ಮೌಲ್ವಿಯನ್ನು ಮದುವೆಯಾದ ಬಿಗ್ ಬಾಸ್ ಸ್ಪರ್ಧಿ

Public TV
2 Min Read
sana khan

ನವದೆಹಲಿ: ಬಿಗ್ ಸ್ಪರ್ಧಿ, ಕಳೆದ ವರ್ಷ ಮನರಂಜನಾ ಲೋಕಕ್ಕೆ ಗುಡ್ ಬೈ ಹೇಳಿದ್ದ ಸನಾ ಖಾನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಗುಜರಾತ್ ಮೂಲದ ಮೌಲ್ವಿ ಅನಸ್ ಸಯೀದ್ ಅವರನ್ನು ವಿವಾಹವಾಗಿದ್ದಾರೆ.

ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡುವ ಮೂಲಕ ಈ ವಿಷಯವನ್ನು ತಿಳಿಸಿರುವ ಸನಾ ಖಾನ್, ದೇವರ ದಯೆಯಿಂದ ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸಿದ್ದೆವು. ಇದೀಗ ವಿವಾಹವಾಗಿದ್ದೇವೆ. ದೇವರು ನಮ್ಮಿಬ್ಬರನ್ನು ಒಗ್ಗಟ್ಟಾಗಿ ಇಡಲೆಂದು ಬೇಡಿಕೊಳ್ಳುತ್ತೇನೆ ಎಂದು ಬರೆದು, ಇಬ್ಬರ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಅವರು ಕೆಂಪು ಬಣ್ಣದ ಲೆಹಂಗಾ ತೊಟ್ಟು ಮಿಂಚಿದ್ದಾರೆ. ಅವರ ಪತಿ ಬಿಳಿ ಬಣ್ಣದ ಉಡುಗೆ ತೊಟ್ಟಿದ್ದಾರೆ.

ವಿವಾಹವಾಗುತ್ತಿದ್ದಂತೆ ಭಾನುವಾರ ಅವರ ಹಲವು ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ವೈರಲ್ ಆದ ವಿಡಿಯೋವೊಂದರಲ್ಲಿ ಇಬ್ಬರೂ ಬಿಳಿ ಬಣ್ಣದ ಉಡುಗೆಯಲ್ಲಿ ಮಿಂಚಿದ್ದರು. ಅಲ್ಲದೆ ಕೇಕ್ ಕತ್ತರಿಸುತ್ತಿರುವ ವಿಡಿಯೋಗಳು ಸಹ ವೈರಲ್ ಆಗಿದ್ದವು.

ಅಕ್ಟೋಬರ್ 8ರಂದು ಸನಾ ಖಾನ್ ಅವರು ಇನ್‍ಸ್ಟಾದಲ್ಲಿ ಪೋಸ್ಟ್ ಮಾಡುವ ಮೂಲಕ ಮನರಂಜನಾ ಜಗತ್ತನ್ನು ತೊರೆಯುವುದಾಗಿ ಘೋಷಿಸಿದ್ದರು. ನಾನು ಇಂದು ಘೋಷಿಸುತ್ತಿದ್ದೇನೆ, ಇಂದಿನಿಂದ ನಾನು ಮನರಂಜನಾ ಜಗತ್ತಿಗೆ ಗುಡ್ ಬೈ ಹೇಳುತ್ತಿದ್ದೇನೆ. ಇನ್ನು ಶಾಶ್ವತವಾಗಿ ಆ ರೀತಿಯ ಜೀವನಶೈಲಿಯಲ್ಲಿ ನಾನು ಇರುವುದಿಲ್ಲ. ನನ್ನ ಪೋಷಕರ ಆದೇಶವನ್ನು ಪಾಲಿಸುತ್ತ, ಮಾನವೀಯತೆಯ ಸೇವೆ ಮಾಡುತ್ತೇನೆ ಎಂದು ಬರೆದುಕೊಂಡಿದ್ದರು.

ಬಾಲಿವುಡ್‍ನ ಹಲವು ಸಿನಿಮಾಗಳಲ್ಲಿ ಸನಾ ಖಾನ್ ನಟಿಸಿದ್ದು, ಹಲ್ಲಾ ಬೋಲ್, ಜೈ ಹೋ, ವಜಾ ತುಮ್ ಹೋ ಹಾಗೂ ಟಾಯ್ಲೆಟ್: ಏಕ್ ಪ್ರೇಮ್ ಕಥಾ ಚಿತ್ರಗಳಲ್ಲಿ ನಟಿಸಿದ್ದಾರೆ. ಬಿಗ್ ಬಾಸ್ ಸೀಸನ್ 6ರಲ್ಲಿ ಕಾಣಿಸಿಕೊಳ್ಳುವ ಮೂಲಕ ಚಿರಪರಿಚಿತರಾಗಿದ್ದರು. ಬಿಗ್ ಬಾಸ್ ಸೇರಿ ಹಲವು ರಿಯಾಲಿಟಿ ಶೋಗಳಲ್ಲಿ ಸಹ ಅವರು ಭಾಗವಹಿಸಿದ್ದಾರೆ. ಕೆಲ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *