ಕೆಜಿಎಫ್ ಚಾಪ್ಟರ್-2 ಟೀಸರ್ ರಿಲೀಸ್‍ಗೆ ಮುಹೂರ್ತ ಫಿಕ್ಸ್

Public TV
1 Min Read
KGF Chapter 2 F

ಬೆಂಗಳೂರು: ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್-2 ಚಿತ್ರದ ಟೀಸರ್ ಜನವರಿ 8, 2021ರಂದು ಬೆಳಗ್ಗೆ 10.18ಕ್ಕೆ ಬಿಡುಗಡೆಯಾಗಲಿದೆ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ ಮೊದಲ ಭಾಗ ತೆರೆಕಂಡು ಇಂದಿಗೆ 2 ವರ್ಷ. ಆದ್ರೆ ಮೂರು ವರ್ಷವಾದ್ರು ಕಥೆಯ ತಾಜಾತನ ಅಭಿಮಾನಿಗಳ ಕಣ್ಮುಂದೆ ಇನ್ನು ಹಾಗೇ ಇದೆ. ಇನ್ನೂ ಎರಡನೇ ಭಾಗಕ್ಕಾಗಿ ಶಬರಿಯಂತೆ ಕಾಯುತ್ತಿರೋ ಅಭಿಮಾನಿಗಳಿಗೆ ಕೆಜಿಎಫ್ ಸೂತ್ರದಾರ ಪ್ರಶಾಂತ್ ನೀಲ್ ಸಿಹಿ ಸುದ್ದಿ ನೀಡಿದ್ದಾರೆ.

KGF Chapter 2 1

ಭಾನುವಾರ ಕೆಜಿಎಫ್ ಚಾಪ್ಟರ್ -2 ಚಿತ್ರೀಕರಣ ಮುಗಿದಿದ್ದು, ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಧಗಧಗಿಸುತ್ತಿವೆ. ಕ್ಲೈಮ್ಯಾಕ್ಸ್ ನಲ್ಲಿ ಅಧೀರ ಮತ್ತು ರಾಕಿಯ ಕಾಳಗ ಇರಲಿದೆ ಎಂಬುದನ್ನ ಪ್ರಶಾಂತ್ ನೀಲ್ ಟೀಂ ಕನ್ಫರ್ಮ್ ಮಾಡಿದೆ. ಕೆಜಿಎಫ್ ಕೊನೆ ಶೆಡ್ಯೂಲ್ ಮುಗಿಸಿದ ಟೀಂ ಜೊತೆಯಾಗಿ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನ ಡಿಓಪಿ ಭುವನ್ ಗೌಡ ಶೇರ್ ಮಾಡ್ಕೊಂಡಿದ್ರು.

KGF Chapter 2 2

ಕೆಲ ದಿನಗಳ ಹಿಂದೆ ಅಧೀರ ಮತ್ತು ರಾಕಿಯ ಕ್ಲೈಮ್ಯಾಕ್ಸ್ ದೃಶ್ಯದ ಚಿತ್ರೀಕರಣ ನಡೆಯುತ್ತಿರುವ ಬಗ್ಗೆ ಪ್ರಶಾಂತ್ ನೀಲ್ ಮಾಹಿತಿ ನೀಡಿದ್ದರು. ಇತ್ತೀಚೆಗೆ ಗುಣಮುಖರಾಗಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಸಂಜಯ್ ದತ್ ಡೂಪ್ ಸಹ ಬಳಸದೇ ಸಾಹಸ ದೃಶ್ಯಗಳಲ್ಲಿ ನಟಿಸಿದ್ದಾರೆ ಎಂದು ವರದಿ ಆಗಿತ್ತು.

KGF Chapter 2 1

ಅಂದುಕೊಂಡಂತೆ ಆಗಿದ್ರೆ ಈಗಾಗಲೇ ಕೆಜಿಎಫ್ ಇಡೀ ದೇಶದಾದ್ಯಂತ ಅಬ್ಬರಿಸುತ್ತಿತ್ತು. ಕೊರೊನಾದಿಂದ ಶೂಟಿಂಗ್ ಸ್ಥಗಿತಗೊಂಡ ಹಿನ್ನೆಲೆ ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ ಹೋಗುತ್ತಾ ಬಂದಿತ್ತು. ಇನ್ನು ಅಭಿಮಾನಿಗಳು ಸಿನಿಮಾ ಟೀಸರ್ ಬಿಡುಗಡೆ ಮಾಡಿ ಅಂತಾ ಟ್ವಿಟ್ಟರ್ ನಲ್ಲಿ ಒತ್ತಾಯಿಸಿದ್ದರು. ಇದೀಗ ಡಿಸೆಂಬರ್ 21, 2020, ಬೆಳಗ್ಗೆ 10.08 ನಿಮಿಷಕ್ಕೆ ಚಿತ್ರತಂಡದಿಂದ ಮಹತ್ವದ ಘೋಷಣೆ ಹೊರ ಬಿದ್ದಿದೆ.

https://twitter.com/prashanth_neel/status/1340879166258855936

Share This Article
Leave a Comment

Leave a Reply

Your email address will not be published. Required fields are marked *