ನವದೆಹಲಿ: ಇಂದು ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ 96 ನೇ ಜನ್ಮದಿನಾಚರಣೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಸೇರಿದಂತೆ ಗಣ್ಯರು ವಾಜಪೇಯಿ ಅವರಿಗೆ ಗೌರವ ಸಲ್ಲಿಸಿದರು.
Delhi: President Ram Nath Kovind pays tribute to former PM Atal Bihari Vajpayee at ‘Sadaiv Atal’ on his 96th birth anniversary pic.twitter.com/07Gn4HlbqQ
— ANI (@ANI) December 25, 2020
ದೆಹಲಿಯ ರಾಷ್ಟ್ರೀಯ ಸ್ಮøತಿ ಸ್ಥಳದ ಬಳಿ ನಿರ್ಮಾಣ ಮಾಡಿರುವ ಸದೈವ್ ಅಟಲ್ ಸ್ಮಾರಕಕ್ಕೆ ಮೋದಿ ಸಹಿತ ಗಣ್ಯರು ತೆರಳಿ ವಾಜಪೇಯಿ ಸಮಾಧಿಗೆ ಪೂಜೆ ಮಾಡಿ ಪುಷ್ಪ ನಮನ ಸಲ್ಲಿಸಿದರು. ವಾಜಪೇಯಿ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬಿಜೆಪಿ ರೈತರ ದಿನಾಚರಣೆಯನನು ಹಮ್ಮಿಕೊಂಡಿದೆ.
Delhi: Prime Minister Narendra Modi pays floral tribute to former PM Atal Bihari Vajpayee on his 96th birth anniversary pic.twitter.com/6dcJhfBWUL
— ANI (@ANI) December 25, 2020
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಧ್ಯಾಹ್ನ 12 ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದೇ ವೇಳೆ ಕರ್ನಾಟಕದ 58 ಲಕ್ಷ ರೈತರು ಸೇರಿದಂತೆ ದೇಶದ 9.50 ಕೋಟಿ ರೈತರ ಬ್ಯಾಂಕ್ ಖಾತೆಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ತಲಾ 2000 ರೂ, ಆನ್‍ಲೈನ್ ಮೂಲಕ ಜಮಾ ಮಾಡಲಿದ್ದಾರೆ.
Delhi: Union Ministers Amit Shah, Rajnath Singh, Nirmala Sitharaman and Piyush Goyal pay floral tribute at ‘Sadaiv Atal’ on former PM Atal Bihari Vajpayee's 96th birth anniversary pic.twitter.com/VobjnsDEkC
— ANI (@ANI) December 25, 2020
ದೀರ್ಘಕಾಲದ ಅನಾರೋಗ್ಯಂದಿಂದ ಬಳಲುತ್ತಿದ್ದ ವಾಜಪೇಯಿ ಅವರು 2018ರ ಆಗಸ್ಟ್ 16ರಂದು ದೆಹಲಿಯಲ್ಲಿ ಕೊನೆಯುಸಿರೆಳೆದಿದ್ದರು.