೆ ಅನೇಕರು ಈ ಬಗ್ಗೆ ಈಗಾಗಲೇ ಬೇಸರ ವ್ಯಕ್ತಪಡಿಸಿದ್ದಾರೆ. ನಟ ಜಗ್ಗೇಶ್ ಕೂಡ ವಿಷ್ಣುವರ್ಧನ್ ಅವರ ವ್ಯಕ್ತಿತ್ವವವನ್ನು ನೆನದಿದ್ದಾರೆ. ಕಿಡಿಗೇಡಿಗಳ ಮನಸ್ಥಿತಿಗಳ ಕುರಿತಾಗಿ ಬೇಸರವನ್ನು ಹೊರಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *