ಯುಕೆಯಿಂದ ಬೆಂಗಳೂರಿಗೆ ಬಂದ ಮೂವರಲ್ಲಿ ಸೋಂಕು

Public TV
1 Min Read
Corona

ಬೆಂಗಳೂರು: ಯುಕೆಯಲ್ಲಿ ಪತ್ತೆಯಾಗಿರುವ ಕೊರೊನಾ ರೂಪಾಂತರದ ಕುರಿತು ಭಯ ಶುರುವಾಗಿರುವಾಗಲೇ ಇಂಗ್ಲೆಂಡ್‍ನಿಂದ ಮರಳಿರುವ ಪ್ರಯಾಣಿಕರ ಪೈಕಿ ಮೂವರಲ್ಲಿ ಸೋಂಕು ಪತ್ತೆಯಾಗಿದೆ.

Corona Flight

ಯುಕೆಯಿಂದ ಬೆಂಗಳೂರಿಗೆ ಬಂದ ಮೂವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. 3 ಜನ ಸಹ ಮೂರು ವಲಯದವರಾಗಿದ್ದು, ಮಹಾದೇವಪುರ, ಬಿಬಿಎಂಪಿ ಪೂರ್ವ ವಲಯ ಹಾಗೂ ರಾಜರಾಜೇಶ್ವರಿ ನಗರದಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ. ಮಹದೇವಪುರದ 40 ವರ್ಷದ ವ್ಯಕ್ತಿ 5 ದಿನಗಳ ಹಿಂದೆ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಬೆಂಗಳೂರು ಪೂರ್ವ ವಲಯದವರು ಸಹ ಐದು ದಿನಗಳ ಹಿಂದೆ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಇನ್ನು ಬೆಂಗಳೂರು ಪಶ್ಚಿಮ ವಲಯದಲ್ಲಿ ಸಹ ಒಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ. ನಾಳೆ ಇವರ ಸ್ವಾಬ್ ನ್ನು ಜೆನೆಟಿಕ್ ಸೀಕ್ವೆನ್ಸ್ ಟೆಸ್ಟ್ ಗೆ ರವಾನೆ ಮಾಡಲಾಗುತ್ತದೆ.

airport corona covid 19

ಡಿಸೆಂಬರ್ 1ರಿಂದ ಡಿಸೆಂಬರ್ 21 ರವರೆಗೆ ಯುಕೆಯಿಂದ ಬೆಂಗಳೂರಿಗೆ ಬಂದವರ ಸಂಖ್ಯೆ 1,768 ಇದ್ದು. 1,489 ಜನ ಕೊರೊನಾ ಪರೀಕ್ಷೆ ಮಾಡಿಸಲು ಸಂಪರ್ಕಕ್ಕೆ ಸಿಕ್ಕಿದ್ದಾರೆ. ಇದರಲ್ಲಿ 902 ಜನರ ಕೋವಿಡ್ ಟೆಸ್ಟ್ ಆಗಿದೆ. ಇನ್ನು 587 ಜನರನ್ನು ಟೆಸ್ಟ್ ಗೆ ಒಳಪಡಿಸಬೇಕಿದೆ. 902 ರಲ್ಲಿ ಒಟ್ಟು 590 ಜನರ ಪರೀಕ್ಷಾ ವರದಿ ಲಭ್ಯವಾಗಿದೆ. 576 ಜನರಿಗೆ ನೆಗೆಟಿವ್, 14 ಜನರಿಗೆ ಪಾಸಿಟಿವ್ ಬಂದಿದೆ. ಪರಿಕ್ಷೆಗೆ ಒಳಪಟ್ಟು ಫಲಿತಾಂಶ ಬಾಕಿ ಇರುವವರ ಸಂಖ್ಯೆ 312 ಇದೆ.

COrona 3

ಬೆಂಗಳೂರಿನ ಒಟ್ಟು 14 ಜನ ಯುಕೆ ಯಿಂದ ವಾಪಸ್ ಆದವರಿಗೆ ಸೋಂಕು ತಗುಲಿದ್ದು, 220 ಜನ ಸಂಪರ್ಕಕ್ಕೆ ಸಿಗದೆ ನಾಪತ್ತೆ ಆಗಿದ್ದಾರೆ. 14 ಜನರಿಗೆ ಪಾಸಿಟಿವ್ ಬಂದಿರುವುದು ಒಂದೆಡೆಯಾದರೆ, ಇನ್ನೂ 220 ಜನ ಸಂಪರ್ಕಕ್ಕೆ ಸಿಗದಿರುವುದು ಆತಂಕಕ್ಕೀಡು ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *