ಮಂಗಳೂರು: ಪ್ರತಿಭಟನೆ ಹೆಸರಿನಲ್ಲಿ ಸಿಎಫ್‍ಐ ಕಾರ್ಯಕರ್ತರು ದರ್ಪ ತೋರಿಸಿದ್ದು, ಪೊಲೀಸರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ಪುತ್ತೂರಿನಲ್ಲಿ ಘಟನೆ ನಡೆದಿದ್ದು, ಮಿನಿ ವಿಧಾನಸೌಧದ ಮುಂಭಾಗದಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸರಿಗೆ ಬೆದರಿಕೆ ಹಾಕಲಾಗಿದೆ. ಪ್ರತಿಭಟನೆ ಹೆಸರಿನಲ್ಲಿ ಪೊಲೀಸರ ಮೇಲೆ ದರ್ಪ ಪ್ರದರ್ಶನ ಮಾಡಿದ್ದಾರೆ. ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಮುಖಂಡ ಪೊಲೀಸರಿಗೆ ಬೆದರಿಕೆ ಹಾಕಿದ್ದು, ಶಾಸಕರ ಕಚೇರಿಗೆ ಮುತ್ತಿಗೆ ಹಾಗೂ ರಸ್ತೆ ತಡೆಗೆ ಸಿಎಫ್‍ಐ ಯತ್ನಿಸಿದೆ.
ಯಾವುದೇ ಅನುಮತಿ ಪಡೆಯದೆ ಸಿಎಫ್‍ಐ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗಿದ್ದು, ಈ ವೇಳೆ ಸಂಘಟನೆಯ ರಾಜ್ಯಾಧ್ಯಕ್ಷ ಫಯಾಝ್ ದೊಡ್ಡಮನೆ ಬೆದರಿಕೆ ಹಾಕಿದ್ದಾನೆ. ನಾನು ಯಾರು ಅಂತ ಗೊತ್ತಾ ಎಂದು ಕರ್ತವ್ಯನಿರತ ಅಧಿಕಾರಿಯನ್ನು ಏಕವಚನದಲ್ಲಿ ನಿಂದಿಸಿದ್ದಾನೆ. ಅಲ್ಲದೆ ನನ್ನನ್ನು ಪ್ರಶ್ನಿಸಿದರೆ ಮಾನವ ಹಕ್ಕಿನ ಉಲ್ಲಂಘನೆ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದಾನೆ. ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜಿಗೆ ಮಿಸಲಿಟ್ಟ ಜಾಗದಲ್ಲಿ ಸೀ ಫುಡ್ ಯೋಜನೆಗೆ ವಿರೋಧಿಸಿ ನಡೆಸಿದ ಪ್ರತಿಭಟನೆ ವೇಳೆ ಘಟನೆ ನಡೆದಿದೆ.