– ಅಮ್ಮನಿಲ್ಲದೇ ಅನಾಥವಾದ ನಾಲ್ಕು ಮಕ್ಕಳು
– ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಸಾವು
ಪಾಟ್ನಾ: ಊಟಕ್ಕೆ ಮೀನು ಸಾಂಬಾರ್ ಕಡಿಮೆ ಆಗಿದ್ದಕ್ಕೆ ಗೃಹಿಣಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಿಹಾರದ ಭಾಗಲ್ಪುರದಲ್ಲಿ ನಡೆದಿದೆ. ಮನೆಗೆ ಮೀನು ತಂದಿದ್ದೇ ತಪ್ಪಾಯ್ತಾ ಎಂದು ಪತಿ ಕಣ್ಣೀರು ಹಾಕುತ್ತಿದ್ರೆ, ಅಮ್ಮನನ್ನ ಕಳೆದುಕೊಂಡ ನಾಲ್ಕು ಮಕ್ಕಳು ಅನಾಥವಾಗಿವೆ.
30 ವರ್ಷದ ಸಾರಾದೇವಿ ಆತ್ಮಹತ್ಯೆಗೆ ಶರಣಾದ ಮಹಿಳೆ. ಸಾರಾದೇವಿ ಪತಿ ಕುಂದನ್ ಮಂಡಲ್ ಬುಧವಾರ ಮಧ್ಯಾಹ್ನ 300 ರೂ. ನೀಡಿ ಮೀನು ತಂದಿದ್ದರು. ಆದ್ರೆ ಪತಿಗೆ ಮೀನು ಸಾಂಬಾರ್ ಕಡಿಮೆ ಆಗಿದ್ದರಿಂದ ನೊಂದ ಪತ್ನಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಬುಧವಾರ ಮೀನು ತಂದು ಪತ್ನಿಗೆ ನೀಡಿದೆ. ಆಕೆಯೂ ಸಹ ಚೆನ್ನಾಗಿ ಮೀನು ಸಾಂಬಾರ್ ಮಾಡಿ ಮಕ್ಕಳಿಗೆ ತಿನ್ನಿಸಿ ತಾನೂ ಊಟ ಮಾಡಿದ್ದಳು. ಆದ್ರೆ ನನಗೆ ಮೀನು ಸಾಂಬಾರ್ ಸ್ವಲ್ಪವೇ ಉಳಿದಿದ್ದಕ್ಕೆ ಆಕೆ ಬೇಸರಗೊಂಡಿದ್ದಳು. ಸ್ವಲ್ಪವೇ ಮೀನು ಸಾಂಬಾರ್ ಉಳಿದಿದೆ ನೀವು ಊಟ ಮಾಡಿ ಎಂದಳು. ಅದಕ್ಕೆ ಸಂಜೆ ಮತ್ತೆ ಮೀನು ತರೋಣ, ನೀನು ಊಟ ಮಾಡು ಅಂತ ಹೇಳಿ ಮನೆಯಿಂದ ಹೊರ ಬಂದೆ. ನನ್ನ ಮಾತುಗಳಿಂದ ಬೇಸರಗೊಂಡ ಸಾರಾ ವಿಷ ಸೇವಿಸಿದ್ದಾಳೆ ಎಂದು ಕುಂದನ್ ಮಂಡಲ್ ಹೇಳಿದ್ದಾರೆ. ಇದನ್ನೂ ಓದಿ: ನಿಶ್ಚಿತಾರ್ಥದಲ್ಲಿ Chicken Curry ಗಾಗಿ ಯುವಕನ ಕೊಲೆ
ಸಾರಾದೇವಿ ವಿಷ ಸೇವಿಸಿದ ಬಳಿಕ ಅಸ್ವಸ್ಥಗೊಂಡ ವಿಷಯ ನೆರೆಹೊರೆಯವರಿಗೆ ತಿಳಿದಿದೆ. ಕೂಡಲೇ ಕುಂದನ್ ಗೆ ವಿಷಯ ತಿಳಿಸಿ, ಮಹಿಳೆಯನ್ನ ಮಾಯಾಗಂಜ್ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಸಾರಾದೇವಿ ಸಾವನ್ನಪ್ಪಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮೀನೂಟಕ್ಕೆ ಕರೆಯದ ಚಿಕ್ಕಪ್ಪನನ್ನ ಕೊಂದ ಮಕ್ಕಳು