– ಶಿಕ್ಷಕನ ವರ್ತನೆಗೆ ಬೇಸತ್ತ ವಿದ್ಯಾರ್ಥಿನಿಯರು
ಜೈಪುರ: ನನ್ನ ಜೊತೆ ಸೆಕ್ಸ್ ಮಾಡಿದ್ರೆ ನಾನು ಮಾರ್ಕ್ಸ್ ಕೊಡುತ್ತೇನೆ ಎಂದು ಶಾಲಾ ಶಿಕ್ಷಕನೊಬ್ಬ ವಿದ್ಯಾರ್ಥಿನಿಯರಿಗೆ ಹೇಳಿರುವ ಘಟನೆ ರಾಜಸ್ಥಾನದ ನೀಮ್ರಾನಾದಲ್ಲಿ ನಡೆದಿದೆ.
ಸರ್ಕಾರಿ ಶಾಲಾ ಶಿಕ್ಷಕ ಪ್ರಕಾಶ್ ಯಾದವ್(45) ಆರೋಪ ಎದುರಿಸುತ್ತಿರುವ ಶಿಕ್ಷಕನಾಗಿದ್ದಾನೆ. ಮೇಲಾಧಿಕಾರಿಗೆ ವಿದ್ಯಾರ್ಥಿನಿಯರು ಶಿಕ್ಷಕನ ಕುರಿತಾಗಿ ತಿಳಿಸಿದ್ದಾರೆ. ಇದೀಗ ಆರೋಪಿ ಶಿಕ್ಷಕ ಜೈಲು ಸೇರಿದ್ದಾನೆ.
ವಿದ್ಯಾರ್ಥಿನಿಯರ ಜೊತೆ ಅಸಭ್ಯರೀತಿಯಲ್ಲಿ ವರ್ತನೆ ಮಾಡುತ್ತಿದ್ದ. ಒಳ್ಳೆ ಅಂಕ ಬೇಕಾದರೆ ನನ್ನ ಜೊತೆ ದೈಹಿಕವಾಗಿ ಹೊಂದಿಕೊಳ್ಳಬೇಕು ಎಂದು ಹೇಳುತ್ತಿದ್ದನಂತೆ. ವಿದ್ಯಾರ್ಥಿನಿಯರು ಶಿಕ್ಷಕನ ವರ್ತನೆಯಿಂದ ಮನನೊಂದಿದ್ದರು.
ಒಂದು ದಿನ ಮೇಲಾಧಿಕಾರಿಗಳು ಶಾಲೆಯ ಮೇಲ್ವಿಚಾರಣೆಗೆ ಬಂದಾಗ ಶಿಕ್ಷಕನ ವರ್ತನೆಯ ಬಗ್ಗೆ ತಿಳಿಸಿದ್ದಾರೆ. ಶಿಕ್ಷಕರು ನಮ್ಮೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ. ದೈಹಿಕ ಸಂಪರ್ಕವನ್ನು ಮಾಡುವಂತೆ ನಮ್ಮ ಮೇಲೆ ಒತ್ತಡ ಹೇರುತ್ತಾರೆ. ನನ್ನೊಂದಿಗೆ ಸಹಕರಿಸಲಿಲ್ಲ ಎಂದರೆ ನಿಮಗೆ ಪರೀಕ್ಷೆಯಲ್ಲಿ ಕಡಿಮೆ ಅಂಕ ಕೊಡುತ್ತೇನೆ ಎಂದು ಬೆದರಿಕೆ ಹಾಕುತ್ತಾರೆ ಎಂದು ವಿದ್ಯಾರ್ಥಿನಿಯರು ಹೇಳಿದ್ದಾರೆ. ತಕ್ಷಣ ಎಚ್ಚರಿತುಕೊಂಡ ಮೇಲಾಧಿಕಾರಿ ಈ ವಿಷಯವನ್ನು ಶಿಕ್ಷಣ ಇಲಾಖೆಗೆ ತಿಳಿಸಿದ್ದಾರೆ. ಈಗ ಶಿಕ್ಷಕನ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿಕ್ಷಕನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.